ಸೋಷಿಯಲ್ ಮಿಡಿಯಾ ಪ್ರೊಫೈಲ್ ಪೊಟೋ ಬದಲಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೂಪರ್ ಎಂದ ಫ್ಯಾನ್ಸ್……..!

ಚಾಲೆಂಜಿಂಗ್ ಸ್ಟಾರ್‍ ನಟ ದರ್ಶನ್ ಕನ್ನಡ ಸಿನಿರಂಗದಲ್ಲಿ ದೊಡ್ಡ ಫೇಂ ಇರುವ ನಟರಾಗಿದ್ದಾರೆ. ಇನ್ನೂ ಅನೇಕ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ದರ್ಶನ್ ಕಾಟೇರಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಪ್ರೊಫೈಲ್ ಪೊಟೋ ಬದಲಿಸಿದ್ದು, ಪ್ರೊಫೈಲ್ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೂಪರ್‍ ಎಂದು ಕಾಮೆಂಟ್ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿರಲ್ಲ. ಆದರೆ ತಮ್ಮ ಸಿನೆಮಾಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಹಂಚಿಕೊಳ್ಳುತ್ತಿರುತ್ತಾರೆ. ಅವರ ಟ್ವಿಟರ್‍, ಇನ್ಸ್ಟಾಗ್ರಾಂ ಖಾತೆಗಳನ್ನು ಗಮನಿಸಿದರೂ ಸಹ ಸಿನೆಮಾ ಅಪ್ಡೇಟ್ ಗಳನ್ನು ಬಿಟ್ಟರೇ ಅವರ ವೈಯುಕ್ತಿಕ ಪೊಟೋಗಳು ಕಡಿಮೆ ಕಾಣಿಸುತ್ತವೆ ಎಂದು ಹೇಳಬಹುದಾಗಿದೆ. ಹಬ್ಬಗಳಂದು ಅಥವಾ ಸ್ಪೇಷಲ್ ದಿನಗಳಂದು ಮಾತ್ರ ಅವರು ಪೋಸ್ಟ್ ಇದ್ದೇ ಇರುತ್ತದೆ. ಇತ್ತೀಚಿಗಷ್ಟೆ ತಮ್ಮ ಡೆವಿಲ್ ದಿ ಹಿರೋ ಸಿನೆಮಾದ ಟೀಸರ್‍ ರಿಲೀಸ್ ಪೋಸ್ಟರ್‍ ಸಹ ಹಂಚಿಕೊಂಡಿದ್ದರು. ಸದ್ಯ ದರ್ಶನ್ ತಮ್ಮ ಇನ್ಸ್ಟಾ ಖಾತೆಯ ಪ್ರೊಫೈಲ್ ಪೊಟೋ ಬದಲಿಸಿದ್ದಾರೆ. ಈ ಪೊಟೋ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಪುಲ್ ಫಿದಾ ಆಗಿದ್ದಾರೆ.

ಸದ್ಯ ದರ್ಶನ್ ತಮ್ಮ ಇನ್ಸ್ಟಾ ಪ್ರೊಫೈಲ್ ಪೊಟೋ ಬದಲಿಸಿದ್ದು, ಈ ಪೊಟೋ ನೋಡಲು ಡೆವಿಲ್ ಸಿನೆಮಾದ ಲುಕ್ ಮಾದರಿಯಲ್ಲಿದೆ. ಸೂಪರ್‍ ಸ್ಟೈಲಿಶ್ ಲುಕ್ಸ್ ನಲ್ಲಿ ಮಿಂಚಿದ್ದಾರೆ. ಕೋಟು ಹಾಕಿಕೊಂಡು, ಬ್ಲಾಕ್ ಕಲರ್‍ ಗಾಗಲ್ಸ್ ಹಾಕಿಕೊಂಡಿದ್ದಾರೆ. ಇನ್ನೂ ದರ್ಶನ್ ಅಭಿನಯದ ಡೆವಿಲ್ ದಿ ಹಿರೋ ಸಿನೆಮಾದ ಟೀಸರ್‍ ಸಹ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನೆಮಾವನ್ನು ನಿರ್ದೇಶಕ ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ರವರ ಹುಟ್ಟುಹಬ್ಬ ಫೆ.16 ರ ಹಿಂದಿನ ರಾತ್ರಿ ಡೆವಿಲ್ ದಿ ಹಿರೋ ಸಿನೆಮಾದ ಟೀಸರ್‍ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿರ್ದೇಶಕ ಮಿಲನಾ ಪ್ರಕಾಶ್ ರವರೂ ಸಹ ಸುದ್ದಿ ಹಂಚಿಕೊಂಡಿದ್ದಾರೆ. ಇನ್ನೂ ಮಿಲನಾ ಪ್ರಕಾಶ್ ಹಾಗೂ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿಬಂದ ತಾರಕ್ ಸಿನೆಮಾದಲ್ಲೂ ಸಹ ದರ್ಶನ್ ರವರನ್ನು ತುಂಬಾ ಸ್ಟೈಲಿಷ್ ಆಗಿ ತೋರಿಸಿದ್ದರು. ಇದೀಗ ಡೆವಿಲ್ ಸಿನೆಮಾದಲ್ಲೂ ದರ್ಶನ್ ರವರನ್ನು ತುಂಬಾನೆ ಸ್ಟೈಲಿಷ್ ಆಗಿ ಪ್ರೆಸೆಂಟ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.