Film News

ಬುಟ್ಟಬೊಮ್ಮ ಹಾಡಿಗೆ ಸ್ಟೆಪ್ಸ್ ಹಾಕಿದ ಹಾಲಿವುಡ್ ಸ್ಟಾರ್ ಸಿಂಗರ್, ವೈರಲ್ ಆದ ವಿಡಿಯೋ…..!

ಟಾಲಿವುಡ್ ಸ್ಟಾರ್‍ ನಟ ಅಲ್ಲು ಅರ್ಜುನ್ ರವರ ಕ್ರೇಜ್ ಇಡೀ ವಿಶ್ವದಾದ್ಯಂತ ಪಸರಿಸಿದೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರೆಟಿಗಳೂ ಸಹ ಅವರಿಗೆ ಫ್ಯಾನ್ಸ್ ಆಗಿದ್ದಾರೆ. ಅಲ್ಲು ಅರ್ಜುನ್ ಮ್ಯಾನರಿಜಂ, ಅವರ ಸಿನೆಮಾಗಳ ಹಾಡುಗಳಿಗೆ ರೀಲ್ಸ್ ಮಾಡುತ್ತಾ ಅವರ ಮೇಲಿನ ಅಭಿಮಾನ ಪ್ರದರ್ಶನ ಮಾಡುತ್ತಿರುತ್ತಾರೆ. ವಿದೇಶಗಳ ಸ್ಟಾರ್‍ ಗಳೂ ಸಹ ಬನ್ನಿಯನ್ನು ಫಾಲೋ ಮಾಡುತ್ತಾರೆ. ಇದೀಗ ಹಾಲಿವುಡ್ ಸ್ಟಾರ್‍ ಸಿಂಗರ್‍ ಸಹ ಬನ್ನಿ ಹಾಡಿಗೆ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ವಿಶ್ವದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅಲಾ ವೈಕುಂಠಪುರಂಲೋ ಹಾಗೂ ಪುಷ್ಪಾ ಸಿನೆಮಾದ ಮೂಲಕ ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ. ಈ ಸಿನೆಮಾಗಳಲ್ಲಿ ಅಲ್ಲುಅರ್ಜುನ್ ರವರ ಮ್ಯಾನರಿಜಂ, ಹಾಡುಗಳು ವಿಶ್ವದಾದ್ಯಂತ ಪಸರಿಸಿತ್ತು. ಅದರಲ್ಲೂ ಪುಷ್ಪಾ ಸಿನೆಮಾ ಮಾತ್ರ ಮತಷ್ಟು ಸದ್ದು ಮಾಡಿತ್ತು. ಅಲಾವೈಕುಂಠಪುರಂಲೋ ಸಿನೆಮಾದ ಬುಟ್ಟ ಬೊಮ್ಮ ಹಾಡು ಇಂಟರ್‍ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡಿದೆ ಎಂದು ಹೇಳಬಹುದು. ಅನೇಕ ಸ್ಟಾರ್‍ ಗಳು ಈ ಹಾಡಿಗೆ ಸ್ಟೆಪ್ಸ್ ಸಹ ಹಾಕಿದ್ದಾರೆ. ಇದೀಗ ಹಾಲಿವುಡ್ ಸಿನಿರಂಗದ ಸ್ಟಾರ್‍ ಸಿಂಗರ್‍ ಒಬ್ಬರು ಬುಟ್ಟಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.

ಅಲಾ ವೈಕುಂಠಪುರಂಲೋ ಸಿನೆಮಾದ ಬುಟ್ಟಬೊಮ್ಮ ಹಾಡಿಗೆ ಹಾಲಿವುಡ್ ಪಾಪ್ ಸಿಂಗರ್‍ ಎಡ್ ಷಿರನ್ ಬುಟ್ಟಬೊಮ್ಮ ಹಾಡನ್ನು ಹಾಡಿದ ಸಿಂಗರ್‍ ಆರ್ಮಾನ್ ಮಾಲೀಕ್ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ಮೂಲಕ ಬುಟ್ಟಬೊಮ್ಮ ಸಾಂಗ್ ಮತ್ತೊಮ್ಮೆ ಟ್ರೆಂಡಿಂಗ್ ಆಗುತ್ತಿದೆ. ಇನ್ನೂ ಈ ಹಾಡು ವಿಶ್ವ ಮಟ್ಟದಲ್ಲಿ ಫೇಮಸ್ ಆಗಲು ಮುಖ್ಯ ಕಾರಣ ಆಸ್ಟ್ರೇಲಿಯನ್ ಕ್ರಿಕೆಟಿಗ ಡೇವಿಡ್ ವಾರ್ನರ್. ಈ ಹಾಡಿನ ಸ್ಟೆಪ್ಸ್ ಹಾಕಿ ವರ್ಲ್ಡ್ ವೈಡ್ ನಲ್ಲಿ ಪ್ರಮೋಟ್ ಮಾಡಿದ್ದರು. ಜೊತೆಗೆ ಇಂಟರ್‍ ನ್ಯಾಷನಲ್ ಕ್ರಿಕೆಟ್ ಗ್ರೌಂಡ್ ನಲ್ಲೂ ಸಹ ಇದೇ ಸ್ಟೆಪ್ಸ್ ಹಾಕಿದ್ದರು. ಇದೀಗ ಈ ಸಿನೆಮಾ ರಿಲೀಸ್ ಆಗಿ ನಾಲ್ಕು ವರ್ಷಗಳಾದರೂ ಆ ಹಾಡಿನ ಕ್ರೇಜ್ ಕಡಿಮೆಯಾಗಿಲ್ಲ ಎಂದೇ ಹೇಳಬಹುದಾಗಿದೆ.

ಅಷ್ಟೇಅಲ್ಲದೇ ಪುಷ್ಪಾ ಸಿನೆಮಾದ ಶ್ರೀವಲ್ಲಿ ಹಾಗು ಹಾಗೂ ಹೂ ಅಂಟಾವಾ ಮಾಮ ಹಾಡುಗಳೂ ಸಹ ಪ್ಯಾನ್ ವರ್ಲ್ಡ್ ರೇಂಜ್ ನಲ್ಲೇ ಸದ್ದು ಮಾಡುತ್ತಿದೆ. ಕೇವಲ ಸಿನೆಮಾ ಸೆಲಬ್ರೆಟಿಗಳು ಮಾತ್ರವಲ್ಲದೇ ದೇಶ-ವಿದೇಶಗಳ ಆಟಗಾರರೂ ಸಹ ಈ ಹಾಡುಗಳಿಗೆ ರೀಲ್ಸ್ ಮಾಡಿದ್ದರು. ಸದ್ಯ ಅಲ್ಲು ಅರ್ಜುನ್ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ವಿಶ್ವದಾದ್ಯಂತ ಈ ಸಿನೆಮಾ ಸದ್ದು ಮಾಡಲಿದೆ.

Most Popular

To Top