Film News

ನಾನು ರಾಜಕುಮಾರ್ ರವರ ಕಾಲಿನ ಧೂಳಿಗೂ ಸಮ ಅಲ್ಲ ಎಂದ ದರ್ಶನ್, ವೈರಲ್ ಆದ ಕಾಮೆಂಟ್ಸ್….!

ಸ್ಯಾಂಡಲ್ ವುಡ್ ಚಾಲೆಂಜಿಗ್ ಸ್ಟಾರ್‍ ದರ್ಶನ್ ತೂಗುದೀಪ ಕಾಟೇರಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ದರ್ಶನ್ ಕೆರಿಯರ್‍ ನಲ್ಲೇ ವಿಭಿನ್ನವಾದ ಸಿನೆಮಾ ಎಂದೇ ಕರೆಯಬಹುದಾಗಿದೆ. ಸುಮಾರು 400 ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಮೊದಲನೇ ದಿನವೇ ಕಾಟೇರಾ ಸಿನೆಮಾ ಬರೊಬ್ಬರಿ 19 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ.

ಡಿ ಬಾಸ್ ದರ್ಶನ್ ರವರ ಕಾಟೇರಾ ಸಿನೆಮಾದ ಭಾರಿ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿನೆಮಾದ ಸಕ್ಸಸ್ ಗೆ ಚಿತ್ರತಂಡದ ತಂತ್ರಜ್ಞರು, ಕಲಾವಿದರು, ಪೋಷಕ ಕಲಾವಿದರು ಇಡೀ ತಂಡ ಕಾರಣ ಎಂದು ಎಲ್ಲರಿಗೂ ಕೃತ್ಞತೆಗಳನ್ನು ತಿಳಿಸಿದ್ದರು. ಇನ್ನೂ ಕಾಟೇರಾ ಸಿನೆಮಾದಲ್ಲಿ ದರ್ಶನ್ ರವರು ವರನಟ ದಿವಂಗತ ರಾಜ್ ಕುಮಾರ್‍ ಅಭಿನಯದ ಭಕ್ತ ಪ್ರಹ್ಲಾದ ಸಿನೆಮಾದ ಹಿರಣ್ಯ ಕಶಿಪು ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ರಾಜ್ ಕುಮಾರ್‍ ರವರು ಮಗನನ್ನು ಕೊಲ್ಲುವ ಸಮಯದಲ್ಲಿ ಚಿಂತಾಕ್ರಾಂತನಾಗಿ ಡೈಲಾಗ್ ಹೇಳುತ್ತಾರೆ. ಅಂದು ಈ ಡೈಲಾಗ್ ಎಲ್ಲರನ್ನೂ ಫಿದಾ ಮಾಡಿತ್ತು. ಇದೇ ಡೈಲಾಗ್ ನಟ ದರ್ಶನ್ ರವರು ಕಾಟೇರಾ ಸಿನೆಮಾದಲ್ಲಿ ಹೇಳಿದ್ದಾರೆ.

ಅಥಳ ವಿತಳ ಪಾತಾಳ ಎಂಬ ಡೈಲಾಗ್ ಅನ್ನು ದಶ್ನ್ ಕಾಟೇರಾ ಸಿನೆಮಾದಲ್ಲಿ ಹೇಳುತ್ತಾರೆ. ಈ ಡೈಲಾಗ್ ದರ್ಶನ್ ಅಭಿಮಾನಿಗಳೂ ಸೇರಿದಮತೆ ಅನೇಕರನ್ನು ಫಿದಾ ಮಾಡಿದೆ. ಈ ಕುರಿತು ಸಕ್ಸಸ್ ಮೀಟ್ ನಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಉತ್ತರಿಸಿದ ದರ್ಶನ್, ನಾನು ರಾಜ್ ಕುಮಾರ್‍ ರವರ ಕಾಲಿನ ಧೂಳಿಗೂ ಸಮನಲ್ಲ. ಅವರಿಗೆ ನನ್ನನ್ನು ಹೋಲಿಸಬೇಡಿ. ಅವರ ಮಾಡಿರುವ ಪಾತ್ರದಲ್ಲಿ 0.5 ರಷ್ಟನ್ನೂ ಸಹ ನಾನು ಮಾಡೋಕೆ ಆಗೊಲ್ಲ. ಕೇವಲ ಪ್ರಯತ್ನ ಮಾಡಬಹುದು ಅಷ್ಟೆ ಎಂದು ದರ್ಶನ್ ಹೇಳಿದ್ದಾರೆ. ಇದೀಗ ದರ್ಶನ್ ರವರು ಡಾ.ರಾಜ್ ಕುಮಾರ್‍ ರವರ ಬಗ್ಗೆ ಆಡಿದಂತಹ ಈ ಮಾತುಗಳು ಸೋಷಿಯಲ್ ಮಿಡಿಯಾದಲ್ಲಿ ಸಹ ವೈರಲ್ ಆಗುತ್ತಿದೆ.

Most Popular

To Top