ಪುಷ್ಪಾ-2 ಸಿನೆಮಾದ ಮತ್ತೊಂದು ಕ್ರೇಜಿ ರೂಮರ್, ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ ನಟನೆ? ಪುಷ್ಪಾ ಮಗನಾಗಿ ಕಾಣಿಸಿಕೊಳ್ತಾರಾ?

Follow Us :

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಕೆರಿಯರ್‍ ನಲ್ಲಿ ಬಿಗೆಸ್ಟ್ ಹಿಟ್ ಪಡೆದುಕೊಂಡ ಪುಷ್ಪಾ ಸಿನೆಮಾದ ಮುಂದುವರೆದ ಭಾಗ ಅಂದರೇ ಪುಷ್ಪಾ-2 ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನೆಮಾದ ಬಗ್ಗೆ ಸದಾ ಒಂದಲ್ಲ ಒಂದು ಸುದ್ದಿ ಕೇಳಿ ಬರುತ್ತಲೇ ಇದೆ. ಇದೀಗ ಮತ್ತೊಂದು ಕ್ರೇಜಿ ರೂಮರ್‍ ಕೇಳಿಬರುತ್ತಿದ್ದು, ಅದರಂತೆ ಪುಷ್ಪಾ-2 ಸಿನೆಮಾದಲ್ಲಿ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ ಸಹ ನಟಿಸುತ್ತಿದ್ದಾರಂತೆ. ಪುಷ್ಪರಾಜ್ ಪುತ್ರನಾಗಿ ಅಲ್ಲು ಅಯಾನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ರೂಮರ್‍ ಭಾರಿ ವೈರಲ್ ಆಗುತ್ತಿದೆ.

ಪುಷ್ಪಾ ಸಿನೆಮಾದ ಮೂಲಕ ನಟ ಅಲ್ಲು ಅರ್ಜುನ್ ತೆಲುಗು ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇದೀಗ ಪುಷ್ಪಾ-2 ಸಿನೆಮಾದ ಮೇಲೂ ಭಾರಿ ನಿರೀಕ್ಷೆಯನ್ನು ಮೂಡಿಸಿದ್ದಾರೆ. ಪುಷ್ಪಾ ಸಿನೆಮಾದ ನಿರ್ದೇಶಕ ಸುಕುಮಾರ್‍ ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದಲ್ಲಿ ಆ ನಟರು-ನಟಿಯರು ನಟಿಸುತ್ತಿದ್ದಾರೆ ಎಂಬ ರೂಮರ್‍ ಗಳು ಕೇಳಿಬರುತ್ತಿವೆ. ಇದೀಗ ಮತ್ತೊಂದು ರೂಮರ್‍ ಸಹ ಕೇಳಿಬರುತ್ತಿದೆ. ಅದರಂತೆ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ ಸಹ ಪುಷ್ಪಾ 2 ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಸಮಂತಾ ಅಭಿನಯದ ಶಾಕುಂತಲಂ ಸಿನೆಮಾದಲ್ಲಿ ನಟಿಸಿದ್ದರು.

ಇದೀಗ ಅಲ್ಲು ಅಯಾನ್ ಪುಷ್ಪಾ-2 ಸಿನೆಮಾದಲ್ಲಿ ಪುಷ್ಪರಾಜ್ ಪುತ್ರನ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಬರ್ಲಿನ್ ಚಲನಚಿತ್ರೋತ್ಸವ ಭಾಗಿಯಾಗಿದ್ದ ನಟ ಅಲ್ಲು ಅರ್ಜುನ್ ಪುಷ್ಪಾ-3 ಸಹ ಇರಲಿದೆ ಎಂದು ಹೇಳಿದ್ದರು. ಒಂದು ವೇಳೆ ಅಲ್ಲು ಅಯಾನ್ ಪುಷ್ಪಾ-2 ರಲ್ಲಿ ನಟಿಸುವುದು ನಿಜವಾದರೇ ಪುಷ್ಪಾ-3 ರಲ್ಲಿ ಅಲ್ಲು ಅಯಾನ್ ಪಾತ್ರಕ್ಕೆ ತುಂಬಾನೆ ಪ್ರಾಮುಖ್ಯತೆ ಇರಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾಗಾಗಿ ಅಲ್ಲು ಅರ್ಜುನ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ಪುಷ್ಪಾ-2 ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದ್ದು, ಈ ಸಿನೆಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಪುಷ್ಪಾ ದಿ ರೂಲ್ ಸಿನೆಮಾ ಇದೇ ಆ.15 ರಂದು ತೆರೆಕಾಣಲಿದೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಸುಕುಮಾರ್‍ ರೈಟಿಂಗ್ಸ್ ನಿರ್ಮಿಸಿರುವ ಈ ಸಿನೆಮಾಗೆ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.