Film News

ಗ್ಲೋಬಲ್ ಸ್ಟಾರ್ ಚರಣ್ ಹುಟ್ಟುಹಬ್ಬಕ್ಕೆ ಮೆಗಾಸ್ಟಾರ್ ಚಿರು ಎಮೋಷನಲ್ ಪೋಸ್ಟ್, ವೈರಲ್ ಆದ ಪೋಸ್ಟ್….!

RRR ಸಿನೆಮಾದ ಮೂಲಕ ಗ್ಲೊಬಲ್ ಸ್ಟಾರ್‍ ಆದ ಮೆಗಾ ಕುಟುಂಬದ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ರವರ ಹುಟ್ಟುಹಬ್ಬ. ಮಾ.27 ರಂದು ರಾಮ್ ಚರಣ್ ಹುಟ್ಟುಹಬ್ಬವಾಗಿದ್ದು, 38ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ರಾಮ್ ಚರಣ್ ಜೀವನದಲ್ಲಿ ಬ್ಯಾಕ್ ಟು ಬ್ಯಾಕ್ ಸಂತಸದ ಸುದ್ದಿಗಳು ಬರುತ್ತಿವೆ. RRR ಸಿನೆಮಾಗೆ ಆಸ್ಕರ್‍ ಬರುವುದು, ಕಳೆದ ವರ್ಷ ತಾನು ತಂದೆಯಾಗುತ್ತಿರುವುದು ಸೇರಿದಂತೆ ಅನೇಕ ಸಂತಸದ ಸನ್ನಿವೇಶಗಳು ನಡೆಯುತ್ತಿವೆ. ಇದೀಗ ಮೆಗಾ ಪವರ್‍ ಸ್ಟಾರ್‍ ಚರಣ್ ಹುಟ್ಟುಹಬ್ಬವನ್ನು ಸಹ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಇನ್ನೂ ಚರಣ್ ತಂದೆ ಮೆಗಾಸ್ಟಾರ್‍ ಚಿರಂಜೀವಿ ಸಹ ಎಮೋಷನಲ್ ಪೋಸ್ಟ್ ಮಾಡಿದ್ದು, ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ನಟ ರಾಮ್ ಚರಣ್ 1985 ರ ಮಾರ್ಚ್ 27 ರಂದು ಚೆನೈನಲ್ಲಿ ಜನ್ಮ ತಾಳಿದರು. ಇಂದಿಗೆ ಅವರು 38ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ ಈ ಬಾರಿ ಚರಣ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತಿದೆ. ಮೆಗಾ ಕುಟುಂಬದೊಂದಿಗೆ ಅಭಿಮಾನಿಗಳೂ ಸಹ ದೊಡ್ಡ ಮಟ್ಟದಲ್ಲೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇನ್ನೂ ಸಿನೆಮಾ ಸ್ಟಾರ್‍ ಗಳೂ ಸೇರಿದಂತೆ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಮೆಗಾಸ್ಟಾರ್‍ ಚಿರಂಜೀವಿ ಸಹ ತನ್ನ ಮಗನ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಶುಭಾಷಯ ಕೋರಿದ್ದಾರೆ. ಟ್ವಿಟರ್‍ ಮೂಲಕ ವಿಶೇಷ ಪೋಸ್ಟ್ ಮಾಡಿದ್ದು, ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಟ್ವಿಟರ್‍ ಮೂಲಕ ಚರಣ್ ಗೆ ಶುಭಾಷಯ ಕೋರುತ್ತಾ ಚಿರಂಜೀವಿ ಪೋಸ್ಟ್ ಮಾಡಿದ್ದಾರೆ. ನಿನ್ನ ನೋಡಿ ನಾನು ತುಂಬಾ ಗರ್ವಪಡುತ್ತಿದ್ದೇನೆ. ನಿನಗೆ ಜನ್ಮ ದಿನದ ಶುಭಾಷಯಗಳು ಎಂದು ಶುಭ ಕೋರಿದ್ದಾರೆ. ಜೊತೆಗೆ ಪ್ರೀತಿಯಿಂದ ಚರಣ್ ಗೆ ಮುತ್ತಿಡುವ ಪೊಟೋ ಸಹ ಹಂಚಿಕೊಂಡಿದ್ದಾರೆ. ಇನ್ನೂ ಈ ಪೋಟೊ ನೋಡಿದ ಮೆಗಾ ಕುಟುಂಬದ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಇನ್ನೂ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಸಹ ಚರಣ್ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಶುಭ ಕೋರಿದ್ದಾರೆ. ಚರಣ್ ಚಿಕ್ಕಂದಿನ ಪೊಟೋ ಒಂದನ್ನು ಹಂಚಿಕೊಂಡ ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇನ್ನೂ ನಿನ್ನೆ ನಡೆದ ಚರಣ್ ಹುಟ್ಟುಹಬ್ಬದ ಸೆಲೆಬ್ರೇಷನ್ ಈವೆಂಟ್ ನಲ್ಲಿ ಚರಣ್ ರನ್ನು ನಾಗಬಾಬು ಮನಸಾರೆ ಹೊಗಳಿದ್ದಾರೆ.

ಇನ್ನೂRRR ಸಿನೆಮಾದ ಮೂಲಕ ಗ್ಲೊಬಲ್ ಸ್ಟಾರ್‍ ಆದ ಚರಣ್ ಗೆ ಸಿನಿರಂಗದ ಅನೇಕ ಸೆಲೆಬ್ರೆಟಿಗಳು ಶುಭಾಷಯಗಳನ್ನು ಕೋರುತ್ತಿದ್ದಾರೆ. ರಾಮ್ ಚರಣ್ RC15 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾಗೆ ಅಧಿಕೃತ ಟೈಟಲ್ ಸಹ ಘೋಷಣೆ ಮಾಡಿದ್ದಾರೆ. ಈ ಸಿನೆಮಾಗೆ ಗೇಮ್ ಚೇಂಜರ್‍ ಎಂಬ ಟೈಟಲ್ ಫೈನಲ್ ಮಾಡಿದ್ದಾರೆ. ಇನ್ನೂ ಈ ಟೈಟಲ್ ನೋಡಿದ ಅಭಿಮಾನಿಗಳು ಸಹ ಪುಲ್ ಖುಷಿಯಾಗಿದ್ದಾರೆ. ಸಿನೆಮಾದ ಮೇಲೆ ನೀರಿಕ್ಷೆ ಸಹ ಹೆಚ್ಚಾಗಿದೆ.

Most Popular

To Top