News

ಜ.31 ರಂದು ಕುಕ್ಕೆಯಲ್ಲಿ ಸಾಮೂಹಿಕ ವಿವಾಹ, ಡಿ.31 ರೊಳಗೆ ಅರ್ಜಿ ಸಲ್ಲಿಸಿ….!

ಹಿಂದೂಗಳ ಪುಣ್ಯಕ್ಷೇತ್ರಗಳ ಸಾಲಿನಲ್ಲಿ ಕುಕ್ಕೆ ಸುಬ್ರಮಣ್ಯ ಕ್ಷೇತ್ರ ಸಹ ಒಂದಾಗಿದ್ದು, ಈ ಕ್ಷೇತ್ರಕ್ಕೆ ಒಮ್ಮೆ ಹೋಗಿ ಪೂಜೆ ಮಾಡಿಸಿದರೇ ಮದುವೆಯಾಗುತ್ತದೆ ಎಂಬ ನಂಬಿಕೆ ಸಹ ಅನೇಕರಲ್ಲಿದ್ದು, ಅನೇಕ ಬ್ಯಾಚುಲರ್‍ ಗಳು ಈ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ. ಇದೀಗ ಈ ಕ್ಷೇತ್ರದಲ್ಲೇ ಸಾಮೂಹಿಕ ವಿವಾಹಗಳನ್ನು ಆಯೋಜಿಸಿದ್ದು, ಜ.31 ರಂದು ಸರಳವಾಗಿ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದ್ದು, ಆಸಕ್ತರು ಡಿ.31 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹಿಂದೂಗಳ ಪುಣ್ಯ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡಲಾಗಿದೆ. ಆಸಕ್ತರು ಡಿ.31 ರೊಳಗೆ ಅರ್ಜಿ ಸಲ್ಲಿಸುವಂತೆ ದೇವಾಲಯದ ಕಚೇರಿಯಿಂದ ಪ್ರಕಟನೆ ಮೂಲಕ ತಿಳಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ತಾವು ಸಹ ಮದುವೆಯಾಗಬೇಕೆಂದು ಯೋಚಿಸುವಂತಹ ಜೋಡಿಗಳು ತಮ್ಮ ಜನನ ದಿನಾಂಕ ದೃಢೀಕರಿಸುವಂತ ದಾಖಲೆಯ ಪ್ರತಿ, ಪಾಸ್ ಪೋರ್ಟ್ ಅಳತೆಯ 2 ಪೊಟೋ, ಆಧಾರ್‍ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ಅವಿವಾಹಿತರು ಎಂಬ ಸಂಬಂಧಪಟ್ಟ ಸರ್ಕಾರಿ ಇಲಾಖೆಯ ಅಧಿಕಾರಿಗಳಿಂದ ದೃಢೀಕರಿಸಿದ ಪ್ರಮಾಣ ಪತ್ರ ಲಗತ್ತಿಸಬೇಕಿದೆ. ಈ ಸಾಮೂಹಿಕ ವಿವಾಹ ಮಹೋತ್ಸವ ಜ.31 ರಂದು ನೆರವೇರಲಿದೆ.

ದೇವಾಲಯದಿಂದ ವರನಿಗೆ ಪೇಟ, ಹೂವಿನ ಹಾರ, ಪಂಚೆ, ಶಲ್ಯ, ಶರ್ಟ್, ಬಾಸಿಂಗಕ್ಕೆ 5 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ವಧುವಿಗೆ ಹೂವಿನ ಹಾರ ರವಿಕೆ, ಧಾರೆ ಸೀರೆ, ಕಾಲುಂಗರ, 10 ಸಾವಿರ ಪ್ರೋತ್ಸಾಹದನ ಜೊತೆಗೆ 40 ಸಾವಿರ ಮೌಲ್ಯದ ಚಿನ್ನದ ಗುಂಡು ಒಳಗೊಂಡ ತಾಳಿಯನ್ನು ನೀಡಲಾಗುತ್ತದೆ. ಜೊತೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟರಿಗೆ 50 ಸಾವಿರ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಕಚೇರಿಗೆ ಅಥವಾ 8257281224 ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.

Most Popular

To Top