Film News

ಖ್ಯಾತ ಮಲಯಾಳಂ ನಟ ಇನ್ನೊಸೆಂಟ್ ನಿಧನ, ರಾಜಕೀಯ ಹಾಗೂ ಸಿನಿ ಗಣ್ಯರ ಸಂತಾಪ….!

ಮಲಯಾಳಂ ಸಿನಿರಂಗದ ಖ್ಯಾತ ನಟ ಹಾಗೂ ಮಾಜಿ ಲೋಕಸಭಾ ಸಂಸದ ಇನ್ನೊಸೆಂಟ್ ಥೆಕ್ಕೆತಲಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 75 ವರ್ಷ ವಯಸ್ಸಿನ ಇನ್ನೊಸೆಂಟ್ ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಕೊನೆಯ ಉಸಿರನ್ನೆಳೆದಿದ್ದಾರೆ. ಇನ್ನೊಸೆಂಟ್ ಮರಣದ ಸುದ್ದಿ ತಿಳಿದ ಕೂಡಲೇ ಅವರ ಅಭಿಮಾನಿಗಳೂ, ಸಿನಿಮಾ ಹಾಗೂ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ದಿವಂಗತ ಇನ್ನೊಸೆಂಟ್ ಅನಾರೋಗ್ಯದ ಕಾರಣದಿಂದ ಮಾ.3 ರಂದು ಕೊಚ್ಚಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ 10.30 ರ ಸಮಯದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ಇನ್ನೊಸೆಂಟ್ ಕೋವಿಡ್ ಗೆ ಗುರಿಯಾಗಿದ್ದರು. ಬಳಿಕ ಗುಣಮುಖರಾಗಿ ಇನ್ಫೆಕ್ಷನ್ ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳ ಜೊತೆಗೆ ಅಂಗಾಗಳ ವೈಫಲ್ಯ ಸಮಸ್ಯೆಗಳ ಕಾರಣದಿಂದ ಅವರು ಮೃತಪಟ್ಟಿದ್ದಾಗಿ ಆಸ್ಪತ್ರೆಯ ಮೂಲಗಳು ಪ್ರಕಟನೆಯಲ್ಲಿ ತಿಳಿಸಿದೆ. ಇನ್ನೂ ಇನ್ನೊಸೆಂಟ್ 2014-2019 ರ ಅವಧಿಯಲ್ಲಿ ಎಂಪಿಯಾಗಿದ್ದರು. ಕಳೆದ 2012 ರಲ್ಲಿ ಕ್ಯಾನ್ಸರ್‍ ವ್ಯಾಧಿಗೂ ಸಹ ಗುರಿಯಾಗಿದ್ದರು. ಮೂರು ವರ್ಷಗಳಲ್ಲಿ ಕ್ಯಾನ್ಸರ್‍ ತುಂಬಾ ಹೆಚ್ಚಾಗತ್ತು. ಬಳಿಕ ಕ್ಯಾನ್ಸರ್‍ ಜೊತೆಗೆ ಯುದ್ದ ಮಾಡುತ್ತಿರುವುದಾಗಿ ಲಾಫ್ಟರ್‍ ಇನ್ ದಿ ಕ್ಯಾನ್ಸರ್‍ ವಾರ್‍ ಎಂಬ ಪುಸ್ತಕದಲ್ಲಿ ಬರೆದಿದ್ದರು.

ದಿವಂಗತ ನಟ ಇನ್ನೊಸೆಂಟ್ ಕಳೆದ 1972 ರಲ್ಲಿ ಹಾಸ್ಯನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಅನೇಕ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನಟಿಸಿದ್ದರು. 2014 ರ ಬಳಿಕ ಆತ ಲೊಕಸಭಾ ಚುನಾವಣೆಯಲ್ಲಿ ತ್ರಿಸೂರ್‍ ಜಿಲ್ಲೆಯ ಚಲಕುಡಿ ಕ್ಷೇತ್ರದಿಂದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ ಅಭ್ಯರ್ಥಿಯಾಗಿ ಆಯ್ಕೆಯಾದರು. 2019 ರಲ್ಲಿ ಆತ ಸೋಲನ್ನು ಕಂಡುಕೊಂಡರು. ಕೊನೆಯದಾಗಿ ಅವರು ಪಚುವುಮ್ ಅತ್ಯುತವಿಲಕ್ಕುಮ್ ಸಿನೆಮಾದಲ್ಲಿ ನಟಿಸಿದ್ದರು. ಇನ್ನೂ ಕೆಲವೊಂದು ಸಿನೆಮಾಗಳಿಗೆ ಕಥೆಯನ್ನು ಸಹ ಬರೆದಿದ್ದಾರೆ. ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ಹಾಡುಗಳನ್ನು ಸಹ ಹಾಡಿದ್ದಾರೆ.

ಇನ್ನೂ ಇನ್ನೊಸೆಂಟ್ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ಜೊತೆಗೆ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನುಪಡೆದುಕೊಂಡಿದ್ದರು. ಇನ್ನೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇಶದ ಸಿನಿರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

Most Popular

To Top