Film News

ರೌಡಿ ಹಿರೋ ವಿಜಯ್ ದೇವರಕೊಂಡ ಸಿನೆಮಾಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಕ್ರೀಡಾಪಟು ಪಿ.ವಿ.ಸಿಂಧು, ವೈರಲ್ ಆದ ಕಾಮೆಂಟ್ಸ್…….!

ಟಾಲಿವುಡ್ ಸಿನಿರಂಗದಲ್ಲಿ ರೌಡಿ ಹಿರೋ ಎಂದೇ ಖ್ಯಾತಿ ಪಡೆದುಕೊಂಡ ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಭಾರಿ ಫೇಂ ಪಡೆದುಕೊಂಡರು. ಅವರ ಮ್ಯಾನರಿಜಂ, ಆಟಿಟ್ಯೂಡ್ ಗೆ ಭಾರಿ ಫ್ಯಾನ್ ಫಾಲೋಯಿಂಗ್ ಸಹ ಇದೆ. ಕೊನೆಯದಾಗಿ ಖುಷಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ವಿಜಯ್ ದೇವರಕೊಂಡ ಸಿನೆಮಾಗಳ ಬಗ್ಗೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ತೆಲುಗು ಮೂಲದ ಪಿ.ವಿ.ಸಿಂಧು ಬ್ಯಾಡ್ಮಿಂಟನ್ ನಲ್ಲಿ ತುಂಬಾನೆ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಜಯ ಗಳಿಸಿದ್ದಾರೆ. ಮೆಡಲ್ಸ್ ಸಹ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾದ ಸಿಂಧು ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ವೇಳೆ ಆಕೆ ಸಿನೆಮಾಗಳ ಬಗ್ಗೆ ಮಾತನಾಡಿದ್ದಾರೆ. ತಾನು ಒತ್ತಡವನ್ನು ಕಡಿಮೆ  ಮಾಡಿಕೊಳ್ಳಲು ಸಿನೆಮಾಗಳನ್ನು ನೋಡುವುದಾಗಿ, ಪ್ರಭಾಸ್, ಎನ್.ಟಿ.ಆರ್‍ ಹಾಗೂ ರಾಮ್ ಚರಣ್ ವರ ನಟನೆ ತುಂಬಾ ಇಷ್ಟ ಎಂದು, ವಿಜಯ್ ದೇವರಕೊಂಡ ನಟಿಸಿದಂತಹ ಕೆಲವೊಂದು ಸಿನೆಮಾಗಳು ನನಗೆ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಆಕೆಗೆ ಇಷ್ಟವಾಗದಂತಹ ಸಿನೆಮಾಗಳ ಹೆಸರುಗಳನ್ನು ಮಾತ್ರ ಹೇಳಿಲ್ಲ. ಆ ರೀತಿಯ ಹೇಳಿದರೇ ಅದು ಕಾಂಟ್ರವರ್ಸಿ ಆಗುತ್ತದೆ ಆದ್ದರಿಂದ ಹೇಳೊಲ್ಲ ಎಂದಿದ್ದಾರೆ.

ಯಾಕೆಂದರೇ ನನಗೆ ಇಷ್ಟವಾಗದೇ ಇರುವಂತಹ ಸಿನೆಮಾ ಬೇರೆಯವರಿಗೆ ಇಷ್ಟವಾಗಬಹುದು. ಎಲ್ಲರ ಅಭಿಪ್ರಾಯ ಒಂದೇ ರೀತಿ ಇರುವುದಿಲ್ಲ. ಯಾವುದೇ ನಟನಾದರೂ ತಾನು ನಟಿಸುವ ಸಿನೆಮಾ ಸಕ್ಸಸ್ ಆಗುತ್ತದೆ ಎಂದು ಮಾಡುತ್ತಾರೆ. ತಿಂಗಳುಗಳ ಕಾಲ ಸಿನೆಮಾಗಾಗಿ ಕಷ್ಟಪಡುತ್ತಾರೆ ಎಂದು ಹೇಳಿದ್ದಾರೆ. ಅಷ್ಟೇಅಲ್ಲದೇ ಈ ಹಿಂದೆ ಪಿ.ವಿ.ಸಿಂಧು ಸಿನೆಮಾಗಳಲ್ಲಿ ನಟಿಸುತ್ತಾರೆ ಎಂದೂ ಸಹ ಹೇಳಲಾಗಿತ್ತು. ಈ ರೂಮರ್‍ ಗಳ ಬಗ್ಗೆ ಸಹ ಆಕೆ ರಿಯಾಕ್ಟ್ ಆಗಿದ್ದಾರೆ. ಸದ್ಯ ತನಗೆ ನಟಿಸುವ ಆಲೋಚನೆಯಿಲ್ಲ. ನನ್ನ ದೃಷ್ಟಿ ಕ್ರೀಡೆಯ ಮೇಲಿದೆ. ನನ್ನ ಭವಿಷ್ಯತ್ ನ ನಿರ್ಣಯ ಈಗಲೇ ಹೇಳೊಕೆ ಆಗೊಲ್ಲ ಎಂದು ಅನೇಕ ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top