News

ಭೋಜ್ ಪುರಿ ನಟಿಯ ಮೇಲೆ ಇನ್ಸ್ಟಾಗ್ರಾಂ ಪರಿಚಯಸ್ತನಿಂದ ಅತ್ಯಾಚಾರದ ಆರೋಪ….!

ಸಿನೆಮಾಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಹೇಳಿ ದೆಹಲಿ ಮೂಲದ 24 ವರ್ಷದ ಉದಯೋನ್ಮುಖ ಭೋಜ್ ಪುರಿ ನಟಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಇನ್ಸ್ಟಾಗ್ರಾಂ ಪರಿಚಯಸ್ತ ತನಗೆ ಸಿನೆಮಾಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಹೇಳಿ ಗುರುಗ್ರಾಮ್ ಹೋಟೆಲ್ ಒಂದರಲ್ಲಿ ಅತ್ಯಾಚಾರ ನಡೆಸಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನಂತೆ.

ದೆಹಲಿ ಮೂಲದ 24 ವರ್ಷದ ಉದಯೋನ್ಮುಖ ಭೋಜ್ ಪುರಿ ನಟಿ ಯೊಬ್ಬರಿಗೆ ಸಿನೆಮಾಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಇನ್ಸ್ಟಾಗ್ರಾಂ ಸ್ನೇಹಿತನೊಬ್ಬ ಸಂದರ್ಶನಕ್ಕೆ ಎಂದು ಹೋಟೆಲ್ ಗೆ ಕರೆದಿದ್ದಾನೆ. ಮಹೇಶ್ ಪಾಂಡೆ ಎಂಬ ವ್ಯಕ್ತಿ ಆಕೆಗೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದನಂತೆ. ಕಳೆದ ಜೂನ್ 29 ರಂದು ಸಂದರ್ಶನಕ್ಕೆ ಕರೆದ ಆತ ಗುರುಗ್ರಾಮ್ ನಲ್ಲಿ ಹೋಟೆಲ್ ಒಂದಕ್ಕೆ ಕರೆದಿದ್ದಾನೆ. ಬಳಿಕ ಮಹೇಶ್ ಬುಕ್ ಮಾಡಿದ್ದ ಹೋಟೆಲ್ ಗೆ ಆಕೆಯನ್ನು ಕರೆದುಕೊಂಡು ಹೋಗಿದ್ದರಂತೆ. ಬಳಿಕ ಆತನ ಕೆಲವು ಪ್ರಶ್ನೆಗಳನ್ನು ಆಕೆಗೆ ಕೇಳಿದ್ದಾನೆ. ನಂತರ ಆತ ಕುಡಿಯಲು ಆರಂಭಿಸಿದ್ದನಂತೆ. ಇದಾದ ಬಳಿಕ ಆಕೆ ಹೋಟೆಲ್ ನಿಂದ ಹೊರಡಲು ಮುಂದಾದಾಗ ಆತ ಆಕೆಯನ್ನು ಹಿಡಿದುಕೊಂಡು ಬಲವಂತವಾಗಿ ಅತ್ಯಚಾರ ಮಾಡಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಈ ಕೃತ್ಯದ ಬಗ್ಗೆ ಬಹಿರಂಗ ಪಡಿಸಿದರೇ ಆರೋಪಿ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಸಹ ಒಡ್ಡಿದ್ದಾನಂತೆ ಜೊತೆಗೆ ಆತನ ಸ್ನೇಹಿತರೂ ಸಹ ಕರೆ ಮಾಡಿ ನನ್ನ ಖಾಸಗಿ ವಿಡಿಯೋಗಳನ್ನು ಇಂಟರ್‍ ನೆಟ್ ನಲ್ಲಿ ಹರಿಬಿಡುವುದಾಗಿ ಸಹ ಬೆದರಿಕೆ ಹಾಕಿದ್ದಾರಂತೆ. ಇನ್ನೂ ಆರೋಪಿ ಮಹೇಶ್ ಪಾಂಡೆ ಗುರುಗ್ರಾಮದ ಚಕರ್‍ ಪುರ ಪ್ರದೇಶದ ನಿವಾಸಿ ಎಂದು ಹೇಳಲಾಗುತ್ತಿದೆ. ಇನ್ನೂ ಮಹಿಳೆಯ ದೂರಿನ ಮೇರೆಗೆ ಉದ್ಯೋಗ ವಿಹಾರ್‍ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top