News

ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ, ಆರೋಪಿಯ ಮನೆಗೆ ಬೆಂಕಿ ಹಚ್ಚಿ ಆಕ್ರೋಷ, ವೈರಲ್ ಆದ ವಿಡಿಯೋ….!

ಕಳೆದೆರಡು ದಿನಗಳ ಹಿಂದೆಯಷ್ಟೆ ಮಣಿಪುರದ ಗುಡ್ಡಗಾಡು ಪ್ರದೇಶದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಇದೀಗ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಅವಮಾನವೀಯ ಕೃತ್ಯದ ಬಗ್ಗೆ ಇಡೀ ದೇಶವೇ ಆಕ್ರೋಷ ಹೊರಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿನ ಪ್ರಮುಖ ಆರೋಪಿ ಹುಯಿರೆಮ್ ಹೆರದಾಸ್ ಸಿಂಗ್ ಎಂಬಾತನ ಮನೆಯನ್ನು ಬೆಂಕಿ ಹಾಕಿ ಸುಡುವು ಮೂಲಕ ಪ್ರತಿಭಟನಾಕಾರರ ಗುಂಪೊಂದು ಆಕ್ರೋಷ ಹೊರಹಾಕಿದ್ದಾರೆ.

ಮಣಿಪುರದ ಕಾಂಗ್‌ ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೇ.3 ರಂದು ಜಾತಿ ಹಿಂಸೆಯ ಘಟನೆಯೊಂದು ನಡೆದಿತ್ತು. ಆದರೆ ಅಲ್ಲಿ ಇಂಟರ್‍ ನೆಟ್ ನಿಷೇಧಿವಿದ್ದ ಕಾರಣ ಇದು ಹೊರಬಂದಿರಲಿಲ್ಲ. ಇದೀಗ ಇಂಟರ್‍ ನಿಷೇದವನ್ನು ತೆರೆವುಗೊಳಿಸಿದ ಹಿನ್ನೆಲೆಯಲ್ಲಿ ಕೆಲವೊಂದು ಭಯಾನಕ ದೃಶ್ಯಗಳು ಹೊರಬಂದು ವೈರಲ್ ಆಗಿದೆ. ಗುಡ್ಡಗಾಡು ಪ್ರದೇಶದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ಕಳೆದ ಬುಧವಾರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಈ ವಿಡಿಯೋ ಹೊರಬಂದ ಕೂಡಲೇ ಅನೇಕರು ದೇಶವ್ಯಾಪಿ ಆಕ್ರೋಷ ಹೊರಹಾಕಿದರು. ಜೊತೆಗೆ ಕೆಲವೊಂದು ಕಡೆ ಪ್ರತಿಭಟನೆಗಳನ್ನು ಸಹ ಹಮ್ಮಿಕೊಂಡಿದ್ದರು.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಮಣಿಪುರದ ತೌಬಲ್ ಜಿಲ್ಲೆಯ ನಾಂಗ್ ಪೋಕ್ ಸೆಕ್ಮೈ ಪೊಲೀಸರು ಸ್ವಯಂಪ್ರೇರಿತರಾಗಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಕೇಸ್ ಅಡಿಯಲ್ಲಿ ಪ್ರಕರಣ ಸಹ ದಾಲಿಸಿಕೊಂಡರು. ಜೊತೆಗೆ ಗುರುವಾರ ಸಂಜೆಯ ವೇಳೆಗೆ ನಾಲ್ಕು ಮಂದಿಯನ್ನು ಬಂಧಿಸಿದ್ದರು. ಆದರೂ ಸಹ ಪ್ರತಿಭಟನಾಕಾರರು ತಮ್ಮ ಆಕ್ರೋಷವನ್ನು ಕಡಿಮೆ ಮಾಡಿಕೊಂಡಿಲ್ಲ. ಶುಕ್ರವಾರವೂ ಸಹ ಪ್ರತಿಭಟನೆ ಹಿಂಸಾತ್ಮಕ ರೂಪವನ್ನು ತಾಳಿದೆ. ಇನ್ನೂ ಈ ವೇಳೆ ಆಕ್ರೋಷಗೊಂಡ ಪ್ರತಿಭಟನಾಕಾರರ ಗುಂಪೊಂದು ಈ ಘಟನೆಯ ಪ್ರಮುಖ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ವಿಡಿಯೋ ಸಹ ವೈರಲ್ ಆಗುತ್ತಿದೆ.

ಸುಮಾರು 77 ದಿನಗಳಿಂದ ಮಣಿಪುರದಲ್ಲಿನ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಮತೀಯ ಸಂಘರ್ಷದಿಂದ ಭಾರಿ ಗಲಬೆಗಳು ಸೃಷ್ಟಿಯಾಗುತ್ತಿವೆ. ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಘರ್ಷ ಹತ್ತಿಕ್ಕಲು ಸೇನೆ ಸಹ ಫೀಲ್ಡ್ ಗೆ ಇಳಿದಿದ್ದರೂ ಇನ್ನೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಿದೆ. ಇದೀಗ ಮಹಿಳೆಯರ ಬೆತ್ತಲೆ ಮೆರವಣಿಗೆ ವಿರುದ್ದ ಇಡೀ ದೇಶದಾದ್ಯಂತ ಆಕ್ರೋಷ ವ್ಯಕ್ತವಾಗುತ್ತಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಕೂಗು ಸಹ ಜೋರಾಗಿದೆ. ಜೊತೆಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ವಿಡಿಯೋ ಯಾರೂ ಶೇರ್‍ ಮಾಡದಂತೆ ಕೇಂದ್ರ ಸರ್ಕಾರ ಸಹ ಆದೇಶ ನೀಡಿದೆ ಎಂದು ತಿಳಿದು ಬಂದಿದೆ.

Most Popular

To Top