ನಟಿ ಶೋಭಿತಾ ಧೂಳಿಪಾಲಗೆ ಮದುವೆಗೂ ಮುಂಚೆ ತಾಯಿಯಾಗಬೇಕೆಂಬ ಕನಸಿದೆಯಂತೆ, ಅದಕ್ಕಾಗಿ ಕಾಯುತ್ತಿದ್ದೇನೆ ಎಂದ ನಟಿ….!

Follow Us :

ತೆಲುಗು ಮೂಲದ ನಟಿ ಶೋಭಿತಾ ಧೂಳಿಪಾಲ ತೆಲುಗು ಸಿನೆಮಾಗಳಿಗಿಂತ ಬಾಲಿವುಡ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಟಿಯಾಗಿದ್ದಾರೆ. ಬಾಲಿವುಡ್ ಸ್ಟಾರ್‍ ನಟ ನವಾಜುದ್ದೀನ್ ಸಿದ್ದೀಖಿ ರವರ ರಾಮನ್ ರಾಘವ 2.0 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಗೂಢಾಚಾರಿ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಸಿನೆಮಾಗಳ ಜೊತೆಗೆ ಈಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿರುಗಾಳಿ ಸೃಷ್ಟಿಸುತ್ತಿರುತ್ತಾರೆ. ಇದೀಗ ಆಕೆ ತಾಯಿಯಾಗಬೇಕೆಂಬ ಆಸೆಯಿದೆ, ಅದಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದು ಆಕೆಯ ಕಾಮೆಂಟ್ಸ್ ವೈರಲ್ ಆಗುತ್ತಿವೆ.

ಹಾಟ್ ನಟಿ ಶೋಭಿತಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ.  ಕೆಲವು ದಿನಗಳಿಂದ ಶೋಭಿತಾ ರವರ ಹೆಸರು ಮಿಡಿಯಾದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಇಬ್ಬರ ನಡುವೆ ಅಪೈರ್‍ ನಡೆಯುತ್ತಿದೆ ಎಂಬೆಲ್ಲಾ ರೂಮರ್‍ ಗಳು ಹರಿದಾಡುತ್ತಲೇ ಇದೆ. ಆದರೆ ಶೋಭಿತಾ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿಗೆ ತೆರೆಕಂಡ ದಿ ನೈಟ್ ಮ್ಯಾನೇಜರ್‍ ಎಂಬ ವೆಬ್ ಸಿರೀಸ್ ನಲ್ಲಿ ಆಕೆ ಬೆಡ್ ರೂಂ ದೃಶ್ಯಗಳಲ್ಲಿ ನಟಿಸಿ ಮತ್ತಷ್ಟು ಪಾಪ್ಯುಲಾರಿಟಿಯನ್ನು ಪಡೆದುಕೊಂಡರು. ಇದೀಗ ಆಕೆ ಕೆಲವೊಂದು ಕಾಮೆಂಟ್‌ ಗಳನ್ನು ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಶೋಭಿತಾ ಮದುವೆಗೂ ಮುಂಚೆ ಈ ರೀತಿಯ ಕಾಮೆಂಟ್ ಗಳನ್ನು ನೀಡಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ನನಗೆ ತಾಯಿಯಾಗಬೇಕೆಂಬ ಆಸೆಯಿದೆ ಎಂಬುದನ್ನು ಆಕೆ ಹೊರಹಾಕಿದ್ದಾರೆ. ಜೀವನ ಅನ್ನೊಂದು ಎರಡು ದಡ ಇರುವಂತಹ ನದಿಯಂತೆ. ಒಂದೇ ಕಡೆ ನಿಲ್ಲದೇ, ಒಂದು ದಡದಿಂದ ಮತ್ತೊಂದು ದಡಕ್ಕೆ ಸೇರಿಕೊಳ್ಳುತ್ತಿರಬೇಕು. ಜೀವನದಲ್ಲಿ ಏನೋ ಕಳೆದುಕೊಂಡಂತೆ ಇರಬಾರದು. ಆದರೂ ನಾನು ಸಹ ಕೆಲವೊಂದು ಸಾರಿ ಚಿಕ್ಕ ವಿಷಯವನ್ನು ತುಂಬಾ ಆಲೋಚನೆ ಮಾಡುತ್ತಿರುತ್ತೇನೆ. ಸದ್ಯ ನನ್ನ ಜೀವನದಲ್ಲಿ ಆಲೋಚನೆ ಮಾಡುತ್ತಿರುವುದು ಮಾತೃತ್ವ ಪಡೆಯಬೇಕೆಂಬುದು. ಆ ಬಯಕೆ ಯಾವಾಗ ನೆರವೇರುತ್ತೆ ಗೊತ್ತಿಲ್ಲ. ಅದು ಈಡೇರಿದಾಗ ತುಂಬಾ ಸಂತೋಷಪಡುತ್ತೇನೆ. ತಾಯ್ತನವನ್ನು ಸಂಪೂರ್ಣವಾಗಿ ಆನಂದಿಸುತ್ತೇನೆ. ಅಮ್ಮ ಎಂದು ಕರೆಸಿಕೊಳ್ಳುವುದು ಊಹೆಗೂ ನಿಲುಕದ ಮಧುರವಾದ ಅನುಭವ, ಅದಕ್ಕಾಗಿ ಎದರು ನೋಡುತ್ತಿದ್ದೇನೆ ಎಂದು ಆಕೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಶೋಭಿತಾ ಹಂಚಿಕೊಂಡ ಕಾಮೆಂಟ್ ಗಳೂ ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ವೈರಲ್ ಆಗುತ್ತಿವೆ. ನೆಟ್ಟಿಗರು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಶೋಭಿತಾ ಯಾರೋಂದಿಗಾದರೂ ರಿಲೇಷನ್ ಶಿಪ್ ನಲ್ಲಿದ್ದಾರೆಯೇ ಎಂಬ ಅನುಮಾನಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.