ಕೆಜಿಎಫ್ ಸಿನೆಮಾದ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯಿಲ್ಲ. ಕೆಜಿಎಫ್ ಸಿನೆಮಾದ ಮೂಲಕ ಇಡೀ ವಿಶ್ವಕ್ಕೆ ಕನ್ನಡಿಗರ ತಾಕತ್ತು ಅಂದರೇ ಕನ್ನಡ ಸಿನಿರಂಗದ ತಾಕತ್ತು ಏನು ಎಂಬುದು ತೋರಿಸಲಾಗಿದೆ. ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನು ಸಹ ಬ್ರೇಕ್ ಮಾಡಿದೆ. ಸದ್ಯ ಯಶ್ ರವರ ಮುಂದಿನ ಸಿನೆಮಾ ಅಪ್ಡೇಟ್ ಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದೇ ಮಾದರಿಯಲ್ಲಿ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಸಹ ಟಾಲಿವುಡ್ ಸಿನಿರಂಗವನ್ನು ಆಳುತ್ತಿದ್ದಾರೆ. ಬಹುತೇಕ ಎಲ್ಲಾ ಹಿರೋಗಳಿಗೂ ಆಕೆ ಮೊದಲ ಆಯ್ಕೆ ಆಗಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಆರು ಸಿನೆಮಾಗಳಿಗೂ ಹೆಚ್ಚಿವೆ.
ಇದೀಗ ಯಶ್ ಶ್ರೀಲೀಲಾಗೆ ಭಾವ ಆಗ್ಬೇಕಂತೆ ಅದು ಹೇಗೆ ಸಾಧ್ಯ ಎಂದು ಕೊಳ್ಳಬಹುದು. ಶ್ರೀಲೀಲಾ ಯಶ್ ರನ್ನು ಭಾವ ಎಂದು ಕರೆಯಲು ಒಂದು ಇಂಟ್ರಸ್ಟಿಂಗ್ ಸ್ಟೋರಿಯಿದೆ. ಶ್ರೀಲೀಲಾ ತಾಯಿ ಸ್ವರ್ಣಲತಾ ಬೆಂಗಳೂರಿನ ಖ್ಯಾತ ಗೈನಕಾಲಜಿಸ್ಟ್. ಅವರೇ ಯಶ್ ಪತ್ನಿ ರಾಧಿಕಾ ಪಂಡಿತ್ ರವರಿಗೆ ಎರಡು ಭಾರಿ ಹೆರಿಗೆ ಮಾಡಿಸಿದ್ರಂತೆ. ಆ ಸಮಯದಲ್ಲಿ ಶ್ರೀಲೀಲಾ ಹಾಗೂ ಯಶ್ ಕುಟುಂಬದ ನಡುವೆ ಸ್ನೇಹ ಬಾಂಧವ್ಯ ಬೆಳೆದಿದೆ. ಇನ್ನೂ ಆಸ್ಪತ್ರೆಯಲ್ಲಿದ್ದಾಗ ರಾಧಿಕಾ ರವರನ್ನು ಶ್ರೀಲೀಲಾ ಸದಾ ಭೇಟಿಯಾಗ್ತಾ ಇದ್ದರಂತೆ. ಆಗ ರಾಧಿಕಾ ರನ್ನು ಅಕ್ಕಾ ಎಂದು ಕರೆಯುತ್ತಿದ್ದರಂತೆ. ಆ ವರಸೆಯಲ್ಲಿ ಯಶ್ ರನ್ನು ಭಾವ ಎಂದು ಕರೆಯುತ್ತಾರಂತೆ. ಆದರೆ ಪ್ರವೈಟ್ ಆಗಿ ಮಾತ್ರ ಶ್ರೀಲೀಲಾ ಯಶ್ ರನ್ನು ಭಾವ ಎಂದು ಕರೆಯುತ್ತಾರಂತೆ. ಆ ಮಾದರಿಯಲ್ಲಿ ಶ್ರೀಲೀಲಾಗೆ ಯಶ್ ಭಾವ ಆಗಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಕೊರಿಯೋಗ್ರಾಫರ್ ಶೇಖರ್ ಮಾಸ್ಟರ್ ರವರಿಗೂ ಕ್ಷಮೆ ಕೋರಿ ಮೂರು ಪೇಜ್ ಗಳಷ್ಟು ಪತ್ರ ಬರೆದಿದ್ದರಂತೆ. ಸಿನೆಮಾ ಒಂದರ ಸಾಂಗ್ ಗಾಗಿ ಆಕೆ ಸುಮಾರು ಮೂವತ್ತು ಟೇಕ್ ತೆಗೆದುಕೊಂಡಿದ್ರಂತೆ. ಈ ಕಾರಣದಿಂದ ನೋವು ಪಟ್ಟುಕೊಂಡು ಶೇಖರ್ ಮಾಸ್ಟರ್ ರವರಿಗೆ ಮೂರು ಪುಟಗಳ ಪತ್ರ ಬರೆದಿದ್ದಾರಂತೆ. ಆದರೆ ಶೇಖರ್ ಮಾಸ್ಟರ್ ಅದರಲ್ಲಿ ನಿನ್ನ ತಪ್ಪೇನು ಇಲ್ಲ. ಅದು ಗ್ರೂಪ್ ಸಾಂಗ್ ಅವರೂ ಸಹ ಸರಿಯಾಗಿ ಮಾಡಬೇಖು ಅದಕ್ಕಾಗಿ ಅಷ್ಟು ಟೇಕ್ಸ್ ತೆಗೆದುಕೊಂಡೆವು ಎಂದು ಹೇಳಿದ್ದರಂತೆ. ಹೀಗೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಶ್ರೀಲೀಲಾ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಇನ್ನೂ ನಟಿ ಶ್ರೀಲೀಲಾ ಶೀಘ್ರದಲ್ಲೇ ಸ್ಕಂದ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾ ಇದೇ ಸೆ.15 ರಂದು ತೆರೆಗೆ ಬರಲಿದೆ. ತೆಲುಗು ನಟ ರಾಮ್ ಪೋತುನೇನಿ ಹಾಗೂ ಬೋಯಪಾಟಿ ಶ್ರೀನು ಕಾಂಬಿನೇಷನ್ ನಲ್ಲಿ ಈ ಸಿನೆಮಾ ತೆರೆಕಾಣಲಿದೆ. ಆಕ್ಷನ್ ಎಂಟರ್ ಟೈನರ್ ಆಗಿ ಈ ಸಿನೆಮಾ ಬಿಡುಗಡೆಯಾಗಲಿದೆ. ಈ ಸಿನೆಮಾದ ಜೊತೆಗೆ ಆಕೆ ಮತಷ್ಟು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.
