News

ನನ್ನ ಸ್ಪರ್ಧೆ ಖಚಿತ, ವಿಜಯೇಂದ್ರ ರಾಜೀನಾಮೆ ನಿಶ್ಚಿತ ಎಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ…..!

ಸದ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತರಾದ ಅನೇಕರು ಬಿಜೆಪಿ ವಿರುದ್ದ ಕೋಪಗೊಂಡಿದ್ದಾರೆ. ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕೆ.ಎಸ್.ಈಶ್ವರಪ್ಪ ರವರು ಇದೀಗ ಬಿಜೆಪಿ ವಿರುದ್ದ ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ನನ್ನ ಸ್ಪರ್ಧೆ ಖಚಿತವಾಗಿದೆ, ಅದೇ ರೀತಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ರಾಜಿನಾಮೆ ನೀಡೋದು ನಿಶ್ಚಿತ ಎಂದು ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಪಕ್ಷದಿಂದ ತಮ್ಮ ಮಗನಿಗೆ ಟಿಕೆಟ್ ನೀಡದ ಕಾರಣ ಕೆ.ಎಸ್.ಈಶ್ವರಪ್ಪ ಇದೀಗ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಈ ಸಂಬಂಧ ತಮ್ಮ ಮನೆಯಲ್ಲಿ ಬೆಂಬಲಿಗರ ಸಭೆ ನಡೆಸಿ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ಈಶ್ವರಪ್ಪ ಸ್ಫರ್ಧೆ ಬಗ್ಗೆ ಇಡೀ ರಾಜ್ಯದಲ್ಲೇ ಚರ್ಚೆ ಆಗ್ತಾ ಇದೆ. ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಬಿ.ವೈ.ರಾಘವೇಂದ್ರ ರವರನ್ನು ಸೋಲಿಸಿ ಬಿಜೆಪಿ ಕಟ್ಟಾ ಅನುಯಾಯಿ ನನ್ನನ್ನು ಗೆಲ್ಲಿಸಿ. ಈ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಕಾರ್ಯಕರ್ತರ ಗೆಲುವು ಆಗುತ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದಿಂದ ಬಿ.ವೈ.ವಿಜಯೇಂದ್ರ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನೂ ಮುಂದಿನ ಜೂನ್ ನಲ್ಲಿ ಪರಿಷತ್ ಸ್ಥಾನ ಖಾಲಿಯಾಗಲಿದ್ದು, ನಿಮ್ಮ ಮಗನನ್ನು ಎಂ.ಎಲ್.ಸಿ ಮಾಡುತ್ತೇವೆ, ನಿಮಗೆ ರಾಜ್ಯಪಾಲರ ಹುದ್ದೆ ಕೊಡ್ತೀವಿ ಎಂದು ಬಿಜೆಪಿ ಹೈಕಮಾಂಡ್ ನನಗೆ ಆಫರ್‍ ಕೊಟ್ಟಿದೆ. ನನಗೆ ಯಾವುದೇ ಸ್ಥಾನಮಾನ ಮುಖ್ಯವಲ್ಲ. ಪಕ್ಷ ಉಳಿಯಬೇಕು, ಬಿ.ಎಸ್.ವೈ ಕುಟುಂಬದ ಸರ್ವಾಧಿಕಾರದಿಂದ ಮುಕ್ತವಾಗಬೇಕು ಎಂಬುದಷ್ಟೆ ಮುಖ್ಯ ಎಂದು ಗುಡುಗಿದ್ದಾರೆ. ಇನ್ನೂ ಶಿವಮೊಗ್ಗ ಲೊಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ನನಗೆ ಭಾರಿ ನಿರೀಕ್ಷೆ ಸಿಗುತ್ತಿದೆ. ಸ್ವಾಮೀಜಿಗಳೂ ಸಹ ಬೆಂಬಲ ಕೊಡುತ್ತಿದ್ದಾರೆ. ಸಿಂಗಧೂರು ಚೌಡೇಶ್ವರಿ ಆರ್ಶಿವಾಧ ಸಹ ನನೆಗೆ ದೊರೆತಿದೆ. ರಾಜ್ಯದಲ್ಲಿ ಈ ಬಾರಿ 28 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಬೇಕು. ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಗೆದ್ದು, ಬಳಿಕ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಎಂದಿದ್ದಾರೆ.

Most Popular

To Top