News

CWRC ನಿಂದ ಕರ್ನಾಟಕಕ್ಕೆ ಶಾಕ್, 15 ದಿನ ಐದು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಸೂಚನೆ…..!

ಕಾವೇರಿ ನಿಯಂತ್ರಣ ಆಯೋಗ ಕರ್ನಾಟಕಕ್ಕೆ ಶಾಕ್ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವಂತೆ ಸೋಮವಾರ ಶಿಫಾರಸ್ಸು ಮಾಡಿದೆ. ಹದಿನೈದು ದಿನಗಳ ಕಾಲ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚನೆ ನೀಡಿದೆ. ಕಾವೇರಿ ನಿಯಂತ್ರಣ ಮಂಡಳಿ  ನಡೆಸಿದ ಸಭೆಯಲ್ಲಿ ಈ ಸೂಚನೆ ಕರ್ನಾಟಕಕ್ಕೆ ನೀಡಿದೆ.

ಈಗಾಗಲೇ ಪ್ರತಿನಿತ್ಯ ತಮಿಳುನಾಡಿಗೆ ಕಾವೇರಿ ನದಿಯಿಂದ 1900 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಸೋಮವಾರ ನಡೆದ ಸಭೆಯ ತೀರ್ಮಾನದಂತೆ ಇಂದಿನಿಂದ ಅಂದರೇ ಮಂಗಳವಾರದಿಂದ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕಾಗಿದೆ. ಅಂದರೇ ಹೆಚ್ಚುವರಿಯಾಗಿ 3100 ಕ್ಯೂಸೆಕ್ ನೀರನ್ನು ಹರಿಸಬೇಕಾಗಿದೆ. ಆದರೆ ಕರ್ನಾಟಕ ಕಾವೇರಿ ನಿಯಂತ್ರಣ ಆಯೋಗ ಸೂಚನೆಯನ್ನು ಒಪ್ಪದೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ಪ್ರಶ್ನೆ ಮಾಡಲು ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನೂ ಆ.28 ರಂದು ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸಮಾಲೋಚನಾ ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸೂಚನೆ ನೀಡಿತ್ತು. ಆದರೆ ಕರ್ನಾಟಕ ಸರ್ಕಾರ ಸದ್ಯದ ಪರಿಸ್ಥಿತಿಯ ಮೇರೆಗೆ ಮೂರು ಸಾವಿರ ಕ್ಯೂಸೆಕ್ ನೀರು ಬಿಡಬಹುದು ಅಷ್ಟೆ ಎಂದು ತಿಳಿಸಿದೆ. ಇನ್ನೂ ಇಂದು ಮದ್ಯಾಹ್ನದ ವೇಲೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವತಿಯಿಂದಲೂ ಸಭೆ ನಡೆಯಲಿದ್ದು. ಅಂತಿಮವಾಗಿ ತಮಿಳು ನಾಡಿಗೆ ಕರ್ನಾಟಕದ ಕಾವೇರಿಯಿಂದ ಎಷ್ಟು ನೀರು ಬಿಡಬಹುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

Most Popular

To Top