Film News

ಕದ್ದು ಮದುವೆಯಾದ್ರಾ ಕೆಜಿಎಫ್ ಬ್ಯೂಟಿ ಶ್ರೀನಿಧಿ, ಶಾಕ್ ಆದ ಅಭಿಮಾನಿಗಳು, ಆದ್ರೆ ಇಲ್ಲೋಂದಿದೆ ಟ್ವಿಸ್ಟ್ …..!

ಕೆಜಿಎಫ್ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದವರಲ್ಲಿ ನಟಿ ಶ್ರೀನಿಧಿ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ಕೆಜಿಎಫ್ ನಲ್ಲಿ ಕಾಣಿಸಿಕೊಂಡ ಸಣ್ಣ ಕಲಾವಿದರನ್ನೂ ಸಹ ಸ್ಟಾರ್‍ ಗಳನ್ನಾಗಿ ಮಾಡಿದ ಕೀರ್ತಿ ಕೆಜಿಎಫ್ ಚಿತ್ರತಂಡಕ್ಕೆ ಸಲ್ಲುತ್ತದೆ. ಕೆಜಿಎಫ್ ಸಿನೆಮಾದ ನಟಿ ಶ್ರೀನಿಧಿ ಶೆಟ್ಟಿ ಸಹ ಕೆಜಿಎಫ್ ಸಿನೆಮಾದಲ್ಲಿ ತುಂಬಾನೆ ಅದ್ಬುತವಾಗಿ ನಟಿಸಿದ್ದರು. ಇದೀಗ ಶ್ರೀನಿಧಿ ಮದುವೆಯಾಗಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಕೇಳಿಬರುತ್ತಿದೆ. ಅಷ್ಟಕ್ಕೂ ಶ್ರೀನಿಧಿ ನಿಜಕ್ಕೂ ಮದುವೆಯಾದ್ರಾ ಅದರಲ್ಲಿ ಸತ್ಯಾಂಶವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಇನ್ನೂ ನಟಿ ಶ್ರೀನಿಧಿ ಕೆಜಿಎಫ್ ಸಿನೆಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡರು. ಕೆಜಿಎಫ್ ಸಿನೆಮಾದಲ್ಲಿ ಆಕೆಯ ಪಾತ್ರ ಕಡಿಮೆಯಿದ್ದರೂ ಸಹ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು. ಆಕೆಗೆ ಸಿಕ್ಕ ದೃಶ್ಯಗಳ ಮೂಲಕವೇ ಅಭಿಮಾನಿಗಳನ್ನು ಆಕರ್ಷಣೆ ಮಾಡುವತ್ತ ಪರಿಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಒಂದೇ ಬಾರಿ ಸ್ಟಾರ್‍ ಸೆಲೆಬ್ರೆಟಿಗಳ ಸಾಲಿಗೆ ಸೇರಿಕೊಂಡರು. ಆದರೆ ಶ್ರೀನಿಧಿಗೆ ಬಳಿಕ ಸಕ್ಸಸ್ ಸಿಗಲಿಲ್ಲ. ತಮಿಳಿನ ಸ್ಟಾರ್‍ ನಟ ವಿಕ್ರಂ ಚಿಯಾನ್ ಜೊತೆಗೆ ಆಕೆ ಕೋಬ್ರಾ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಇದೀಗ ಆಕೆಗೆ ಅವಕಾಶಗಳೂ ಸಹ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಆಕೆ ಸೀಕ್ರೇಟ್ ಆಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಈ ಸುದ್ದಿ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ನಟಿ ಶ್ರೀನಿಧಿ ಸೀಕ್ರೇಟ್ ಆಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಯ ಜೊತೆಗೆ ಒಂದು ಪೊಟೋ ಸಹ ವೈರಲ್ ಆಗಿದೆ. ಆಕೆ ಯಾವಾಗ ಮದುವೆಯಾದರು ಎಂಬ ಸುದ್ದಿ ವೈರಲ್ ಆಗಿದೆ. ಇನ್ನೂ ಶ್ರೀನಿಧಿ ಹಣೆಗೆ ಕುಂಕುಮ ಹಚ್ಚಿಕೊಂಡು ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದರು. ಈ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಪೊಟೋ ಕಾರಣದಿಂದ ಶ್ರೀನಿಧಿ ಶೆಟ್ಟಿ ಯಾರಿಗೂ ತಿಳಿಯದೇ ಮದುವೆಯಾಗಿ ಬಿಟ್ಟಿದ್ದಾರೆ ಎಂಬ ಅನುಮಾನಗಳನ್ನು ಅನೇಕರು ಕಾಮೆಂಟ್ ಗಳ ಮೂಲಕ ಹೊರಹಾಕಿದ್ದರು. ಯಾರಿಗೂ ತಿಳಿಯದೇ ಕನಿಷ್ಟ ಒಂದು ಪೊಟೋ ಆಗಲಿ, ಪೋಸ್ಟ್ ಆಗಲಿ ಮಾಡದೇ ಶ್ರೀನಿಧಿ ಮದುವೆಯಾಗಿಬಿಟ್ಟರೇ ಎಂಬ ಕಾಮೆಂಟ್ ಗಳು ಹರಿದಾಡುತ್ತಿವೆ. ಇದೀಗ ಈ ಸುದ್ದಿಗೆ ಒಂದು ಟ್ವಿಸ್ಟ್ ಸಿಕ್ಕಿದೆ.

ಕರ್ನಾಟಕದ ಕೆಲವು ಭಾಗದಲ್ಲಿ ಯುಕ್ತ ವಯಸ್ಸಿನಲ್ಲಿರುವ ಹುಡುಗಿಯರು ಈ ರೀತಿಯ ಮದುವೆಗೂ ಮುಂಚೆ ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೊಂದು ಆಚಾರವಾಗಿದ್ದು, ಆ ಕಾರಣದಿಂದಲೇ ಶ್ರೀನಿಧಿ ಸಹ ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ಅಷ್ಟು ಮಾತ್ರಕ್ಕೆ ಮದುವೆಯಾಗಿದೆ ಅಲ್ಲ ಎಂದು ಕೆಲವರು ಈ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ.

Most Popular

To Top