Film News

ನಿಮ್ಮ ಪತಿಯರು ಮೋದಿ ಎಂದರೇ ಅವರಿಗೆ ಊಟ ಹಾಕಬೇಡಿ ಎಂದು ಮಹಿಳೆಯರಿಗೆ ಸಲಹೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿ….!

ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆಯದ್ದೆ ಸುದ್ದಿ ಎಂದು ಹೇಳಬಹುದು. ದೇಶದಾದ್ಯಂತ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಭಾರಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇದೀಗ AAP ಪಕ್ಷವನ್ನು ಬೆಂಬಲಿಸುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಹಿಳಾ ಮತದಾರರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ನಿಮ್ಮ ಪತಿಯರು ಮೋದಿ ಜಪ ಮಾಡಿದರೇ ನೀವು ರಾತ್ರಿ ಅವರಿಗೆ ಊಟ ಹಾಕಬೇಡಿ ಎಂದು ಹೇಳಿದ್ದಾರೆ.

ನವದೆಹಲಿಯ ಟೌನ್ ಹಾಲ್ ನಲ್ಲಿ ನಡೆದ ಮಹಿಳಾ ಸನ್ಮಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅನೇಕ ಪುರುಷರು ನರೇಂದ್ರ ಮೋದಿಯವರ ಹೆಸರನ್ನು ಜಪಿಸುತ್ತಿರುತ್ತಾರೆ. ಆ ರೀತಿಯಾಗಿ ಜಪಿಸುವವರನ್ನು ನೀವೇ ಸರಿಪಡಿಸಬೇಕು. ನಿಮ್ಮ ಪತಿ ಮೋದಿಯವರ ಹೆಸರು ಜಪಿಸಿದರೇ ಅವರಿಗೆ ರಾತ್ರಿ ಊಟ ಹಾಕುವುದಿಲ್ಲ ಎಂದು ಹೇಳಿ ಎಂದು ಅವರು ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ AAP ಪಕ್ಷವನ್ನು ಬೆಂಬಲಿಸುವಂತೆ ತಮ್ಮ ಕುಟುಂಬ ಸದಸ್ಯರ ಮೇಲೆ ಪ್ರಮಾಣ ಮಾಡಿ ಹೇಳುವಂತೆ ಹಾಗೂ ಬಿಜೆಪಿಯನ್ನು ಬೆಂಬಲಿಸುವ ಮಹಿಳೆಯರಿಗೆ ನಿಮ್ಮ ಸಹೋದರ ಕೇಜ್ರಿವಾಲ್ ಮಾತ್ರ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾನೆ ಎಂಬುದನ್ನು ಹೇಳಿ ಎಂದು ಮನವಿ ಮಾಡಿದ್ದಾರೆ.

ಇನ್ನೂ ನಾನು ಅಧಿಕಾರಕ್ಕೆ ಬಂದ ಮೇಲೆ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಸದ್ಯ ಪ್ರತಿ ತಿಂಗಳು ಎಲ್ಲಾ ಮಹಿಳೆಯರಿಗೆ ಮಾಸಿಕ ಒಂದು ಸಾವಿರ ಹಣ ನೀಡುತ್ತಿದ್ದೇನೆ. ಬಿಜೆಪಿ ಮಹಿಳೆಯರಿಗೆ ಏನು ಮಾಡಿದೆ, ಅವರಿಗೆ ಯಾಕೆ ಮತ ಹಾಕಬೇಕು. ಈ ಭಾರಿ ಕೇಜ್ರಿವಾಲ್ ಗೆ ಮತ ಹಾಕಿ ಎಂದು ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ. ಕೆಲವು ಪಕ್ಷಗಳು ಮಹಿಳಾ ಸಬಲೀಕರಣ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಕೆಲವೊಂದು ಹುದ್ದೆಗಳನ್ನು ಮಾತ್ರ ನೀಡಿ ಮಹಿಳಾ ಸಬಲೀಕರಣ ಎಂದು ಹೇಳಿಕೊಳ್ಳುತ್ತಾರೆ. ಇದು ಕೆಲವೇ ಮಹಿಳೆಯರಿಗೆ ಸಿಗುತ್ತೆ, ಉಳಿದ ಮಹಿಳೆಯರಿಗೆ ಏನು ಅನುಕೂಲವಾಗಿದೆ ಎಂದು ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.

Most Popular

To Top