Film News

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್?

ಟಾಲಿವುಡ್ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ RRR ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡು ಗ್ಲೋಬಲ್ ಸ್ಟಾರ್‍ ಆಗಿದ್ದಾರೆ. ಈ ಸಿನೆಮಾದ ಬಳಿಕ ಚರಣ್ ಸ್ಟಾರ್‍ ನಿರ್ದೇಶಕ ಶಂಕರ್‍ ಜೊತೆಗೆ ಗೇಮ್ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿಕೊಂಡಿದೆ. ಈ ಸಿನೆಮಾದ ಬಳಿಕ ಚರಣ್ ನಿರ್ದೇಶಕ ಸನಾ ಬುಚ್ಚಿಬಾಬು ನಿರ್ದೇಶನದಲ್ಲಿ ಸಿನೆಮಾ ಮಾಡಲಿದ್ದು, ಈ ಸಿನೆಮಾದಲ್ಲಿ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ನಟಿಸಲಿದ್ದಾರೆಂಬ ಸುದ್ದಿಯೊಂದು ಹರಿದಾಡುತ್ತಿದೆ.

ಉಪ್ಪೆನಾ ಸಿನೆಮಾದ ಮೂಲಕ ತನ್ನ ಟ್ಯಾಲೆಂಟ್ ನಿರೂಪಿಸಿಕೊಂಡ ನಿರ್ದೇಶಕ ಸಾನಾ ಬುಚ್ಚಿಬಾಬು ನಿರ್ದೇಶನದಲ್ಲಿ ಕಬ್ಬಡಿ ಆಟದ ಥೀಮ್ ನೊಂದಿಗೆ ಸಿನೆಮಾವನ್ನು ಮಾಡಲಿದ್ದಾರೆ. ಈ ಸಿನೆಮಾದಲ್ಲಿ ನಾಯಕನಾಗಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‍.ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಇದೀಗ ಈ ಸಿನೆಮಾದ ನಾಯಕಿಯ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಲಿದ್ದು, ಈ ಸಿನೆಮಾದಲ್ಲಿ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಚರಣ್ ಗೆ ಹಿರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ  ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ NTR30 ಸಿನೆಮಾದ ಮೂಲಕ ಜಾನ್ವಿ ಕಪೂರ್‍ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ರಾಮ್ ಚರಣ್ ಜೊತೆಗೆ ತೆರೆಹಂಚಿಕೊಳ್ಳಲಿದ್ದು, ಈ ಸುದ್ದಿಯನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಬಹುದು ಎನ್ನಲಾಗುತ್ತಿದೆ.

ಈ ಸಿನೆಮಾಗಾಗಿ ಚರಣ್ ರವರೊಂದಿಗೆ ನಟಿಸಲು ಅನೇಕ ನಟಿಯರ ಹೆಸರುಗಳು ಕೇಳಿಬಂದವು. ಯಾರೂ ಸಹ ಸೆಟ್ ಆಗದ ಕಾರಣ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್‍ ರವರ ಹೆಸರನ್ನು ಫೈನಲ್ ಮಾಡಲಾಗಿದೆಯಂತೆ. ಇನ್ನೂ ಈ ಸಿನೆಮಾದಲ್ಲಿ ಚರಣ್ ದ್ವಿಪಾತ್ರಾಭಿನಯದಲ್ಲಿ ನಟಿಸಲಿದ್ದಾರಂತೆ. ಚರಣ್ ಮೊದಲ ಪಾತ್ರಕ್ಕೆ ಜಾನ್ವಿ ಕಪೂರ್‍ ಆತನ ಲವರ್‍ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಮತ್ತೊಂದು ಪಾತ್ರಕ್ಕಾಗಿ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ರವರನ್ನು ತೆಗೆದುಕೊಂಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಬಹುದು ಎಂದು ಹೇಳಲಾಗುತ್ತಿದೆ.

ಸದ್ಯ ಜಾನ್ವಿ ಕಪೂರ್‍ NTR30 ಸಿನೆಮಾಗಾಗಿ ಬರೊಬ್ಬರಿ 5 ಕೋಟಿ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರಂತೆ. ಆದರೆ ಬಾಲಿವುಡ್ ನಲ್ಲಿ ಆಕೆ 3.5 ಕೋಟಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರಂತೆ. ಇನ್ನೂ ರಾಮ್ ಚರಣ್ ಜೊತೆಗೆ ನಟಿಸಲು ಆಕೆ ಅದೇ ಮೊತ್ತದ ಸಂಭಾವನೆಯನ್ನು ಸಹ ಪಡೆದುಕೊಳ್ಳಲಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಸದ್ಯ ಚರಣ್ ತನ್ನ ಪತ್ನಿ ಉಪಾಸನಾ ಜೊತೆಗೆ ವೇಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

Most Popular

To Top