ಮಂಡ್ಯದಲ್ಲಿ ಕಾಂಗ್ರೇಸ್ ಪರ ಪ್ರಚಾರ ಮಾಡಿದ ದರ್ಶನ್, ಪಕ್ಷದ ಪರ ಅಲ್ಲ, ವ್ಯಕ್ತಿ ಪರ ಪ್ರಚಾರ ಎಂದ ದರ್ಶನ್……!

Follow Us :

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಭಾರಿ ಕುತೂಹಲ ಕೆರಳಿಸಿತ್ತು, ಹೈ ವೋಲ್ಟೇಜ್ ಕ್ಷೇತ್ರ ಎಂದೇ ಹೇಳಲಾಗಿತ್ತು. ಮಂಡ್ಯದ ಸಂಸದೆ ಸುಮಲತಾ ಪರವಾಗಿ ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಪ್ರಚಾರ ನಡೆಸಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕಣ್ಣಕ್ಕೆ ಇಳಿದಿದ್ದಾರೆ. ಆದರೆ ಈ ಬಾರಿ ನಟ ದರ್ಶನ್ ಕಾಂಗ್ರೇಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಧುಮುಕಿದ್ದು, ಅನೇಕ ಚರ್ಚೆಗಳಿಗೆ ಕಾರಣವಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಟಾರ್‍ ಚಂದ್ರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಭಾಗದಿಂದ ಸಂಸದರಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್ ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕಣದಲ್ಲಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ಮಾಡಿದ್ದ ನಟ ದರ್ಶನ್ ಕಾಂಗ್ರೇಸ್ ಪರ ಪ್ರಚಾರಕ್ಕೆ ಧುಮುಕಿದ್ದಾರೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ಭಾರಿಚರ್ಚೆ ಹುಟ್ಟಿಹಾಕಿದೆ. ಆದರೆ ಇದೆಲ್ಲದರ ನಡುವೆ ನಾನು ಪಕ್ಷದ ಪರ ಪ್ರಚಾರ ಮಾಡೋಕೆ ಬಂದಿಲ್ಲ, ವ್ಯಕ್ತಿಯ ಪರ ಕೆಲಸ ಮಾಡೋಕೆ ಬಂದಿರೋದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಪ್ರಚಾರದ ವೇಳೆ ಮಾತನಾಡಿದ ದರ್ಶನ ನಾನು ಪಕ್ಷದ ಪರ ಬಂದಿಲ್ಲ, ನಾನು ವ್ಯಕ್ತಿಯ ಪರ. ಈ ಐದು ವರ್ಷಗಳ ಹಿಂದೆ ನರೇಂದ್ರಣ್ಣ ಮಾಡಿದ ಸಹಾಯವನ್ನು ನೆನಪಿಸಿಕೊಳ್ಳುತ್ತೇನೆ. ಮಾಧ್ಯಮದವರು ಏನೇನೋ ಹಾಕಿದರೇ ತುಂಬಾ ಕಷ್ಟ ಆಗುತ್ತದೆ. ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಅಮ್ಮನಿಗೆ ಸೀಟ್ ಸಿಕ್ಕಿಲ್ಲ ಎಂದರೇ ನಮ್ಮ ಪರ ಪ್ರಚಾರ ಮಾಡಬೇಕೆಂದು ಉದಯ್ ಗೌಡ್ರು ಕೇಳಿದ್ದರು. ಮೊದಲು ಅವರು ಕರೆದರು ಎಂಬ ಕಾರಣದಿಂದ ಪ್ರಚಾರಕ್ಕೆ ಬಂದಿದ್ದೇನೆ. ಕಾಂಗ್ರೇಸ್ ನಿಂದ್ ಸ್ಟಾರ್‍ ಚಂದ್ರ ಚುನಾವಣೆಗೆ ನಿಂತಿದ್ದಾರೆ. ನಿಮ್ಮ ಅಮೂಲ್ಯವಾದ ಮತವನ್ನು ಅವರಿಗೆ ನೀಡಿ ನರೇಂದ್ರ ಹಾಗೂ ಉದಯ್ ರವರ ಕೈಗಳನ್ನು ಬಲಪಡಿಸಿ ಎಂದು ಕೋರಿದ್ದಾರೆ.