Film News

ಬಿಗ್ ಬಾಸ್ ತುಕಾಲಿ ಸಂತೋಷ್ ರವರ ಕಾರು ಅಪಘಾತ, ಕಾರು ತೆಗೆದುಕೊಂಡ ಎರಡನೇ ವಾರದಲ್ಲಿ ಅಪಘಾತ…..!

ಬಿಗ್ ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋನಲ್ಲಿ ಭಾರಿ ಸದ್ದು ಮಾಡಿದಂತಹ ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್ ರವರು ಸಹ ಒಬ್ಬರಾಗಿದ್ದಾರೆ. ಕಳೆದೆರಡು ವಾರಗಳ ಹಿಂದೆಯಷ್ಟೆ ಕಿಯಾ ಕಾರನ್ನು ಖರೀದಿಸಿದ್ದರು. ಕಾರು ತೆಗೆದುಕೊಂಡ ಎರಡೇ ವಾರಗಳಲ್ಲಿ ತುಕಾಲಿ ಸಂತೋಷ್ ರವರ ಕಾರು ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು, ಕಾರು ಹಾಗೂ ಆಟೋ ಜಖಂ ಆಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತುಕಾಲಿ ಸಂತೋಷ್ ರವರ ಕಾರು ಅಪಘಾತದ ಪೊಟೋಗಳು ವೈರಲ್ ಆಗುತ್ತಿದೆ.

ತುಕಾಲಿ ಸಂತೋಷ್ ರವರು ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಮಾರ್ಗದಲ್ಲಿ ತುಕಾಲಿ ಸಂತೋಷ್ ರವರು ಹೋಗುತ್ತಿದ್ದರು. ಇದೇ ವೇಳೆ ಕುಣಿಗಲ್ ನಿಂದ ಕುರುಡಿ ಹಳ್ಳಿಗೆ ಆಟೋ ಬರುತ್ತಿದ್ದು, ತುಕಾಲಿ ಸಂತೋಷ್ ರವರ ಕಾರಿನ ಬಲಗಡೆಗೆ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ಚಾಲಕನನ್ನು ಜಗದೀಶ್ ಎಂದು ಗುರ್ತಿಸಲಾಗಿದೆ. ಈ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನೂ ಆಟೋ ಚಾಲಕ ಮದ್ಯ ಸೇವಿಸಿದ್ದ ಎನ್ನಲಾಗಿದ್ದು, ಗಾಯಗೊಂಡಿರುವ ಜಗದೀಶ್ ಗೆ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಾರು ಅಪಘಾತದ ಸುದ್ದಿಯಿಂದ ಅಭಿಮಾನಿಗಳಿಗೆ ಬೇಸರ ವಾಗಿದೆ.

ತುಕಾಲಿ ಸಂತೋಷ್ ರವರು ಕಾಮಿಡಿ ಕಲಾವಿದರಾಗಿ ಕಿರುತೆರೆಯಲ್ಲಿ ರಂಜಿಸುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಭಾಗಿಯಾದ ತುಕಾಲಿ ಸಂತೋಷ್ ತುಂಬಾನೆ ಫೇಮಸ್ ಆದರು. ಈ ಶೋ ನಲ್ಲಿ ಪ್ರತಿನಿತ್ಯ ತುಕಾಲಿ ಸಂತೋಷ್ ರವರದ್ದೇ ಆಟ ಎಂದು ಹೇಳಬಹುದು. ಕೆಲವೊಂದು ಸಿನೆಮಾಗಳಲ್ಲೂ ಸಹ ತುಕಾಲಿ ಸಂತೋಷ್ ಭಾಗವಹಿಸಿದ್ದರು. ಒಂದು ಸ್ವಂತ ಕಾರನ್ನು ಖರೀದಿಸುವ ಆಸೆಯನ್ನು ತುಕಾಲಿ ಸಂತೋಷ್ ರವರು ಬಿಗ್ ಬಾಸ್ ಶೋ ನಲ್ಲಿ ಹೇಳಿದ್ದರು. ಅವರು ಕಾರು ಖರೀದಿಸಿದ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಇದೀಗ ಅವರ ಕಾರು ಅಪಘಾತವಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

Most Popular

To Top