ಮೊಣಕಾಲಿನ ಮೇಲೆ ತಿರುಮಲ ಮೆಟ್ಟಿಲುಗಳನ್ನು ಏರಿದ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ, ವೈರಲ್ ಆದ ವಿಡಿಯೋ….!

Follow Us :

ಬಣ್ಣದ ಲೋಕದಲ್ಲಿ ಭಾರಿ ಹೆಸರು ಪಡೆದುಕೊಂಡ ನಟಿಯರಲ್ಲಿ ದಿವಂಗತ ಶ್ರೀದೇವಿ ಸಹ ಒಬ್ಬರಾಗಿದ್ದಾರೆ. ಆಕೆಯ ಪುತ್ರಿ ಜಾನ್ವಿ ಕಪೂರ್‍ ಸಹ ಸಿನೆಮಾ ರಂಗದಲ್ಲಿ ಸಕ್ಸಸ್ ಕಾಣಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಆಕೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸುಮಾರು ವರ್ಷಗಳು ಕಳೆದರೂ ಆಕೆಗೆ ಇನ್ನೂ ಸಕ್ಸಸ್ ಸಿಗಲಿಲ್ಲ. ಸದ್ಯ ಆಕೆ ಸೌತ್ ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇನ್ನೂ ನಟಿ ಜಾನ್ವಿ ಕಪೂರ್‍  ಮೊಣಕಾಲಿನ ಮೇಲೆ ಮೆಟ್ಟಿಲುಗಳನ್ನು ಏರಿ ಬಾಲಾಜಿಯ ದರ್ಶನ ಪಡೆದುಕೊಂಡಿದ್ದು, ಈ ಸಂಬಂಧ ವಿಡಿಯೋ ತುಂಬಾನೆ ವೈರಲ್ ಆಗುತ್ತಿದೆ.

ಬಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್‍ ಸದಾ ತಮ್ಮ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಲೇ ಇರುತ್ತಾರೆ. ಆಕೆ ಯಾವುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಸಹ ಹಾಟ್ ಆಗಿಯೇ ಪೋಸ್ ಕೊಡುವುದು ಆಕೆಗೆ ತಿಳಿದೇ ಇದೆ. ಸೌಂದರ್ಯ ಪ್ರದರ್ಶನದಲ್ಲಿ ಆಕೆ ತಾಯಿಯನ್ನು ಸಹ ಮೀರಿಸುತ್ತಿದ್ದಾರೆ. ಆಕೆ ಸಿನೆಮಾಗಳಲ್ಲಿ ಹೆಚ್ಚು ಫೇಮಸ್ ಆಗಿದ್ದಕ್ಕಿಂತ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ ಎನ್ನಬಹುದಾಗಿದೆ.  ಬಾಲಿವುಡ್ ನಲ್ಲಿ ಗ್ಲಾಮರ್‍ ಗೆ ತುಂಬಾನೆ ಪ್ರಾಧಾನ್ಯತೆ ಇದೆ. ಈ ಕಾರಣದಿಂದಲೇ ಆಕೆ ಸದಾ ಗ್ಲಾಮರಸ್ ಪೋಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಟೂಪೀಸ್ ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ತೆರೆದ ಪುಸ್ತಕದಂತೆ ಗ್ಲಾಮರ್‍ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ.

ಸದ್ಯ ಜಾನ್ವಿ ಕಪೂರ್‍ ಕಾಲ್ನಡಿಗೆಯ ಮೂಲಕ ತಿರುಮಲದ ಮೆಟ್ಟಿಲುಗಳನ್ನು ಏರಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜಾನ್ವಿ ಕಪೂರ್‍ ಗೆ ದೈವ ಭಕ್ತಿ ಹೆಚ್ಚಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಆಕೆ ತಿರುಮಲಕ್ಕೆ ಆಗಾಗ ಬರುತ್ತಲೇ ಇರುತ್ತಾರೆ. ಇದೀಗ ಜಾನ್ವಿ ಕಪೂರ್‍ ತಿರುಮಲಕ್ಕೆ ಹೋದ ವಿಡಿಯೋ ಒಂದನ್ನು ತನ್ನ ಸೋಷಿಯಲ್ ಮಿಡಿಯಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜಾನ್ವಿ ಕಪೂರ್‍ ಮೊಣಕಾಲು ಮೆಟ್ಟಿಲುಗಳ ಬಳಿ ಮೊಣಕಾಲಿನ ಮೇಲೆ ಮೆಟ್ಟಿಲುಗಳನ್ನು ಏರಿದ್ದಾರೆ. ಜೊತೆಗೆ ಸುಮಾರು 50 ಬಾರಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ತಿರುಮಲ ದೇವಾಲಯ ಎಂದರೇ ನನಗೆ ತುಂಬಾ ಇಷ್ಟ ಎಂದು ಜಾನ್ವಿ ಕಪೂರ್‍ ಹೇಳಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ದೇವರ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾದಲ್ಲಿ ಯಂಗ್ ಟೈಗರ್‍ ಎನ್.ಟಿ.ಆರ್‍ ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಜಾನ್ವಿ ಮೆಗಾ ಕುಟುಂಬದ ರಾಮ್ ಚರಣ್ ತೇಜ್ ಜೊತೆಗೆ RC16 ಸಿನೆಮಾದಲ್ಲೂ ನಟಿಸುತ್ತಿದ್ದು, ಕಳೆದೆರಡು ದಿನಗಳ ಹಿಂದೆಯಷ್ಟೆ ಈ ಸಿನೆಮಾ ಪೂಜಾ ಕಾರ್ಯಕ್ರಮ ಸಹ ನಡೆದಿತ್ತು.