Film News

ವೇಕಷನ್ ಮೂಡ್ ನಲ್ಲಿ ಯಶ್-ರಾಧಿಕಾ ದಂಪತಿ, ವೈರಲ್ ಆದ ಪೊಟೋಸ್, ರಾಧಿಕಾ ಪರ್ಸನಲ್ ಪೋಟೋಗ್ರಾಫರ್ ಯಾರು ಗೊತ್ತಾ?

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅನೇಕ ಜೋಡಿಗಳಿಗೆ ಮಾದರಿಯಾಗಿದ್ದಾರೆ. ಮದುವೆಯಾದಾಗಿನಿಂದ ತುಂಬಾ ಅನ್ಯೋನ್ಯತೆಯಿಂದ ಈ ಜೋಡಿ ಜೀವನ ಸಾಗಿಸುತ್ತಿದ್ದಾರೆ. ಯಶ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ರಾಧಿಕಾ ಪಂಡಿತ್ ಮಕ್ಕಳ ಲಾಲನೆ-ಪಾಲನೆ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಈ ಕ್ಯೂಟ್ ಜೋಡಿ ವೇಕೇಷನ್ ಎಂಜಾಯ್ ಮಾಡುತ್ತಿದ್ದು, ಈ ವೆಕೇಷನ್ ನಲ್ಲಿ ತೆಗೆದಂತಹ ಪೊಟೋಗಳು ಸೋಷಿಯಲ್ ಮಿಡಿಯಾ ತುಂಬಾ ಹರಿದಾಡುತ್ತಿದೆ.

ಸದ್ಯ ನಟ ಯಶ್ ಟಾಕ್ಸಿಕ್ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನೆಮಾ ಶೂಟಿಂಗ್ ನಿಂದ ಬಿಡುವು ಸಿಕ್ಕ ಹಿನ್ನೆಲೆಯಲ್ಲಿ ಇದೀಗ ತನ್ನ ಕುಟುಂಬದೊಂದಿಗೆ ವೆಕೇಷನ್ ಗೆ ಹಾರಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಈ ಜೋಡಿ ವೆಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಕಳೆದ ವರ್ಷ ಕ್ರಿಸ್ ಮಸ್ ಹಾಗೂ ತಮ್ಮ ವಿವಾಹ ವಾರ್ಷಿಕೊತ್ಸವದ ಆಚರಣೆಗಾಗಿ ಲಂಡನ್ ಗೆ ಹಾರಿದ್ದರು. ಯಶ್ ರವರಿಗೂ ಸಹ ಮಕ್ಕಳೊಂದಿಗೆ ಸಮಯ ಕಳೆಯೋದು ತುಂಬಾನೆ ಇಷ್ಟ ಎಂದು ಹೇಳಲಾಗುತ್ತಿದೆ. ಇದೀಗ ಈ ಜೋಡಿ ತಮ್ಮ ಮಕ್ಕಳೊಂದಿಗೆ ವೆಕೇಷನ್ ಗೆ ಹಾರಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

ನಟ ಯಶ್ ಹಾಗೂ ರಾಧಿಕಾ ತಮ್ಮಿಬ್ಬರು ಮಕ್ಕಳೊಂದಿಗೆ ವೆಕೇಷನ್ ಗೆ ಹಾರಿದ್ದಾರೆ. ಕಡಲ ತೀರದಲ್ಲಿ ಈ ಜೋಡಿ ಎಂಜಾಯ್ ಮಾಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಹಾಗೂ ಯಶ್ ಪೊಟೋಗಳನ್ನು ಐರಾ ತೆಗೆದಿದ್ದಾಳೆ. ಮಗಳು ಪೊಟೋ ತೆಗೆಯುತ್ತಿದ್ದರೇ ಯಶ್ ಪೋಸ್ ಕೊಟ್ಟಿದ್ದಾರೆ. ರಾಧಿಕಾ ಪಂಡಿತ್ ಈ ಎಲ್ಲಾ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳ ಜೊತೆಗೆ ಆಕೆ ಇವರೇ ನೋಡಿ ನನ್ನ ಪರ್ಸನಲ್ ಪೋಟೋಗ್ರಾಫರ್‍ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನಟ ಯಶ್ ಹಾಗೂ ನಟಿ ರಾಧಿಕಾ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆದಿದ್ದಾರೆ. ಸದ್ಯ ಯಶ್ ಟಾಕ್ಸಿಕ್ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಸಿನೆಮಾದ ಬಳಿಕ ಯಶ್ ನಟಿಸುತ್ತಿರುವ ಟಾಕ್ಸಿಕ್ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಜೊತೆಗೆ ನಟಿ ರಾಧಿಕಾ ರವರೂ ಸಹ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಬೇಕೆಂದು ಆಕೆಯ ಅಭಿಮಾನಿಗಳು ಬೇಡಿಕೆಯನ್ನು ಇಡುತ್ತಿದ್ದಾರೆ ಎನ್ನಲಾಗಿದೆ.

Most Popular

To Top