Film News

ಅಕ್ಕಿನೇನಿ ನಾಗಚೈತನ್ಯರಿಗೆ ವ್ಯಾಲೆಂಟೈನ್ಸ್ ಡೇ ಶುಭಾಷಯ ಕೋರಿದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ವಿಡಿಯೋ ವೈರಲ್…..!

ಸಮಂತಾ ಮಾಜಿ ಪತಿ ಅಕ್ಕಿನೇನಿ ನಾಗಚೈತನ್ಯಗೆ ಸೌತ್ ಸ್ಟಾರ್‍ ನಟಿ ಸಾಯಿ ಪಲ್ಲವಿ ಪ್ರೇಮಿಗಳ ದಿನದ ಶುಭಾಷಯ ಕೋರಿದ್ದಾರೆ. ಪ್ರೇಮಿಗಳ ದಿನಂದು ನಾಗಚೈತನ್ಯ ಹಾಗೂ ಸಾಯಿಪಲ್ಲವಿ ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಅವರಿಬ್ಬರೂ ಕಾಣಿಸಿಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಾವಿರಾರು ವ್ಯೂವ್ಸ್ ಕಂಡಿದೆ. ಅಷ್ಟಕ್ಕೂ ವಿಡಿಯೋದ ಅಸಲೀಯತ್ತು ಏನು ಎಂಬ ವಿಚಾರಕ್ಕೆ ಬಂದರೇ,

ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಾಯಿಪಲ್ಲವಿ ಥಾಂಡೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗಾಗಿಯೇ ಪ್ರೇಮಿಗಳಂತೆ ವಿಡಿಯೋದಲ್ಲಿ ಪೋಸ್ ಕೊಟ್ಟಿದ್ದಾರೆ. ನಾಗಚೈತನ್ಯ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಾ ಪ್ರೀತಿಯಿಂದ ಮಾತನಾಡುತ್ತಿರುತ್ತಾರೆ. ಮೊದಲಿಗೆ ಸಾಯಿ ಪಲ್ಲವಿ ಕೋಪದಲ್ಲಿರುತತಾರೆ. ಬಳಿಕ ನಗುತ್ತಾ ಅಲ್ಲಿಂದ ಓಡುತ್ತಾರೆ. ಈ ವಿಡಿಯೋವನ್ನು ಅವರು ತಮ್ಮ ಥಾಂಡೆಲ್ ಸಿನೆಮಾದ ಪ್ರಮೋಷನ್ ಗಾಗಿ ಮಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿದ ಸಾಯಿ ಪಲ್ಲವಿ ವಾಲೆಂಟೈನ್ ಡೇ ಶುಭಾಷಯ ಕೋರಿದ್ದಾರೆ. ಜೊತೆಗೆ ಅಕ್ಕಿನೇನಿ ನಾಗಚೈತನ್ಯ ಸಹ ಇದೇ ವಿಡಿಯೋ ಶೇರ್‍ ಮಾಡಿದ್ದಾರೆ. ಈ ಸಿನೆಮಾವನ್ನು ಕಾರ್ತಿಕೇಯ ಸಿನೆಮಾ ಖ್ಯಾತಿಯ ಚಂದೂ ಮೊಂಡೆಟಿ ನಿರ್ದೇಶನ ಮಾಡುತ್ತಿದ್ದಾರೆ.

ಥಾಂಡೆಲ್ ಸಿನೆಮಾದಲ್ಲಿ ಮಹಿಳಾ ಪ್ರಧಾನ್ಯತೆಯಿರುವಂತಹ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಶೇ.40 ರಷ್ಟು ಸಿನೆಮಾದ ಶೂಟಿಂಗ್ ಮುಕ್ತಾಯವಾಗಿದೆ. ಕೆಲವೊಂದು ಮೂಲಗಳ ಪ್ರಕಾರ ಈ ಸಿನೆಮಾ ದುರಂತ ಅಂತ್ಯದ ಕಥೆಯನ್ನು ಆಧರಿಸಿದೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ಸಾಯಿ ಪಲ್ಲವಿ ನಟಿಸೋಕೆ ಒಪ್ಪಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಈಗಾಗಲೇ ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಕಾಂಬಿನೇಷನ್ ನಲ್ಲಿ ಲವ್ ಸ್ಟೋರಿ ಸಿನೆಮಾದಲ್ಲಿ ನಟಿಸಿದ್ದರು. ಇದೀಗ ಎರಡನೇ ಸಿನೆಮಾದ ಮೂಲಕ ಈ ಜೋಡಿ ಮತ್ತೊಮ್ಮೆ ರಂಜಿಸಲಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾದ ಜೊತೆಗೆ ಅಮೀರ್‍ ಖಾನ್ ಜೊತೆಗೆ ಸಹ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೂಲಕ ಸಾಯಿಪಲ್ಲವಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

Most Popular

To Top