ಹೊಸ ವರ್ಷದಂದು ಪಬ್ ನಲ್ಲಿ ಎಂಜಾಯ್ ಮಾಡಿದ ಸಚಿವೆ ರೋಜಾ, ವೈರಲ್ ಆದ ವಿಡಿಯೋ ಪೊಟೋಸ್, ಸಖತ್ ಟ್ರೋಲ್…..!

ತೆಲುಗು ರಾಷ್ಟ್ರಗಳಲ್ಲಿ ರಾಜಕೀಯವಾಗಿ ಸಂಚಲನಾತ್ಮಕ ಹೇಳಿಕೆಗಳನ್ನು ನೀಡುತ್ತಾ ಫೈರ್‍ ಬ್ರಾಂಡ್ ಆಗಿ ಮುನ್ನುಗ್ಗುತ್ತಿರುವ ನಟಿ ಕಂ ರಾಜಕಾರಣಿ ರೋಜಾ ಸದ್ಯ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಸುಮಾರು ವರ್ಷಗಳ ಕಾಲ ಸ್ಟಾರ್‍ ನಟಿಯಾಗಿ ಅನೇಕ ಸಿನೆಮಾಗಳಲ್ಲಿ ನಟಿಸಿ, ಬಳಿಕ ರಾಜಕೀಯದಲ್ಲಿ ಸಕ್ರೀಯರಾಗಿ ಒಳ್ಲೆಯ ಹೆಸರು ಪಡೆದುಕೊಂಡರು. ತಮ್ಮ ರಾಜಕೀಯ ವಿರೋಧಿಗಳ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗಿದ್ದ ರೋಜಾ ರವರನ್ನು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ.

ಹೊಸ ವರ್ಷದಂದು ಎಲ್ಲರೂ ತಮ್ಮದೇ ಆದ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಅನೇಕ ಸೆಲೆಬ್ರೆಟಿಗಳು ತಮ್ಮ ಕುಟುಂಬದೊಂದಿಗೆ ವಿದೇಶಗಳಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಈ ಹಾದಿಯಲ್ಲೇ ಸಚಿವೆ ರೋಜಾ ಸಹ ತನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿರುವ ಪಬ್ ಒಂದರಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಆಕೆ ಎಂಜಾಯ್ ಮಾಡಿದಂತಹ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗುತ್ತಿದೆಯೋ ಆಕೆಯನ್ನು ಅದೇ ರೀತಿ ಟ್ರೋಲ್ ಸಹ ಮಾಡಲಾಗುತ್ತಿದೆ. ನೆಟ್ಟಿಗರು ಆಕೆಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ರೋಜಾ ಪಬ್ ನಲ್ಲಿ ಎಂಜಾಯ್ ಮಾಡಿದಂತಹ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ನೀವು ಓರ್ವ ಪ್ರಜಾಪ್ರತಿನಿಧಿಯಾಗಿ, ಜನರ ನೋವುಗಳನ್ನು ಆಲಿಸುವುದನ್ನು ಬಿಟ್ಟು, ಈ ರೀತಿ ಪಬ್ ಗಳಿಗೆ ಹೋಗಿ ಎಂಜಾಯ್ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಆಂಧ್ರಪ್ರದೇಶ್ ನಲ್ಲಿನ ಅಂಗನವಾಡಿ ನೌಕರರು ದೊಡ್ಡ ಮಟ್ಟದಲ್ಲೇ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈ ವಿಚಾರದ ಬಗ್ಗೆ ತಲೆಗೆಡಿಸಿಕೊಳ್ಳದ ರೋಜಾ ಇದೀಗ ಕುಟುಂಬದೊಂದಿಗೆ ಪಬ್ ನಲ್ಲಿ ಎಂಜಾಯ್ ಮಾಡುತ್ತಿರುವುದು ಅನೇಕರನ್ನು ಕೆರಳಿಸಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಧಾರುಣವಾದಂತಹ ಕಾಮೆಂಟ್ ಗಳು ಹರಿದುಬರುತ್ತಿದ್ದು, ಈ ಬಗ್ಗೆ ರೋಜಾ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.