RRR-2 ಕುರಿತು ಸುಳಿವು ಕೊಟ್ಟ ನಿರ್ದೇಶಕ ರಾಜಮೌಳಿ, ಅದು ಸದ್ಯ ಸಸ್ಪೆನ್ಸ್ ಎಂದ ಸ್ಟಾರ್ ಡೈರೆಕ್ಟರ್….!

Follow Us :

ಇಡೀ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ ಭಾರತದ ಸಿನೆಮಾಗಳಲ್ಲಿ RRR ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೊಟ್ಯಂತರ ರೂಪಾಯಿಗಳು ಕಲೆಕ್ಷನ್ ಮಾಡಿದೆ. ಈ ಸಿನೆಮಾ ಬಿಡುಗಡೆಯಾಗಿ ವರ್ಷಗಳು ಕಳೆದರೂ ಸಹ ಇನ್ನೂ ಈ ಸಿನೆಮಾದ ಹವಾ ಕಡಿಮೆಯಾಗಿಲ್ಲ.  ಕೇವಲ ಭಾರತ ಮಾತ್ರವಲ್ಲದೇ ಈ ಸಿನೆಮಾ ವಿದೇಶಗಳಲ್ಲೂ ಸಹ ತುಂಬಾನೆ ಹವಾ ಕ್ರಿಯೇಟ್ ಮಾಡಿತ್ತು. ಇದೀಗ ಸಂದರ್ಶನವೊಂದರಲ್ಲಿ ರಾಜಮೌಳಿ ಭಾಗಿಯಾಗಿ RRR 2 ಸಿನೆಮಾದ ಬಗ್ಗೆ ಮಾತನಾಡಿದ್ದಾರೆ. ಅವರ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಇಡೀ ವಿಶ್ವದಲ್ಲೇ ದೊಡ್ಡ ಮಟ್ಟದಲ್ಲಿ ರೆಕಾರ್ಡ್‌ಗಳನ್ನು ಸೃಷ್ಟಿಸಿರುವ RRR ಸಿನೆಮಾದ ಮುಂದಿನ ಭಾಗದ ಬಗ್ಗೆ ನಿರ್ದೇಶಕ ರಾಜಮೌಳಿ ಮಾತನಾಡಿದ್ದಾರೆ. ಜಪಾನ್ ನಲ್ಲಿರುವ ರಾಜಮೌಳಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾ ಬಿಡುಗಡೆಯಾಗಿ ವರ್ಷಗಳು ಕಳೆದರೂ ಇನ್ನೂ ಈ ಸಿನೆಮಾದ ಕ್ರೇಜ್ ಮುಗಿದಿಲ್ಲ. ಜಪಾನ್ ನಲ್ಲಿ ಈ ಸಿನೆಮಾದ ಶೋ ಒಂದನನ್‌ಉ ಆಯೋಜನೆ ಮಾಡಲಾಗಿತ್ತು. ಈ ಸಮಯದಲ್ಲಿ ನಿರ್ದೇಶಕ ರಾಜಮೌಳಿಯವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. RRR-2 ಸಿನೆಮಾದ ಬಗ್ಗೆ ಸಹ ಕೇಳಿದ್ದು, ಅದಕ್ಕೆ ರಾಜಮೌಳಿ ವಿಭಿನ್ನವಾದ ಉತ್ತರವನ್ನು ಕೊಟ್ಟಿದ್ದಾರೆ. ಅವರ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಪಾನ್ ನಲ್ಲಿ ನಿರ್ದೇಶಕ ರಾಜಮೌಳಿ ಯವರಿಗೆ RRR 2 ಸಿನೆಮಾದ ಬಗ್ಗೆ ಪ್ರಶ್ನೆಯೊಂದು ಎದುರಾಗಿತ್ತು. ಅದಕ್ಕೆ ರಾಜಮೌಳಿ ಸಮಾಧಾನದಿಂದ ಉತ್ತರ ನೀಡಿದ್ದಾರೆ. RRR-2 ಸಿನೆಮಾ ಬರಲಿದೆ ಆದರೆ ಅದು ಸದ್ಯಕ್ಕೆ ಸಸ್ಪೆನ್ಸ್ ಎಂದು ಹೇಳುವ ಮೂಲಕ ಸುಳಿವು ಕೊಟ್ಟಿದ್ದಾರೆ. ಅವರ ಉತ್ತರದಿಂದ RRR ಅಭಿಮಾನಿಗಳಿಗೆ ಮತಷ್ಟು ಕುತೂಹಲ ಮೂಡಿದ ಎನ್ನಬಹುದಾಗಿದೆ. ಜೊತೆಗೆ ತಮ್ಮ ಮುಂದಿನ ಸಿನೆಮಾದ ಬಗ್ಗೆ ಸಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ರವರ ಜೊತೆಗೆ ನಾನು ಮುಂದಿನ ಸಿನೆಮಾ ಮಾಡುತ್ತಿದ್ದು, ಈ ಸಿನೆಮಾದ ಸ್ಕ್ರಿಪ್ಟ್ ಕೆಲಸ ಮುಗಸಿದ್ದೇವೆ. ಸಿನೆಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಕಾಸ್ಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಮಹೇಶ್ ಬಾಬು ರವರನ್ನು ಸಿನೆಮಾದ ಬಿಡುಗಡೆ ಸಮಯದಲ್ಲಿ ಇಲ್ಲಿಗೆ ಕರೆತಂದು ನಿಮಗೆಲ್ಲಾ ಪರಿಚಯಿಸುತ್ತೇನೆ ಎಂದಿದ್ದಾರೆ.

ಇನ್ನೂ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ ಈ ಸಿನೆಮಾ ಸುಮಾರು 20 ದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಜೊತೆಗೆ ಮಹೇಶ್ ಬಾಬು 8 ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಏಕೈಕ ಭಾರತೀಯ ಸಿನೆಮಾ ಇದಾಗಲಿದೆ ಎಂದು ಹೇಳಲಾಗುತ್ತಿದೆ.