ಈ ಕ್ವಾಲಿಟಿಗಳು ನಿಮ್ಮಲ್ಲಿದ್ದರೇ ಶ್ರೀಲೀಲಾ ರವರನ್ನು ಮದುವೆಯಾಗಬಹುದು, ತಾನು ಮದುವೆಯಾಗುವ ವ್ಯಕ್ತಿಯಲ್ಲಿರಬೇಕಾದ ಕ್ವಾಲಿಟಿಗಳನ್ನು ತಿಳಿಸಿದ ನಟಿ…..!

Follow Us :

ಕಡಿಮೆ ಸಮಯದಲ್ಲೇ ಸ್ಟಾರ್‍ ಡಂ ಪಡೆದುಕೊಂಡ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಪವನ್ ಕಲ್ಯಾಣ್, ಬಾಲಕೃಷ್ಣ, ಮಹೇಶ್ ಬಾಬು, ರವರಂತಹ ಸ್ಟಾರ್‍ ನಟರ ಜೊತೆಗೆ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ವರ್ಷಗಳ ಗಟ್ಟಲೇ ತುಂಬಾನೆ ಶ್ರಮ ವಹಿಸಿದ ನಟಿಯರಿಗೆ ಒಲಿಯದಂತಹ ಇಮೇಜ್ ಶ್ರೀಲೀಲಾ ರವರಿಗೆ ಕಡಿಮೆ ಸಮಯದಲ್ಲೆ ದೊರೆಯಿತು ಎಂದು ಹೇಳಬಹುದಾಗಿದೆ. ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಕೆ ತನ್ನ ಸಂಭಾವನೆಯನ್ನೂ ಸಹ ಏರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ ಎನ್ನಬಹುದಾಗಿದೆ. ಈ ಸಾಲಿಗೆ ಯಂಗ್ ನಟಿ ಶ್ರೀಲೀಲಾ ಸಹ ಸೇರುತ್ತಾರೆ. ಸದ್ಯ ಬಹುಬೇಡಿಕೆ ನಟಿಯರಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಶ್ರೀಲೀಲಾ ಭಾರಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಏಳಕ್ಕೂ ಅಧಿಕ ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಸೆನ್ಷೇಷನ್ ನಟಿ ಎಂದಲೇ ಶ್ರೀಲೀಲಾರನ್ನು ಕರೆಯುತ್ತಾರೆ. ಧಮಕಾ ಸಿನೆಮಾದ ಮೂಲಕ ಮೊದಲನೇ ಹಿಟ್ ಪಡೆದುಕೊಂಡ ಈಕೆಗೆ ಇತ್ತೀಚಿಗೆ ತೆರೆಕಂಡ ಸ್ಕಂದ ಸಿನೆಮಾ ಫ್ಲಾಪ್ ಆಯಿತು. ಆದರೆ ಬಳಿಕ ನಂದಮೂರಿ ಬಾಲಕೃಷ್ಣರವರ ಭಗವಂತ್ ಕೇಸರಿ ಸಿನೆಮಾ ಮಾತ್ರ ಒಳ್ಳೆಯ ಸಕ್ಸಸ್ ಕಂಡಿದೆ. ಸದ್ಯ ಆಕೆ ಗುಂಟೂರು ಖಾರಂ, ಉಸ್ತಾದ್ ಭಗತ್ ಸಿಂಗ್, ಎಕ್ಸ್ಟ್ರಾಡನರಿ ಮ್ಯಾನ್ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ನಟಿ ಶ್ರೀಲೀಲಾಗೆ ಯುವಕರಲ್ಲಿ ಭಾರಿ ಕ್ರೇಜ್ ಇದೆ ಎಂದೇ ಹೇಳಬಹುದಾಗಿದೆ. ಆಕೆಯ ಎನರ್ಜಿಟಿಕ್ ಡ್ಯಾನ್ಸ್ ಗೆ ಪ್ರತ್ಯೇಕವಾದ ಅಭಿಮಾನಿ ಬಳಗ ಇದೆ ಎಂದೇ ಹೇಳಬಹುದಾಗಿದೆ. ಸಾಮಾನ್ಯವಾಗಿ ಸಿನೆಮಾ ನಟಿಯರ ಮದುವೆಯ ಬಗ್ಗೆ ಹೆಚ್ಚು ಇಂಟ್ರಸ್ಟ್ ಅಭಿಮಾನಿಗಳಿಗೆ ಇರುತ್ತೆ. ಈ ಹಾದಿಯಲ್ಲೇ ಶ್ರೀಲೀಲಾ ಯಾರನ್ನು ಮದುವೆಯಾಗುತ್ತಾರೆ ಎಂಬ ಬಗ್ಗೆ ಆಸಕ್ತಿ ಸಹ ಇದೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ತಾನು ಮದುವೆಯಾಗುವಂತಹ ವ್ಯಕ್ತಿಗೆ ಇರುವಂತಹ ಕ್ವಾಲಿಟಿಗಳ ಬಗ್ಗೆ ರಿವೀಲ್ ಮಾಡಿದ್ದಾರೆ. ಸಂದರ್ಶನದಲ್ಲಿ ಈ ಬಗ್ಗೆ ಎದುರಾದ ಪ್ರಶ್ನೆಗೆ ಶ್ರೀಲೀಲಾ ಉತ್ತರಿಸಿದ್ದಾರೆ.

ಶ್ರೀಲೀಲಾ ಮದುವೆಯಾಗುವ ಹುಡುಗನ ಬಗ್ಗೆ ಹೇಳುತ್ತಾ, ನನ್ನ ಮದುವೆಯಾಗುವ ವ್ಯಕ್ತಿಗೆ ಕುಟುಂಬ ಎಂದರೇ ಅಮಿತವಾದ ಇಷ್ಟ ಇರಬೇಕು. ಫ್ಯಾಮಿಲಿ ವ್ಯಾಲ್ಯೂ ಗಳನ್ನು ಪಾಲನೆ ಮಾಡಬೇಕು. ಸೆನ್ಸಾಫ್ ಹ್ಯೂಮರ್‍ ಇರಬೇಕು. ಕೆಲವೊಮ್ಮೆ ನನ್ನನ್ನು ಭರಿಸುವುದು ಕಷ್ಟ ಆದ್ದರಿಂದ ನನ್ನನ್ನು ಭರಿಸುವಂತಹ ವ್ಯಕ್ತಿಯಾಗಿರಬೇಕು. ಸೌಂದರ್ಯದ ಜೊತೆಗೆ ಈ ಎಲ್ಲಾ ಲಕ್ಷಣಗಳು ಇರುವಂತಹ ವ್ಯಕ್ತಿ ನನಗೆ ಪತಿಯಾಗಿ ಬರಬೇಕು ಎಂದು ಹೇಳಿದ್ದು ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ. ಸದ್ಯ ನಟಿ ಶ್ರೀಲೀಲಾಗೆ 22 ವರ್ಷ ವಯಸ್ಸಾಗಿದ್ದು ಆಕೆ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ. ಜೊತೆಗೆ ಎಂ.ಬಿ.ಬಿ.ಎಸ್ ವಿದ್ಯಾಭ್ಯಾಸ ಸಹ ಮಾಡುತ್ತಿದ್ದು, ಇದೆಲ್ಲಾ ಮುಗಿದ ಮೇಲೆ ಮದುವೆಯ ವಿಚಾರ ಬರಬಹುದು ಎಂದು ಹೇಳಲಾಗುತ್ತಿದೆ.