Film News

ಮಗನಿಗೆ ಸೆಕ್ಸ್ ಬಗ್ಗೆ ಒಪೆನ್ ಆಗಿ ಕೇಳಿದ ಬೋಲ್ಡ್ ಬ್ಯೂಟಿ ಮಲೈಕಾ, ಮಗ ಅರ್ಹಾನ್ ಹೇಳಿದ್ದಾದರೂ ಏನು ಗೊತ್ತಾ?

ಬಾಲಿವುಡ್ ನ ಸೀನಿಯರ್‍ ಹಾಟ್ ಬ್ಯೂಟಿ ಮಲೈಕಾ ಅರೋರ ಸೌಂದರ್ಯದ ಸುನಾಮಿ ಎಂದರೇ ಕರೆಯಲಾಗುತ್ತಿದೆ. ಯಾವುದೇ ಅಡ್ಡಿಯಿಲ್ಲ ಎಂಬಂತೆ ದೇಹ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಅದರಲ್ಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ವಯಸ್ಸು 50 ಆದರೂ ಸಹ ಆಕೆ ಫಿಟ್ ನೆಸ್ ಹಾಗೂ ಗ್ಲಾಮರ್‍ ಚೆನ್ನಾಗಿ ಮೈಂಟೈನ್ ಮಾಡುತ್ತಿದ್ದಾರೆ. ಆಕೆಯ ವಿಚಾರದಲ್ಲಿ ವಯಸ್ಸು ಕೇವಲ ಜಸ್ಟ್ ನಂಬರ್‍ ಎಂದು ಹೇಳಬಹುದಾಗಿದೆ. ಇದೀಗ ತನ್ನ ಮಗನಿಗೆ ಸೆಕ್ಸ್ ಬಗ್ಗೆ ಒಪೆನ್ ಆಗಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮಗ ಅರ್ಹಾನ್ ಸಹ ಉತ್ತರ ನೀಡಿದ್ದಾರೆ.

ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಮದುವೆಯಾಗಿ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಈ ಜೋಡಿಗೆ ಅರ್ಹಾನ್ ಖಾನ್ ಎಂಬ ಮಗ ಸಹ ಇದ್ದಾನೆ. ಆದರೆ ಇಬ್ಬರ ನಡುವೆ ಕೆಲವೊಂದು ವಿಭೇದಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಕಳೆದ 2017ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಅರ್ಬಾಜ್ ಖಾನ್ ಜೊತೆಗೆ ಆಕೆ ವಿಚ್ಚೇದನ ಪಡೆದುಕೊಂಡ ಬಳಿಕ ತನಗಿಂತ 12 ವರ್ಷ ಚಿಕ್ಕವನಾದ ನಟ ಅರ್ಜುನ್ ಕಪೂರ್‍ ಜೊತೆ ಆಕೆ ಡೇಟಿಂಗ್ ನಡೆಸುತ್ತಿದ್ದಾರೆ. ಇನ್ನೂ ಅನೇಕ ಬಾರಿ ತನ್ನ ಮಗನಿಗಾಗಿ ಅರ್ಬಾಜ್ ಖಾನ್ ಜೊತೆಗೆ ಭೇಟಿಯಾಗುತ್ತಿರುತ್ತಾರೆ. ಈ ಸಂಬಂಧ ವಿಡಿಯೋ ಹಾಗೂ ಪೊಟೋಗಳು ವೈರಲ್ ಆಗುತ್ತಿರುತ್ತವೆ. ಇನ್ನೂ ಅರ್ಬಾಜ್ ಖಾನ್ ಸಹ ಇತ್ತೀಚಿಗಷ್ಟೆ ತನ್ನ ವಯಸ್ಸಿನಲ್ಲಿ ಅರ್ಧ ವಯಸ್ಸಾಗಿರುವ ಶುರಾ ಎಂಬಾಕೆಯೊಂದಿಗೆ ಮದುವೆಯಾಗಿ ವೈವಾಹಿಕ ಜೀವನ ಕಳೆಯುತ್ತಿದ್ದಾರೆ.

ಇದೀಗ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ದಂಪತಿಗೆ ಹುಟ್ಟಿದ ಮಗ ಅರ್ಹಾನ್ ಖಾನ್ ವಿಡಿಯೋ ಒಂದು ಸೋಷಿಯಲ್  ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅರ್ಹಾನ್ ಖಾನ್ ಹೊಸದಾಗಿ ಪಾಡ್ ಕಾಸ್ಟ್ ಆರಂಭಿಸಿದ್ದಾರೆ. ಈ ಪಾಡ್ ಕಾಸ್ಟ್ ಗೆ ತನ್ನ ತಾಯಿ ಮಲೈಕಾರನ್ನು ಅತಿಥಿಯಾಗಿ ಕರೆಸಿದ್ದಾನೆ. ಈ ವೇಳೆ ಮಲೈಕಾ ಮಗನ ವರ್ಜಿನಿಟಿ, ಲೈಂಗಿಕತೆ ಬಗ್ಗೆ ಒಪೆನ್ ಆಗಿ ಮಾತನಾಡಿದ್ದಾರೆ. ಮಲೈಕಾ ಮಗ ಅರ್ಹಾನ್ ಗೆ ನೀನು ಮೊದಲ ಬಾರಿಗೆ ಯಾವಾಗ ಸೆಕ್ಸ್ ನಲ್ಲಿ ಭಾಗಿಯಾಗಿದ್ದೆ ಎಂದು ಪ್ರಶ್ನೆ ಕೇಳಿದ್ದಾರೆ. ಆ ಮೂಲಕ ತಾನು ವರ್ಜಿನಿಟಿ ಯಾವಾಗ ಕಳೆದುಕೊಂಡೆ ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಅರ್ಹಾನ್ ಮೌನ ವಹಿಸಿದ್ದಾನೆ. ಬಳಿಕ ಈ ಬಗ್ಗೆ ಉತ್ತರಿಸಿದ ಅರ್ಹಾನ್ ತಾಯಿಗೆ ರಿವರ್ಸ್ ಪ್ರಶ್ನೆ ಕೇಳಿದ್ದಾರೆ. ನೀವು ಯಾವಾಗ ಮದುವೆ ಆಗ್ತೀರಾ ಎಂದು ಕೇಳಿದ್ದಾರೆ.

ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ತಾಯಿ ಮಗನ ನಡುವೆ ಅಂತಹ ಸಂಭಾಷಣೆ ಬೇಕಿತ್ತಾ ಎಂದು ವಿಮರ್ಶೆ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲ ಸಿನೆಮಾ ತಾರೆಯರಿಗೆ ಬೆಲೆನೇ ಇಲ್ಲ. ದುಡ್ಡಿಗಾಗಿ ಯಾರ ಜೊತೆ ಏನು ಬೇಕಾದರೂ ಮಾಡೋಕೆ ಸಿದ್ದ. ತಾಯಿ-ಮಗನ ಸಂಬಂಧಕ್ಕಾದರೂ ಬೆಲೆ ಕೊಡಿ, ಈ ರೀತಿಯಲ್ಲಿ ಪಬ್ಲಿಕ್ ಆಗಿ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Most Popular

To Top