ಲಿಪ್ ಲಾಕ್ ದೃಶ್ಯದ ಬಗ್ಗೆ ಯಂಗ್ ಬ್ಯೂಟಿ ಅನನ್ಯಾ ನಾಗಳ್ಳ ಕ್ರೇಜಿ ಕಾಮೆಂಟ್ಸ್, ಮೊದಲ ಬೇಡ ಅಂದುಕೊಂಡೆ, ಬಳಿಕ ಗೊತ್ತಾಯ್ತು ಎಂದ ನಟಿ…..!

ತೆಲುಗು ನಟಿ ಅನನ್ಯ ನಾಗಳ್ಳ ಸದ್ಯ ಸೋಷಿಯಲ್ ಮಿಡಿಯಾದ ಮೂಲಕ ಎಲ್ಲರ ಕ್ರಷ್ ಆಗಿಬಿಟ್ಟಿದ್ದಾರೆ. ವಕೀಲ್ ಸಾಭ್ ಸಿನೆಮಾದ ಬಳಿಕ ಅನನ್ಯ ಕ್ರೇಜ್ ಮತಷ್ಟು ಹೆಚ್ಚಾಗಿದೆ. ಇದೀಗ ಸಿನೆಮಾಗಳಲ್ಲಿ ಆಕೆ ತನ್ನದೇ ಆದ ಕ್ರೇಜ್ ದಕ್ಕಿಸಿಕೊಳ್ಳುತ್ತಾ ಸಿನಿರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಜತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದು ಆಕೆ ತನ್ನ ಗ್ಲಾಮರ್‍ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಆಕೆ ಲಿಪ್ ಲಾಕ್ ದೃಶ್ಯದ ಬಗ್ಗೆ ಕ್ರೇಜಿ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಟಾಲಿವುಡ್ ಯಂಗ್ ಬ್ಯೂಟಿ ಅನನ್ಯಾ ನಾಗಳ್ಳ ವಕೀಲ್ ಸಾಭ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯಾಗಿದ್ದಾರೆ. ಟ್ಯಾಲೆಂಟೆಡ್ ನಟಿ ಅನನ್ಯಾ ನಾಗಳ್ಳ ಇದೀಗ ಹಂತ ಹಂತವಾಗಿ ಸಿನೆಮಾಗಳಲ್ಲಿ ಕ್ರೇಜ್ ಹೆಚ್ಚಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ವಕೀಲ್ ಸಾಬ್ ಸಿನೆಮಾದಲ್ಲಿ ಮುಗ್ದ ಹುಡುಗಿಯಂತೆ ಅಭಿನಯಿಸಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ತನ್ನ ವರಸೆ ಬೇರೆಯದ್ದೇ ಇದೆ. ಇನ್ನೂ ತಾನು ಗ್ಲಾಮರಸ್ ಸಿನೆಮಾಗಳಲ್ಲೂ ಸಹ ನಟಿಸಲು ಸಿದ್ದವಾಗಿದ್ದಾರೆ ಎಂಬುದನ್ನು ಸಾರಿ ಹೇಳುವಂತೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಆಕೆ ಪೊಟ್ಟೆಲು ಎಂಬ ಸಿನೆಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದು, ಈ ಸಿನೆಮಾದಲ್ಲಿನ ಲಿಪ್ ಲಾಕ್ ದೃಶ್ಯದ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಅನನ್ಯ ನಾಗಳ್ಳ ಕೆರಿಯರ್‍ ಆರಂಭದಲ್ಲಿ ಹೆಚ್ಚು ಗ್ಲಾಮರ್‍ ಶೋ ಮಾಡದೇ ಸಿನೆಮಾಗಳಲ್ಲಿ ನಟಿಸುತ್ತಿದ್ದರು. ಇದೀಗ ಆಕೆ ತನ್ನ ರೂಟ್ ಬದಲಿಸಿದ್ದಾರೆ. ಸದ್ಯ ಆಕೆ ಪೊಟ್ಟೆಲು ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದಲ್ಲಿ ಆಕೆ ಬೋಲ್ಡ್ ಆಗಿ ನಟಿಸಿದ್ದಾರೆ. ಈ ಸಿನೆಮಾ ಮಾ.15 ರಂದು ತೆರೆಕಾಣಲಿದೆ. ಈ ಸಿನೆಮಾದ ಪ್ರಚಾರ ಕಾರ್ಯಕ್ರಮ ಸಹ ಭರದಿಂದ ಸಾಗುತ್ತಿದ್ದು, ಪ್ರಚಾರದ ನಿಮಿತ್ತ ಆಕೆ ಮಾತನಾಡುತ್ತಾ, ಲಿಪ್ ಲಾಕ್ ದೃಶ್ಯದ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ಆಂಕರ್‍ ಪ್ರಶ್ನೆ ಕೇಳುತ್ತಾ ನೀವು ಇಲ್ಲಿಯವರೆಗೂ ಬೋಲ್ಡ್ ಆಗಿ ನಟಿಸಿಲ್ಲ. ಆದರೆ ಪೊಟ್ಟೆಲು ಸಿನೆಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದೀರಾ, ತಮ್ಮ ಮುಂದಿನ ಸಿನೆಮಾ ತಂತ್ರ ದಲ್ಲೂ ಸಹ ಅಂತಹ ದೃಶ್ಯಗಳು ಇರುತ್ತಾ ಎಂದು ಪ್ರಶ್ನೆ ಕೇಳಿದ್ದಾರೆ. ಆಂಕರ್‍ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನನ್ಯಾ, ತಂತ್ರ ಸಿನೆಮಾದಲ್ಲಿ ಎಮೋಷನ್, ಗ್ಲಾಮರ್‍, ರೊಮ್ಯಾಂಟಿಕ್, ಹಾರರ್‍ ಎಲ್ಲಾ ಸನ್ನಿವೇಶಗಳೂ ಇದೆ ಎಂದಿದ್ದಾರೆ.

ಇದೇ ಸಮಯದಲ್ಲಿ ಮತ್ತೊಂದು ಪ್ರಶ್ನೆ ಸಹ ಕೇಳಿಬಂದಿದೆ. ನೀವು ಕೆರಿಯರ್‍ ಆರಂಭದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸೊಲ್ಲ ಎಂದಿದ್ದೀರಾ ಎಂದು ಕೇಳಿದ್ದು, ಅದಕ್ಕೆ ಉತ್ತರಿಸುತ್ತಾ ನಗುತ್ತಾ ವಿವರಣೆ ನೀಡಿದ್ದಾರೆ. ಆಗ ಸಿನಿರಂಗದ ಬಗ್ಗೆ ನನಗೆ ಏನು ತಿಳಿದಿರಲಿಲ್ಲ. ಕೇವಲ ನಟನೆಗೆ ಮಾತ್ರ ಅವಕಾಶ ಇರುವ ಪಾತ್ರಗಳನ್ನು ಮಾಡಬೇಕು ಎಂದು ಅನ್ನಿಸಿತ್ತು. ಇದೀಗ ಮೆಚ್ಯುರಿಟಿ ಬಂದಿದ್ದು, ಅರ್ಥವಾಗುತ್ತಿದೆ. ಬೋಲ್ಡ್ ಆಗಿ ನಟಿಸೋದು ಅಭಿನಯದ ಭಾಗವೇ. ಓರ್ವ ಮನುಷ್ಯ ಬೆಳೆಯುತ್ತಿದ್ದಂತೆ ಪ್ರತಿ ಆರು ತಿಂಗಳಿಗೊಮ್ಮೆ ಆಲೋಚನೆಗಳು, ಅಭಿಪ್ರಾಯಗಳು ಬದಲಾಗುತ್ತಿರುತ್ತದೆ. ಆದ್ದರಿಂದಲೇ ಆಗ ಆ ರೀತಿ ಹೇಳಿದ್ದೆ ಎಂದು ಹೇಳಿದ್ದಾರೆ. ಸದ್ಯ ಅನನ್ಯಾ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.