Film News

ವಿಚ್ಚೇದನದ ರೂಮರ್ ಬಗ್ಗೆ ಎದುರಾದ ಪ್ರಶ್ನೆಗೆ ನಿಹಾರಿಕಾ ರಿಯಾಕ್ಷನ್ ಏನು ಗೊತ್ತಾ?

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಇದೀಗ ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಇದೀಗ ಆಕೆ ವೆಬ್ ಸಿರೀಸ್ ಗಳತ್ತ ಮುಖ ಮಾಡಿದ್ದಾರೆ. ಜೊತೆಗೆ ಆಕೆ ಪುಷ್ಪಾ-2 ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರವೊಂದರಲ್ಲಿ ಆಕೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಆಕೆ ವೈಯುಕ್ತಿಕ ಕಾರಣಗಳಿಂದಲೂ ಸಹ ಇತ್ತೀಚಿಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಆಕೆ ತನ್ನ ಪತಿ ಚೈತನ್ಯ ಜೊನ್ನಲಗಡ್ಡ ರಿಂದ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಕೇಳಿಬರುತ್ತಿದೆ. ಇದೀಗ ಆಕೆಗೆ ಈ ಸುದ್ದಿಯ ಬಗ್ಗೆ ಪ್ರಶ್ನೆಯೊಂದು ಎದುರಾಗಿದ್ದು ಅದಕ್ಕೆ ಆಕೆ ಏನು ಉತ್ತರಿಸಿದೇ ಮೌನ ವಹಿಸಿದ್ದಾರೆ.

ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ಹಾಗೂ ಆಕೆಯ ಪತಿ ಚೈತನ್ಯ ಜೊನ್ನಲಗಡ್ಡ ನಡುವೆ ವಿಬೇದಗಳು ಹುಟ್ಟಿಕೊಂಡಿದೆ. ಅವರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಗಳು ಪ್ರತಿನಿತ್ಯ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ನಿಹಾರಿಕಾ ಆಗಲಿ, ಚೈತನ್ಯ ಆಗಲಿ ಅವರ ಕುಟುಂಬದವರಾಗಲಿ ಈ ಬಗ್ಗೆ ಯಾವುದೇ ರೀತಿಯಲ್ಲೂ ರಿಯಾಕ್ಟ್ ಆಗುತ್ತಿಲ್ಲ. ಈ ಕಾರಣದಿಂದ ಇವೆಲ್ಲವೂ ಈಗಲೂ ಸಹ ಕೇವಲ ರೂಮರ್‍ ಗಳಾಗಿಯೆ ಹರಿದಾಡುತ್ತಿದೆ. ಜೊತೆಗೆ ರೂಮರ್‍ ಗಳು ಮಾತ್ರ ಹರಿದಾಡುವುದು ನಿಂತಿಲ್ಲ. ಈ ರೂಮರ್‍ ಶುರುವಾದ ಬಳಿಕ ನಿಹಾರಿಕಾ ಸೋಷಿಯಲ್ ಮಿಡಿಯಾದಲ್ಲಿ ಏನೇ ಪೋಸ್ಟ್ ಮಾಡಿದರೂ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿದೆ.  ಸದ್ಯ ನಿಹಾರಿಕಾ ಡೆಡ್ ಫಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಈ ಸಿರೀಸ್ ಪ್ರಮೋಷನ್ ಸಹ ನಡೆಯುತ್ತಿದೆ. ಈ ವೇಳೆ ಆಕೆಗೆ ವಿಚ್ಚೇದನದ ರೂಮರ್‍ ಬಗ್ಗೆ ಪ್ರಶ್ನೆ ಸಹ ಎದುರಾಗಿದೆ.

ಇನ್ನೂ ನಿಹಾರಿಕಾ ನಟಿಯಾಗಬೇಕೆಂಬ ಮಹದಾಸೆಯೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆ ನಟಿಸಿದ ಯಾವುದೇ ಸಿನೆಮಾಗಳೂ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಈ ಕಾರಣದಿಂದ ಆಕೆ ವೆಬ್ ಸಿರೀಸ್ ಗಳ ನಿರ್ಮಾಣದತ್ತ ಮುಖಮಾಡಿದರು. ಇನ್ನೂ ಸುಮಾರು ದಿನಗಳ ಬಳಿಕ ಆಕೆ ಮತ್ತೆ ನಟಿಯಾಗಿ ಕೆರಿಯರ್‍ ಆರಂಭಿಸಿದ್ದಾರೆ. ಇದೀಗ ಆಕೆ ಡೆಡ್ ಫಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿರೀಸ್ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಮತಷ್ಟು ಆಸಕ್ತಿ ಹೆಚ್ಚಿಸಿದೆ. ನಿಹಾರಿಕಾ ಈ ಸಿರೀಸ್ ನಲ್ಲಿ ಗಾಯತ್ರಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಸಿರೀಸ್ ಪ್ರಮೋಷನ್ ಕೆಲಸಗಳು ಸಹ ಭರದಿಂದ ಸಾಗುತ್ತಿವೆ. ಈ ವೇಳೆ ನಿಹಾರಿಕಾಗೆ ವೈಯುಕ್ತಿಕ ಜೀವನದ ಬಗ್ಗೆ ಕೆಲವೊಂದು ಪ್ರಶ್ನೆಗಳು ಎದುರಾಗಿದೆ. ಆದರೆ ನಿಹಾರಿಕಾ ಮಾತ್ರ ಈ ಪ್ರಶ್ನೆಗಳಿಗೆ ಉತ್ತರ ನೀಡಿಲಿಲ್ಲ. ವಿರೋಧ ಮಾಡಲೂ ಇಲ್ಲ, ಉತ್ತರ ಸಹ ನೀಡಲಿಲ್ಲ. ಆಕೆ ಈ ಪ್ರಶ್ನೆಗಳಿಗೆ ಉತ್ತರಿಸಿದೆ ಮೌನಕ್ಕೆ ಜಾರಿದ್ದಾರೆ.

ಇನ್ನೂ ನಿಹಾರಿಕಾ ಅಭಿನಯದ ಡೆಡ್ ಫಿಕ್ಸೆಲ್ಸ್ ಸಿರೀಸ್ ಇದೇ ಮೇ19 ರಂದು ಸ್ಟ್ರೀಮಿಂಗ್ ಆಗಲಿದೆ. ನಿಹಾರಿಕಾ ಇದೀಗ ಆಕೆ ನಟಿಯಾಗಬೇಕೆಂಬ ಮಹದಾಸೆಯನ್ನು ಈಡೆರಿಸಿಕೊಳ್ಳಲು ಮತ್ತೆ ಬಣ್ಣ ಹಚ್ಚಿದ್ದಾರೆ. ಇನ್ನೂ ಆಕೆ ಸಿನೆಮಾಗಳಲ್ಲಿ ಸಕ್ಸಸ್ ಸಾಧಿಸಬೇಕು ಎಂದು ಅಭಿಮಾನಿಗಳು ಸಹ ಕೋರುತ್ತಿದ್ದಾರೆ.

Most Popular

To Top