ನಾಗಚೈತನ್ಯಗೆ ಕೈಕೊಟ್ರಾ ಶೋಭಿತಾ? ಬೇರೊಬ್ಬ ಯುವಕನೊಂದಿಗೆ ಕಾಣಿಸಿಕೊಂಡ ಶೋಭಿತಾ….!

Follow Us :

ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಅನೇಕ ಬಾರಿ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೆಲವೊಂದು ಪೊಟೋಗಳೂ ಸಹ ವೈರಲ್ ಆಗಿತ್ತು. ಈ ಎಲ್ಲಾ ಕಾರಣದಿಂದ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಬಲವಾಗಿ ಕೇಳಿಬಂತು. ಆದರೆ ಇದೀಗ ಶೋಭಿತಾ ಬೇರೊಬ್ಬಯುವಕನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಬಿರುಕು ಮೂಡಿದೆಯೇ ಎಂಬ ಚರ್ಚೆ ಸೋಷಿಯಲ್ ಮಿಡಿಯಾದಲ್ಲಿ ನಡೆಯುತ್ತಿದೆ.

ನಟ ಅಕ್ಕಿನೇನಿ ನಾಗಚೈತನ್ಯ ಸಮಂತಾ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಶೋಭಿತಾ ಧೂಳಿಪಾಲ ಎಂಬ ನಟಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹುಟ್ಟಿಕೊಂಡಿತ್ತು. ಅವರಿಬ್ಬರೂ ನಿರಂತರವಾಗಿ ಭೇಟಿ ಆಗುತ್ತಿರುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಈ ಹಿಂದೆ ಶೋಭಿತಾ ಸಹ ಈ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದರು. ಆದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುತ್ತಲೇ ಇತ್ತು. ಜೊತೆಗೆ ಅಕ್ಕಿನೇನಿ ನಾಗಚೈತನ್ಯ ತಮ್ಮ ಹೊಸ ಮನೆಗೆ ಕರೆದುಕೊಂಡು ಹೋಗುತ್ತಿರುತ್ತಾರೆ ಎಂಬ ರೂಮರ್‍ ಸಹ ಇದೆ. ಈ ಬಗ್ಗೆ ಚೈತನ್ಯ ಟೀಂ ಸಹ ರಿಯಾಕ್ಟ್ ಆಗಿ ಎಲ್ಲವೂ ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದರು.

ಆದರೆ ನಾಗಚೈತನ್ಯ ಹಾಗೂ ಶೋಭಿತಾ ಇಬ್ಬರೂ ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎಂದು ಸಹ ಹೇಳಲಾಗಿತ್ತು. ಆದರೆ ಇದೀಗ ಶೋಭಿತಾ ಬೇರೆ ಯುವಕನೊಂದಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈನ ರೆಸ್ಟೋರೆಂಟ್ ನಿಂದ ಶೋಭಿತಾ ಯುವಕನೊಬ್ಬನ ಜೊತೆಯಿಂದ ಹೊರ ಬಂದಿದ್ದಾರೆ. ಈ ವೇಳೆ ಶೋಭಿತಾ ರನ್ನು ಕಂಡ ಕೂಡಲೇ ಪಾಪರಾಜಿಗಳು ಸುತ್ತುವರೆದಿದ್ದಾರೆ. ಈ ಕಾರಣದಿಂದ ಆಕೆ ಅಲ್ಲಿಂದ ಜೋರಾಗಿ ಹೋಗಿದ್ದಾರೆ. ಆ ಯುವಕ ಸಹ ಬೇರೆ ಕಾರಿನಲ್ಲಿ ಹೊರಟು ಹೋಗಿದ್ದಾರೆ. ಈ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಆ ಯುವಕ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕಾರಣದಿಂದ ನಾಗಚೈತನ್ಯ ಹಾಗೂ ಶೋಭಿತಾ ನಡುವೆ ಬ್ರೇಕಪ್ ಆಗಿದೆಯೇ ಎಂಬ ಅನುಮಾನಗಳು ಮೂಡಿದೆ ಎನ್ನಲಾಗಿದೆ.