Film News

ರಹಸ್ಯವಾಗಿ ಮದುವೆಯಾದ್ರಾ ಸ್ಟಾರ್ ನಟಿ ಕೀರ್ತಿ ಸುರೇಶ್, ವೈರಲ್ ಆದ ಪೊಟೋ, ಅಸಲೀ ಸತ್ಯ ಏನು ಗೊತ್ತಾ?

ಸುಮಾರು ದಿನಗಳಿಂದ ಕೀರ್ತಿ ಸುರೇಶ್ ಮದುವೆಯ ಬಗ್ಗೆ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡ ಕೀರ್ತಿ ಸುರೇಶ್ ಮದುವೆಗೆ ಸಂಬಂಧಿಸಿದಂತೆ ಕೆಲವೊಂದು ಸುದ್ದಿಗಳು ಕೇಳಿಬರುತ್ತಿವೆ. ಆಕೆ ಬ್ಯುಸಿನೆಸ್ ಮ್ಯಾನ್ ಜೊತೆಗೆ, ಸ್ನೇಹಿತನ ಜೊತೆಗೆ ಮದುವೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಕೀರ್ತಿ ಸುರೇಶ್ ರಹಸ್ಯವಾಗಿ ಮದುವೆಯಾದ್ರಾ ಎಂಬ ರೂಮರ್‍ ಹರಿದಾಡುತ್ತಿದ್ದು, ಈ ಸಂಬಂಧ ಪೊಟೋ ಒಂದು ಸಹ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಪೊಟೋ ಹಿಂದಿನ ಸತ್ಯಾಂಶದ ವಿಚಾರಕ್ಕೆ ಬಂದರೇ,

ಸೌತ್ ಸಿನಿರಂಗದ ಸ್ಟಾರ್‍ ನಟಿ ಕೀರ್ತಿ ಸುರೇಶ್ ಮಹಾನಟಿ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡು ಬಳಿಕ ಆಕೆಯ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಂಡಿರಲಿಲ್ಲ. ಆದರೆ ಮಹೇಶ್ ಬಾಬು ರವರ ಸರ್ಕಾರು ವಾರಿ ಪಾಠ ಸಿನೆಮಾದ ಮೂಲಕ ಮತ್ತೆ ಸಕ್ಸಸ್ ಹಾದಿಯನ್ನು ಕಂಡುಕೊಂಡರು. ಬಳಿಕೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ಸಹ ಪಡೆದುಕೊಂಡರು. ಇತ್ತಿಚಿಗಷ್ಟೆ ಆಕೆ ದಸರಾ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಕೆರಿಯರ್‍ ಆರಂಭದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ವರುಣ್ ಧವನ್ ನಟಿಸುತ್ತಿರುವ ಬಾಬಿ ಜಾನ್ ಸಿನೆಮಾದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

ನಟಿ ಕೀರ್ತಿ ಸುರೇಶ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು, ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾರ ಬದಲಿಸಿಕೊಂಡಿರುವ ಪೊಟೋ ಹಂಚಿಕೊಂಡು ಆಕೆ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ರೂಮರ್‍ ಭಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಪೊಟೋ ಹಿಂದಿನ ಸತ್ಯಾಂಶ ಏನು ಎಂಬ ವಿಚಾರಕ್ಕೆ ಬಂದರೇ, ಕೀರ್ತಿ ಸುರೇಶ್ ಮದುವೆಯಾಗಿದ್ದಾರೆ ಎನ್ನಲಾದ ಪೊಟೋ ಭೈರವ ಎಂಬ ಸಿನೆಮಾದ ಮೂಹೂರ್ತದ ಸಮಯದಲ್ಲಿ ತೆಗೆದಂತಹ ಪೊಟೋ ಆಗಿದೆ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರೋ ಬೇಕಂತಲೇ ಈ ಪೊಟೋವನ್ನು ಹರಿಬಿಟ್ಟು ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.

Most Popular

To Top