Film News

ಕ್ರೇಜಿ ಬ್ಯೂಟಿ ಶ್ರೀಲೀಲಾ ಸಂಚಲನಾತ್ಮಕ ನಿರ್ಣಯ, ಸಿನೆಮಾಗಳಿಗೆ ಬ್ರೇಕ್ ಕೊಟ್ಟ ನಟಿ, ಕಾರಣ ಏನು ಗೊತ್ತಾ?

ಕನ್ನಡ ಮೂಲದ ಯಂಗ್ ಬ್ಯೂಟಿ ಶ್ರೀಲೀಲಾ ಸದ್ಯ ತೆಲುಗು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇತ್ತೀಚಿಗೆ ತೆರೆಕಂಡ ಧಮಕಾ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಅನೇಕ ನಟಿಯರಿಗೆ ಪೈಪೋಟಿಯಾಗಿದ್ದಾರೆ. ಆದರೆ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಒಂದು ಸಿನಿವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತೆಲುಗು ಸಿನಿರಂಗಕ್ಕೆ ನಟಿ ಶ್ರೀಲೀಲಾ ಸುನಾಮಿಯಂತೆ ಎಂಟ್ರಿ ಕೊಟ್ಟರು ಎಂದೇ ಹೇಳಬಹುದು. ಎಂಟ್ರಿ ಕೊಟ್ಟ ಮೊದಲ ಸಿನೆಮಾ ಫ್ಲಾಪ್ ಆದರೂ ಸಹ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುವ ಮೂಲಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಕ್ರೇಜಿ ನಟಿಯಾಗಿದರು. ಜೊತೆಗೆ ಅನೇಕರ ನಟಿಯರಿಗೆ ಬಂದಂತಹ ಅವಕಾಶಗಳನ್ನು ಸಹ ಆಕೆ ತನ್ನ ತೆಕ್ಕೆಗೆ ಹಾಕಿಕೊಂಡರು ಎಂದೂ ಸಹ ಹೇಳಲಾಗುತ್ತಿದೆ. ಮೊದಲಿಗೆ ಒಳ್ಳೆಯ ಸಕ್ಸಸ್ ಕಂಡುಕೊಂಡ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಕಾಣುತ್ತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಶ್ರೀಲೀಲಾ ಹಾಗೂ ಮೃಣಾಲ್ ಠಾಕೂರ್‍ ಹವಾ ನಡೆಯುತ್ತಿದೆ ಎಂದು ಹೇಳಬಹುದಾಗಿದೆ. ಆದರೆ ಶ್ರೀಲೀಲಾ ಸಾಲು ಸಾಲು ಸೋಲುಗಳನ್ನು ಕಾಣುತ್ತಿರುವುದು ಕೃತಿ ಶೆಟ್ಟಿ ಕೆರಿಯರ್‍ ಮಾದರಿಯಲ್ಲಿ ಆಕೆ ಕೆರಿಯರ್‍ ಸಹ ಫೇಡ್ ಔಟ್ ಆಗುತ್ತಿದೆಯೇ ಎಂದು ಅನುಮಾನ ಸಹ ಮೂಡುತ್ತಿದೆ.

ಇನ್ನೂ ಶ್ರೀಲೀಲಾ ಕೈಯಲ್ಲಿ ಭಾರಿ ಪ್ರಾಜೆಕ್ಟ್ ಗಳಿವೆ. ಸೂಪರ್‍ ಸ್ಟಾರ್‍ ಮಹೇಶ್ ಬಾಬು ರವರ ಜೊತೆಗೆ ಗುಂಟೂರು ಖಾರಂ ಸಿನೆಮಾದಲ್ಲಿ ಆಕೆ ನಟಿಸುತ್ತಿದ್ದಾರೆ. ಪುಲ್ ಜೋಶ್ ನಲ್ಲಿರುವಂತಹ ಶ್ರೀಲೀಲಾ ಕೈಯಲ್ಲಿ ಮತಷ್ಟು ಕ್ರೇಜಿ ಸಿನೆಮಾಗಳೂ ಸಹ ಇದೆ. ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾ ಒಂದು ಸಕ್ಸಸ್ ಕಂಡರೂ ಸಾಕು ಆಕೆಯ ಸ್ಟೇಟಸ್ ಏರುತ್ತದೆ. ಆದರೆ ಇದೀಗ ಶ್ರೀಲೀಲಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ವೈರಲ್ ಆಗುತ್ತಿದೆ. ಕೆಲವು ದಿನಗಳ ಕಾಲ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣ ಸಹ ಇದೆ. ಶ್ರೀಲೀಲಾ ಸದ್ಯ ಎಂಬಿಬಿಎಸ್ ಓದುತ್ತಿದ್ದಾರೆ. ಓದುತ್ತಲೇ ಆಕೆ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ.

ಸದ್ಯ ಶ್ರೀಲೀಲಾಗೆ ಎಂಬಿಬಿಎಸ್ ಪರೀಕ್ಷೆಗಳಿರುವ ಕಾರಣದಿಂದ ಆಕೆ ಎಲ್ಲಾ ಸಿನೆಮಾಗಳಿಗೂ ಬ್ರೇಕ್ ಕೊಟ್ಟು ಓದಿನ ಮೇಲೆ ದೃಷ್ಟಿಯಿಟ್ಟಿದ್ದಾರಂತೆ. ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಆದರೆ ಈ ಸುದ್ದಿಯ ಬಗ್ಗೆ ಅಫೀಷಿಯಲ್ ಅನೌನ್ಸ್ ಮೆಂಟ್ ಇಲ್ಲದೇ ಇದ್ದರೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಭಾರಿ ಸದ್ದು ಮಾಡುತ್ತಿದೆ.

Most Popular

To Top