Film News

ಸಿದ್ದಾರ್ಥ್ ಹಾಗೂ ಅದಿತಿ ರೊಮ್ಯಾಂಟಿಕ್ ಪಿಕ್ ವೈರಲ್, ಮದುವೆ ಸುದ್ದಿ ಯಾವಾಗ ಕೊಡ್ತೀರಾ ಎಂದ ಫ್ಯಾನ್ಸ್………!

ಕೆಲವು ದಿನಗಳಿಂದ ಸೌತ್ ಸಿನಿರಂಗದ ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ ಸಮಾರಂಭದಲ್ಲಿ ಸಿದ್ದಾರ್ಥ್ ಹಾಗೂ ಅದಿತಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಇಬ್ಬರೂ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿಕೊಂಡಿದ್ದು, ಈ ಸಂಬಂಧ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪೊಟೋ ನೋಡಿದ ಅನೇಕರು ಮದುವೆ ಯಾವಾಗ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.

ಸೌತ್ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಸಿನಿವಲಯ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇದೆ. ಆದರೆ ಅವರಿಬ್ಬರೂ ಅದೆಲ್ಲಾ ಏನು ಇಲ್ಲ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳುತ್ತಿರುತ್ತಾರೆ. ಆದರೆ ಜೊತೆಯಲ್ಲೇ ಪಾರ್ಟಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾರೆ. ಇನ್ನೂ ಅವರಿಬ್ಬರೂ ಜೋಡಿಯಾಗಿ ಕಾಣಿಸಿಕೊಂಡಾಗ ಕೆಲವು ಅಭಿಮಾನಿಗಳು ಒಳ್ಳೆಯ ಜೋಡಿ ಬೇಗ ಮದುವೆಯಾಗಿ ಎಂದೂ ಹೇಳುತ್ತಿರುತ್ತಾರೆ. ಆದರೆ ಅನೇಕ ಬಾರಿ ಸಿದ್ದಾರ್ಥ್ ಹಾಗೂ ಅದಿತಿ ಸಹ ಸೊಷಿಯಲ್ ಮಿಡಿಯಾದಲ್ಲಿ ಬರುವುದೆಲ್ಲಾ ನಿಜವಲ್ಲ. ಎಲ್ಲವೂ ಸುಳ್ಳು ಪ್ರಚಾರಗಳು ಮಾತ್ರ ಎಂದು ಹೇಳಿದ್ದರು. ಆದರೆ ಅವರ ನಡವಳಿಕೆ ಕಂಡ ಅನೇಕರು ಅವರಿಬ್ಬರ ನಡುವೆ ಪ್ರೇಮ ಪಯಣ ಸಾಗುತ್ತಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ.

ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ಮಹಾ ಸಮುದ್ರಂ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಮಾತ್ರ ಇಬ್ಬರೂ ಒಪ್ಪಿಕೊಳ್ಳುವುದೇ ಇಲ್ಲ. ಆದರೆ ಇಬ್ಬರೂ ಮುಂಬೈ ಬೀದಿಗಳಲ್ಲಿ ಸಂತೋಷದಿಂದ ತಿರುಗಾಡುತ್ತಿರುತ್ತಾರೆ. ಡಿನ್ನರ್‍ ಗಳು, ಪಾರ್ಟಿಗಳಿಗೆ ಹೋಗುತ್ತಿರುತ್ತಾರೆ. ಜೋಡಿಯಾಗಿ ಸಿನೆಮಾ ಈವೆಂಟ್ ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಇಬ್ಬರೂ ಜೊತೆಯಾಗಿ ರೀಲ್ಸ್ ಸಹ ಮಾಡುತ್ತಿರುತ್ತಾರೆ. ಮೊದಲಿಗೆ ಕೊಂಚ ಸೀಕ್ರೇಟ್ ಆಗಿ ಸುತ್ತಾಡುತ್ತಿದ್ದ ಈ ಜೋಡಿ ಇದೀಗ ಬಹಿರಂಗವಾಗಿಯೇ ಸುತ್ತಾಡುತ್ತಿದ್ದಾರೆ. ಸಿದ್ದಾರ್ಥ್ ಅಭಿನಯದ ಚಿನ್ನಾ ಸಿನೆಮಾದ ಬಾಲಿವುಡ್ ಪ್ರೀಮಿಯರ್‍ ಅನ್ನು ಅದಿತಿ ಹತ್ತಿರವಿದ್ದು ಎಲ್ಲವನ್ನೂ ನೋಡಿಕೊಂಡಿದ್ದರು. ಜೊತೆಗೆ ಹುಟ್ಟುಹಬ್ಬಗಳಂದು ಸಹ ಸ್ಪೇಷಲ್ ಆಗಿ ಶುಭಾಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಹೊಸ ವರ್ಷದ ಸಂಭ್ರಮವನ್ನು ಒಟ್ಟಿಗೆ ಸಂಭ್ರಮಿಸಿದ್ದಾರೆ ಈ ಜೋಡಿ. ವಿದೇಶದಲ್ಲಿ ಹೊಸ ವರ್ಷವನ್ನು ಆಚರಿಸಲು ಈ ಜೋಡಿ ಹೋಗಿದ್ದು, ಅಲ್ಲಿ ಪುಲ್ ಎಂಜಾಯ್ ಮಾಡಿದ್ದಾರೆ. ಇಬ್ಬರೂ ಜೊತೆಯಾಗಿ ರೊಮ್ಯಾಂಟಿಕ್ ಆಗಿ ತೆಗೆದುಕೊಂಡ ಪೊಟೋ ಒಂದನ್ನು ಅವರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋ ಹಂಚಿಕೊಂಡು ಹೊಸ ವರ್ಷದ ಶುಭಾಷಯ ಕೋರಿದ್ದಾರೆ. ಈ ಪೊಟೋ ಕಾರಣದಿಂದ ಎಲ್ಲರೂ ಅವರಿಬ್ಬರು ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಡುತ್ತಿದ್ದು, ಮದುವೆ ಯಾವಾಗ ಎಂದು ಕಾಮೆಂಟ್ಸ್ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

Most Popular

To Top