ಸೆಲ್ಫಿ ಗಾಗಿ ಬಂದ ಅಭಿಮಾನಿಯ ಮೊಬೈಲ್ ಕಿತ್ತು ಎಸೆದ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್, ವೈರಲ್ ಆದ ವಿಡಿಯೋ….!

Follow Us :

ಬಾಲಿವುಡ್ ಸ್ಟಾರ್‍ ನಟ  ರಣಬೀರ್‍ ಕಪೂರ್‍ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಈ ಸಿನೆಮಾದ ಬಳಿಕ ನಾರ್ತ್ ನಲ್ಲಿ ಮಾತ್ರವಲ್ಲದೇ ಸೌತ್ ನಲ್ಲೂ ಸಹ ಅನೇಕ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ರಣಬೀರ್‍ ಕಪೂರ್‍ ಗೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಭಿಮಾನಿಯೊಬ್ಬ ಆತನೊಂದಿಗೆ ಸೆಲ್ಫಿಗಾಗಿ ಹೋಗಿದ್ದು, ಅಭಿಮಾನಿಯ ಪೋನ್ ಕಿತ್ತು ಎಸೆದಿದ್ದಾರೆ ರಣಬೀರ್‍. ಸದ್ಯ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಕಪೂರ್‍ ಅಭಿನಯದ ಬ್ರಹ್ಮಾಸ್ತ್ರ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ. ಈ ಸಿನೆಮಾದ ಬಳಿಕ ಆತನ ಕ್ರೇಜ್ ಸಹ ಏರಿದೆ ಎಂದು ಹೇಳಬಹುದಾಗಿದೆ. ಇನ್ನೂ ಬ್ರಹ್ಮಾಸ್ತ್ರ ಸಿನೆಮಾ ಸೇರಿದಂತೆ ರಣಬೀರ್‍ ಕಪೂರ್‍ ರವರ ಮುಂದಿನ ಸಿನೆಮಾಗಳ ಮೇಲೆ ತುಂಬಾನೆ ನಿರೀಕ್ಷೆ ಹುಟ್ಟಿದೆ ಎನ್ನಲಾಗುತ್ತಿದೆ. ಇನ್ನೂ ಬ್ರಹ್ಮಾಸ್ತ್ರ ಸಿನೆಮಾದ ಬಳಿಕ ರಣಬೀರ್‍ ತುಂಭಾ ಫೇಮಸ್ ಆಗಿದ್ದು, ಆತ ಎಲ್ಲಾದರೂ ಕಾಣಿಸಿಕೊಂಡಾಗ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಿರುತ್ತಾರೆ. ಇದೇ ಹಾದಿಯಲ್ಲಿ ಇತ್ತಿಚಿಗೆ ರಣಬೀರ್‍ ಕಪೂರ್‍ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರ ಮೊಬೈಲ್ ಪೋನ್ ಕಿತ್ತು ಎಸೆದಿದ್ದಾರೆ. ಅಷ್ಟಕ್ಕೂ ರಣಬೀರ್‍ ಅಭಿಮಾನಿಯ ಪೋನ್ ಕಿತ್ತು ಎಸೆಯಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಇನ್ನೂ ರಣಬೀರ್‍ ಅಭಿಮಾನಿಯೊಬ್ಬ ಆತನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದಾನೆ. ಈ ವೇಳೆ ರಣಬೀರ್‍ ಕಪೂರ್‍ ಸಹ ನಗುತ್ತಲೇ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಸಹ ನೀಡಿದ್ದಾರೆ. ಮತ್ತೊಮ್ಮೆ ಅದೇ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾನೆ ಆಗಲೂ ಸಹ ರಣಬೀರ್‍ ನಗುತ್ತಲೇ ಇದ್ದಾರೆ. ಮತ್ತೆ ಪೊಟೋ ಸರಿಯಾಗಿ ಬಾರದ ಕಾರಣಕ್ಕೋ ಅಥವಾ ಬೇರೆ ಕಾರಣದಿಂದಲೋ ಅದೇ ವ್ಯಕ್ತಿ ಮತ್ತೊಮ್ಮೆ ಸೆಲ್ಫಿಗಾಗಿ ಹೋಗಿದ್ದಾನೆ. ಈ ವೇಳೆ ಸಹನೆ ಕಳೆದುಕೊಂಡ ರಣಬೀರ್‍ ಆತನ ಪೋನ್ ನೋಡುವಂತೆ ತೆಗೆದುಕೊಂಡು ಹಿಂದೆ ಬಿಸಾಕಿದ್ದರೆ. ಇನ್ನೂ ಈ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ನೆಟ್ಟಿಗರೂ ಸಹ ವಿವಿಧ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ರಣಬೀರ್‍ ವ್ಯಕ್ತಿತ್ವ ಅಂತಹುದಲ್ಲ ಎಂದೂ, ಈ ವಿಡಿಯೋ ಸಂಪೂರ್ಣವಾಗಿಲ್ಲದ ಕಾರಣ ಅಭಿಮಾನಿಗೆ ಸರ್ಪೈಸ್ ನೀಡಿದ್ದಾರೆನೋ ಎಂದು ಅನೇಕರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ವಿಡಿಯೋ ಬ್ರಾಂಡ್ ಒಂದಕ್ಕೆ ಸಂಬಂಧಿಸಿದ ಜಾಹಿರಾತು ಎನ್ನಲಾಗುತ್ತಿದ್ದು, ವಿಭಿನ್ನವಾಗಿ ಆ ಪ್ರಾಡಕ್ಟ್ ಪ್ರಚಾರ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ. ಆದರೆ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.