Film News

ಡಿಸೈನರ್ ಲೆಹಂಗಾದಲ್ಲಿ ದೇವಲೋಕದ ಅಪ್ಸರೆಯಂತೆ ಕಾಣಿಸಿಕೊಂಡ ಚಾರ್ಲಿ ಬ್ಯೂಟಿ ಸಂಗೀತಾ ಶೃಂಗೇರಿ, ವೈರಲ್ ಆದ ಪೊಟೋಸ್…..!

ಕನ್ನಡ ಬ್ಲಾಕ್ ಬ್ಲಸ್ಟರ್‍ ಹಿಟ್ ಚಾರ್ಲಿ 777 ಸಿನೆಮಾದ ನಟಿ ಸಂಗೀತಾ ಶೃಂಗೇರಿ ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿದ್ದರು. ಫಿನಾಲೆ ಹಂತದ ವರೆಗೂ ಸಂಗೀತಾ ಬಿಗ್ ಬಾಸ್ ಮನೆಯಲ್ಲಿದ್ದು, ಆಕೆಯ ಆಟಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಸಿನೆಮಾಗಳು ಕಿರುತೆರೆಗಿಂತ ಆಕೆಗೆ ಬಿಗ್ ಬಾಸ್ ಮೂಲಕ ತುಂಬಾನೆ ಫೇಂ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲೂ ಹವಾ ಸೃಷ್ಟಿಸಿದ್ದು, ಇದೀಗ ಆಕೆ ಹಂಚಿಕೊಂಡ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಸ್ಯಾಂಡಲ್ ವುಡ್ ಸ್ಟಾರ್‍ ನಟ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನೆಮಾ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಸಂಗೀತಾ ಶೃಂಗೇರಿಗೂ ಒಳ್ಳೆಯ ಕ್ರೇಜ್ ದೊರೆತಿತ್ತು. ಕಳೆದ ಬಿಗ್ ಬಾಸ್ ಸೀಸನ್ 10 ರಲ್ಲಿ ಸಂಗೀತಾ ಸಹ ಸ್ಪರ್ಧಿಯಾಗಿದ್ದರು. ಸಂಗೀತಾ ಬಿಗ್ ಬಾಸ್ ಮನೆಯಲ್ಲಿ ತುಂಬಾನೆ ಚೆನ್ನಾಗಿ ಆಟವಾಡಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸಿದ್ದರು. ಬಿಗ್ ಬಾಸ್ ಮೂಲಕ ಆಕೆ ತುಂಬಾನೆ ಫೇಮಸ್ ಆದರು ಎಂದೂ ಹೇಳಬಹುದಾಗಿದೆ. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಹ ಜೋರನ್ನು ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೊಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಸಂಗೀತಾ ಶೃಂಗೇರಿ ಡಿಸೈನರ್‍ ಲೆಹಂಗಾದಲ್ಲಿ ದೇವಲೋಕದ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಪರ್ಪಲ್ ಬಣ್ಣದ ಲೆಹಂಗಾದಲ್ಲಿ ಆಕೆ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ಹೆವಿ ವರ್ಕ್ ಇರುವಂತಹ ಲೆಹಂಗಾ, ಬ್ಲೌಜ್, ಅದಕ್ಕೆ ಮ್ಯಾಚ್ ಆಗುವಂತಹ ಆಭರಣ ಧರಿಸಿ ಆಕೆ ಸುಂದರವಾಗಿ ಪೋಸ್ ಕೊಟ್ಟಿದ್ದಾರೆ. ಮಾದಕ ನೋಟ ಬೀರುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಈ ಪೊಟೋಗಳು ಹಂಚಿಕೊಂಡ ಕಡಿಮೆ ಸಮಯದಲ್ಲೇ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗಿ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಹಾರ್ಟ್ ಎಮೋಜಿಗಳು, ಲೈಕ್ ಗಳ ಜೊತೆಗೆ ಗಾರ್ಜಿಯಸ್, ಕ್ಯೂಟಿ, ಸೂಪರ್‍ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಸಂಗೀತಾ ಶೃಂಗೇರಿ ಹರ ಹರ ಮಹಾದೇವ್ ಎಂಬ ಸೀರಿಯಲ್ ಮೂಲಕ ಕನ್ನಡ ಕಿರುತೆರೆಯಲ್ಲಿ ಫೇಮಸ್ ಆದರು. ಬಳಿಕ ಆಕೆ 777 ಚಾರ್ಲಿ ಎಂಬ ಸಿನೆಮಾದ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರು. ಬಳಿಕ ಬಿಗ್ ಬಾಸ್ ಕನ್ನಡ ಸೀನ್ 10 ರಲ್ಲಿ 2ನೇ ರನ್ನರ್‍ ಅಪ್ ಆಗಿದ್ದರು.

Most Popular

To Top