ಶಿವರಾಜ್ ಕುಮಾರ್ – ರಾಮಚರಣ್ ಸಿನೆಮಾದಲ್ಲಿ ನಟಿಸಲಿದ್ದಾರೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್…..!

ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸಾಲು ಸಾಲು ಹಾಟ್ ಪೊಟೋಗಳ ಮೂಲಕ ಗ್ಲಾಮರ್‍ ಸುನಾಮಿಯನ್ನು ಎಬ್ಬಿಸುತ್ತಿದ್ದಾರೆ.  ಮೈಂಡ್ ಬ್ಲಾಕ್ ಆಗುವಂತಹ ಹಾಗೂ ಫಿದಾ ಆಗುವಂತಹ ಪೊಟೋಗಳನ್ನು ಶೇರ್‍ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಯಾವುದೇ ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಆದಂತಹ ಪೋಸ್ ಕೊಡುತ್ತಿದ್ದಾರೆ. ಸದ್ಯ ಜಾನ್ವಿ ಕಪೂರ್‍ ದೇವರ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾದಲ್ಲಿ ಆಕೆ ಜೂನಿಯರ್‍ ಎನ್.ಟಿ.ಆರ್‍ ರವರ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಸದ್ಯ ಜಾನ್ವಿ ಕಪೂರ್‍ ಸೌತ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ದೇವರ ಸಿನೆಮಾದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಆಕೆ ಅಭಿನಯದ ಸೌತ್ ಸಿನೆಮಾ ಇನ್ನೂ ಒಂದೂ ಸಹ ಬಿಡುಗಡೆಯಾಗಿಲ್ಲ. ಆದರೆ ಆಕೆಗೆ ಸೌತ್ ನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಬರುತ್ತಿವೆ ಎನ್ನಲಾಗುತ್ತಿದೆ. ಇದೀಗ ಜಾನ್ವಿ ಕಪೂರ್‍ ಮತ್ತೊಂದು ಕ್ರೇಜಿ ಪ್ರಾಜೆಕ್ಟ್ ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. RRR ಸಿನೆಮಾದ ಮೂಲಕ ಪ್ಯಾನ್ ವರ್ಲ್ಡ್ ಸ್ಟಾರ್‍ ಆಗಿರುವ ರಾಮ್ ಚರಣ್ ಜೊತೆಗೆ ಜಾನ್ವಿ ಕಪೂರ್‍ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಜಾನ್ವಿ ಕಪೂರ್‍ ಪ್ಯಾನ್ ವರ್ಲ್ಡ್ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ ರವರ ದೇವರ ಸಿನೆಮಾದಲ್ಲಿ ನಾಯಕಿಯಾಗಿದ್ದಾರೆ. ಸದ್ಯ ರಾಮ್ ಚರಣ್ ಗೇಮ್ ಚೇಂಜರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕ ನಿರ್ದೇಶಕ ಬುಚ್ಚಿಬಾಬು ರವರ ಜೊತೆಗೆ ಸಿನೆಮಾ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಸಹ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್‍ ಆಯ್ಕೆಯಾಗಿದ್ದಾರೆ.

ಮಾ.6 ರಂದು ಜಾನ್ವಿ ಕಪೂರ್‍ ರವರ  ಹುಟ್ಟುಹಬ್ಬವಾಗಿದ್ದು, ಬುಚ್ಚಿಬಾಬು ಹಾಗೂ ರಾಮ್ ಚರಣ್ ರವರ RC16 ಸಿನೆಮಾ ತಂಡದ ವತಿಯಿಂದ ಸ್ಪೇಷಲ್ ಆಗಿ ಜಾನ್ವಿ ಕಪೂರ್‍ ರವರಿಗೆ ಶುಭಾಷಯ ಕೋರಿದ್ದಾರೆ. ಈ ಸಿನೆಮಾವನ್ನು ವೃದ್ದಿ ಸಿನೆಮಾಸ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, RC16 ಕ್ಕೆ ನಾವು ಜಾನ್ವಿ ಕಪೂರ್‍ ರವರಿಗೆ ಸ್ವಾಗತ ಕೋರುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಸಹ ನಟಿಸಲಿದ್ದಾರೆ. ಇತ್ತೀಚಿಗಷ್ಟೆ ನಿರ್ದೇಶನ ಬುಚ್ಚಿಬಾಬು ಶಿವರಾಜ್ ಕುಮಾರ್‍ ರವರಿಗೆ ಕಥೆಯನ್ನು ಹೇಳಿದ್ದು, ಈ ಕಥೆ ಶಿವರಾಜ್ ಕುಮಾರ್‍ ರವರಿಗೆ ತುಂಬಾ ಮೆಚ್ಚುಗೆಯಾಗಿದೆ ಎಂದೂ ಸಹ ಹೇಳಲಾಗುತ್ತಿದೆ. ಇದೊಂದು ಪಕ್ಕಾ ಆಕ್ಷನ್ ಸಿನೆಮಾ ಆಗಲಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.