Film News

ಏಜ್ ಜಸ್ಟ್ ನಂಬರ್ ಎಂಬ ಮಾತು ಮಲೈಕಾಳಿಂದ ಹುಟ್ಟಿಕೊಂಡಂತಿದೆ, ಆಕೆಯ ಯೋಗಾಸನಾ ವಿಡಿಯೋ ಸಖತ್ ವೈರಲ್….!

ಬಾಲಿವುಡ್ ಸಿನಿರಂಗದಲ್ಲಿ ಪ್ರತಿಭೆಗಿಂತ ಗ್ಲಾಮರ್‍ ಗೆ ಹೆಚ್ಚು ಪ್ರಧಾನ್ಯತೆ ಇರುತ್ತದೆ ಎಂದು ಹೇಳಬಹುದಾಗಿದೆ. ಆ ಕಾರಣದಿಂದಲೇ ಅನೇಕ ನಟಿಯರೂ ವಯಸ್ಸಾದರೂ ಸಹ ಗ್ಲಾಮರ್‍ ಮೂಲಕವೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಹಾಟ್ ಬಾಂಬ್ ಮಲೈಕಾ ಅರೋರಾ ಸಹ ಸೇರುತ್ತಾರೆ. ಮಲೈಕಾ 1973 ರಲ್ಲಿ ಜನಿಸಿದ ಮಲೈಕಾಗೆ ಇದೀಗ 50 ವರ್ಷ ಆಗಿದ್ದರೂ, ಆಕೆ ಹದಿಹರೆಯದ ಯುವತಿಯಂತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಯೋಗಾಸನಾ ಮಾಡುವ ವಿಡಿಯೋ ಹಂಚಿಕೊಂಡಿದ್ದು, ವೀಡಿಯೋ ನೋಡಿದ ಅನೇಕರು ಏಜ್ ಜಸ್ಟ್ ನಂಬರ್‍ ಎಂಬ ಮಾತು ಆಕೆಯಿಂದಲೇ ಬಂದಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

ಬಾಲಿವುಡ್ ಸಿನಿರಂಗದಲ್ಲಿ ಹಾಟ್ ಬಾಂಬ್ ಎಂದೇ ಮಲೈಕಾ ಅರೋರಾ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆಯ ಹಾಟ್ ನೆಸ್ ನೋಡಿ ಯಂಗ್ ಬ್ಯೂಟಿಯರೂ ಸಹ ಅಸೂಯೆ ಪಡುತ್ತಿರುತ್ತಾರೆ. ಐಟಂ ಸಾಂಗ್ ಗಳ ಮೂಲಕ ಸಿನಿರಂಗದಲ್ಲಿ ಸಖತ್ ಸದ್ದು ಮಾಡಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಪುಲ್ ಆಕ್ಟಿವ್ ಆಗಿರುತ್ತಾರೆ. 50 ರ ವಯಸ್ಸಿನ ಈಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದಾ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುತ್ತಾರೆ. ಅನೇಕ ಬಾರಿ ಆಕೆ ಜಿಮ್ ಬಳಿ ಕಾಣಿಸಿಕೊಂಡಿದ್ದ ಪೊಟೋಗಳೂ ಸಹ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಯೋಗಾಸನಾ ಮಾಡುತ್ತಾ ವಿಡಿಯೋ ಒಂದನ್ನು ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ನಟಿ ಮಲೈಕಾ ಅರೋರಾ ಫಿಟ್ ನೆಸ್ ಗೆ ತುಂಬಾನೆ ಪ್ರಧಾನ್ಯತೆ ಕೊಡುತ್ತಾರೆ. ಸದಾ ಜಿಮ್ ನಲ್ಲಿ ಕಸರತ್ತುಗಳನ್ನು ಮಾಡುತ್ತಿರುತ್ತಾರೆ ಅದರೇ ರೀತಿ ಆಕೆ ಒಂದಷ್ಟು ಸಮಯ ಯೋಗಾಸನ ಸಹ ಮಾಡುತ್ತಿರುತ್ತಾರೆ. ಜೊತೆಗೆ ಕಟ್ಟುನಿಟ್ಟಿನ ಆಹಾರ ಕ್ರಮ ಸಹ ಫಾಲೋ ಮಾಡುತ್ತಾರೆ. ಈ ಹಾದಿಯಲ್ಲೆ ಮಲೈಕಾ ತನ್ನ ಇನ್ಸ್ಟಾ ಖಾತೆಯಲ್ಲಿ ಯೋಗಾಸನ ಮಾಡುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೆ ಭಾರಿ ವೈರಲ್ ಆಗುತ್ತಿದೆ. ವಿವಿಧ ಯೋಗಾಸನಗಳನ್ನು ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಆಕೆಯ ದೇಹದ ಮೈಕಟ್ಟು ನೋಡಿದರೇ ಏಜ್ ಜಸ್ಟ್ ನಂಬರ್‍ ಮಾತ್ರ ಎಂಬ ಮಾತು ಆಕೆಯಿಂದ ಬಂದಿದೆಯೇ ಎಂಬಂತೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಮಲೈಕಾ ಅರೋರಾ ಸದ್ಯ ಸಿನೆಮಾಗಳಿಗಿಂತ ಕಿರುತರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನೆಮಾಗಳ, ರಿಯಾಲಿಟಿ ಶೋಗಳ ಜೊತೆಗೆ ಆಗಾಗ ಆಕೆ ವೈಯುಕ್ತಿಕ ಕಾರಣಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಆಕೆ ತನಗಿಂತ 12 ವರ್ಷ ಚಿಕ್ಕವನಾದ ಬಾಲಿವುಡ್ ನಟ ಅರ್ಜುನ್ ಕಪೂರ್‍ ಜೊತೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಅವರಿಬ್ಬರು ಬಹಿರಂಗವಾಗಿಯೇ ವೆಕೇಷನ್ ಗಳಿಗೆ ಹೋಗುತ್ತಿರುತ್ತಾರೆ. ಆ ಪೊಟೋ ಹಾಗೂ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

Most Popular

To Top