ಬಾಲಕೃಷ್ಣ ಜೊತೆಗೆ ಮೊದಲ ಬಾರಿಗೆ ಚಂದಮಾಮ ಕಾಜಲ್ ಅಗರ್ವಾಲ್, ಶ್ರೀಲೀಲಾ ತಾಯಿಯ ಪಾತ್ರದಲ್ಲಿ ಕಾಜಲ್?

Follow Us :

ನಂದಮೂರಿ ಬಾಲಕೃಷ್ಣ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ವರ್ಷದ ಆರಂಭದಲ್ಲೇ ಬಿಗ್ ಹಿಟ್ ಗಳಿಸಿಕೊಂಡಿದ್ದಾರೆ. ಈ ಸಿನೆಮಾ ಖ್ಯಾತ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ನಿರ್ದೇಶನದಲ್ಲಿ ಮೂಡಿಬಂದಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಇನ್ನೂ ಬಾಲಕೃಷ್ಣ ರವರ ಅಖಂಡ ಸಿನೆಮಾ ಸಹ ಇದೇ ಮಾದರಿಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಇದೀಗ ಬಾಲಕೃಷ್ಣ ರವರ ಮುಂದಿನ ಸಿನೆಮಾ ಸಹ ಭಾರಿ ನಿರೀಕ್ಷೆಯನ್ನು ಮೂಡಿಸಿದ್ದು, ಈ ಸಿನೆಮಾ ಅನೀಲ್ ರಾವಿಪೂಡಿ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಈ ಸಿನೆಮಾದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಖ್ಯಾತ ನಿರ್ದೇಶಕ ಅನೀಲ್ ರಾವಿಪೂಡಿ ಹಾಗೂ ನಂದಮೂರಿ ಬಾಲಕೃಷ್ಣ ಕಾಂಬಿನೇಷನ್ ನಲ್ಲಿ NBK108 ಟೈಟಲ್ ನಡಿ ಸಿನೆಮಾ ಘೋಷಣೆಯಾಗಿದ್ದು, ಮೊದಲನೇ ಶೆಡ್ಯೂಲ್ಡ್ ಸಹ ಪೂರ್ಣಗೊಂಡಿದೆ. ಇನ್ನೂ ವೀರಸಿಂಹಾರೆಡ್ಡಿ ಸಿನೆಮಾದ ಸಮಯದಲ್ಲೇ NBK108 ಸಿನೆಮಾ ಘೋಷಣೆಯಾಗಿದ್ದು, ಈ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆಗಳನ್ನು ಹುಟ್ಟಿಸಿದೆ. ಇನ್ನೂ ಅನೀಲ್ ರಾವಿಪೂಡಿ ಕಾಮಿಡಿ ಓರಿಯೆಂಟೆಡ್ ಸಿನೆಮಾಗಳನ್ನೆ ಹೆಚ್ಚು ನಿರ್ದೇಶನ ಮಾಡುತ್ತಿರುತ್ತಾರೆ. ಆದರೆ ಬಾಲಕೃಷ್ಣ ಎಂದ ಕೂಡಲೇ ಅವರ ಸಿನೆಮಾ ಪಕ್ಕಾ ಮಾಸ್ ಆಕ್ಷನ್ ನಿಂದ ಕೂಡಿದ ಸಿನೆಮಾ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಅನೀಲ್ ರಾವಿಪೂಡಿ ಕಾಮಿಡಿ ಹಾಗೂ ಮಾಸ್ ಮಿಕ್ಸ್ ಆಗಿರುವಂತಹ ಸಿನೆಮಾ ತೆರೆಗೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಈಗಾಗಲೇ ಈ ಸಿನೆಮಾದಲ್ಲಿ ಬಾಲಕೃಷ್ಣ ರವರಿಗೆ ಜೋಡಿಯಾಗಿ ಅನೇಕ ನಟಿಯರ ಹೆಸರುಗಳು ಕೇಳಿಬಂದಿದ್ದವು. ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಬಾಲಕೃಷ್ಣ ರವರಿಗೆ ಜೋಡಿಯಾಗಿ ನಟಿಸಿದ್ದ ಹನಿ ರೋಜ್ ರವರನ್ನೇ ಈ ಸಿನೆಮಾದಲ್ಲೂ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಜೊತೆಗೆ ಬಾಲಿವುಡ್ ಸ್ಟಾರ್‍ ಕಿಡ್ ಸೋನಾಕ್ಷಿ ಸಿನ್ಹಾ ಸಹ ಈ ಸಿನೆಮಾದಲ್ಲಿ ಬಾಲಯ್ಯನಿಗೆ ಜೋಡಿಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಮತ್ತೊರ್ವ ನಟಿಯ ಹೆಸರು ಕೇಳಿಬರುತ್ತಿದೆ. ಆಕೆ ಬೇರೆ ಯಾರೂ ಅಲ್ಲ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್. ಹೌದು NBK108 ಸಿನೆಮಾದಲ್ಲಿ ಬಾಲಕೃಷ್ಣಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈಗಾಗಲೇ ಕಾಜಲ್ ಅಗರ್ವಾಲ್ ಗೆ ಅಡ್ವಾನ್ಸ್ ಸಹ ನೀಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಬಾಲಕೃಷ್ಣ ಜೊತೆಗೆ ಕಾಜಲ್ ಅಗರ್ವಾಲ್ ನಟಿಸಿದ್ದೇ ಆದರೆ ಬಾಲಕೃಷ್ಣ ಜೊತೆಗೆ ಕಾಜಲ್ ನಟಿಸುವ ಮೊದಲನೇ ಸಿನೆಮಾ ಇದಾಗಲಿದೆ. ಇನ್ನೂ ಈ ಸಿನೆಮಾದಲ್ಲಿ ಕಾಜಲ್ ಶ್ರೀಲೀಲಾ ಗೆ ತಾಯಿಯಾಗಿ ಕಾಜಲ್ ನಟಿಸಲಿದ್ದಾರೆ. ಇನ್ನೂ ಈ ಸುದ್ದಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟನೆ ಹೊರಬರಲಿದೆ ಎಂದು ಹೇಳಲಾಗುತ್ತಿದೆ.