ಕನ್ನಡ ಮೂಲದ ಯಂಗ್ ನಟಿ ಶ್ರೀಲೀಲಾ ಸದ್ಯ ತೆಲುಗು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇತ್ತೀಚಿಗೆ ತೆರೆಕಂಡ ಧಮಕಾ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಇದೀಗ ಬ್ಯಾಕ್ ಟು ಬ್ಯಾಕ್ ಆಫರ್ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ನಟಿ ಶ್ರೀಲೀಲಾ. ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಅನೇಕ ನಟಿಯರಿಗೆ ಪೈಪೋಟಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸದ್ದು ಮಾಡುತ್ತಿರುತ್ತಾರೆ.
ಇತ್ತೀಚಿಗೆ ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ. ಸದ್ಯ ಕನ್ನಡ ನಟಿ ಶ್ರೀಲೀಲಾ ಹೆಸರು ತೆಲುಗಿನಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಸ್ಟಾರ್ ನಟರ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸ್ಟಾರ್ ನಟಿಯರಿಗೆ ಪೈಪೋಟಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಆಕೆ ಕೊನೆಯದಾಗಿ ಧಮಾಕಾ ಎಂಬ ಸಿನೆಮಾದಲ್ಲಿ ಮಾಸ್ ಮಹಾರಾಜ ರವಿತೇಜ ಜೊತೆಗೆ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಗ್ಲಾಮರ್ ಹಾಗೂ ನಟನಗೆ ಅನೇಕರು ಫಿದಾ ಆಗಿದ್ದರು. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಹತ್ತಕ್ಕೂ ಹೆಚ್ಚು ಸಿನೆಮಾಗಳಿವೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ.
ಇನ್ನೂ ನಟಿ ಶ್ರೀಲೀಲಾ ಲೆಹಂಗಾ ದಲ್ಲಿ ಬ್ಯೂಟಿಪುಲ್ ಲುಕ್ಸ್ ಸ್ವಂತ ಮಾಡಿಕೊಂಡಿದ್ದಾರೆ. ಕ್ಲಾಸಿಯಾಗಿರುವ ಡಿಸೈನ್ ನಲ್ಲಿರುವ ಸಿಲ್ವರ್ ಕಲರ್ ಲೆಹಂಗಾ, ಪುಲ್ ಸ್ಲೀವ್ ಬ್ಲೌಜ್, ಟ್ರಾನ್ಸಫರೆಂಟ್ ದುಪ್ಪಟ್ಟದಲ್ಲಿ ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಡಿಷನಲ್ ವೇರ್ ನಲ್ಲೂ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಮತಷ್ಟು ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಮಾದಕ ನೋಟಕ್ಕೆ ಯುವಕರು ನಿದ್ದೆಗೆಡಿಸಿಕೊಂಡಿದ್ದಾರೆ. ಆಕೆಯ ಮತ್ತೇರಿಸುವ ಲುಕ್ಸ್, ಸೌಂದರ್ಯಕ್ಕೆ ಫಿದಾ ಆದ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.
ಇನ್ನೂ ಶ್ರೀಲೀಲಾ ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉಸ್ತಾದ್ ಭಗತ್ ಸಿಂಗ್, ಭಗವಂತ್ ಕೇಸರಿ, ಗುಂಟೂರು ಖಾರಂ, ಸ್ಕಂದ, ನಿತಿನ್32, ವಿಡಿ12, ಆದಿಕೇಶವ ಸೇರಿದಂತೆ ಹಲವು ತೆಲುಗು ಸಿನೆಮಾಗಳಲ್ಲಿ ಹಾಗೂ ಕನ್ನಡದಲ್ಲಿ ಜೂನಿಯರ್ ಎಂಬ ಸಿನೆಮಾದಲ್ಲೂ ಸಹ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಮತಷ್ಟು ಸಿನೆಮಾಗಳು ಚರ್ಚೆಯ ಹಂತದಲ್ಲಿವೆ ಎಂದೂ ಸಹ ಹೇಳಲಾಗುತ್ತಿದೆ. ಸದ್ಯ ಸೌತ್ ಸಿನಿರಂಗದ ಸ್ಟಾರ್ ನಟಿಯರಿಗೆ ಶ್ರೀಲೀಲಾ ಭಾರಿ ಪೈಪೋಟಿ ನೀಡುತ್ತಿದ್ದಾರೆ.
