Film News

ಕ್ಯಾಮೆರಾಮೆನ್ ಗಳ ಮೇಲೆ ಬೇಸರಗೊಂಡ ಸೈಫ್, ಇನ್ನೇಕೆ ಬೆಡ್ ರೂಂ ಗೂ ಬಂದು ಬಿಡಿ ಎಂದ್ರು…!

ಸಿನೆಮಾ ಸೆಲೆಬ್ರೆಟಿಗಳ ಪಾಪರಾಜಿಗಳು ಹಿಂದೆಯೇ ಅವರನ್ನು ತಮ್ಮ ಕ್ಯಾಮೆರಾಗಳಲ್ಲಿ ಬಂದಿಸಲು ಕಾದಿರುತ್ತಾರೆ. ಸ್ಟಾರ್‍ ಕಲಾವಿದರು ಹೊರ ಪ್ರಪಂಚದಲ್ಲಿ ಕಾಣಿಸಿಕೊಂಡರೇ ಸಾಕು ಅವರ ಹಿಂದೆಯೇ ಓಡುತ್ತಿರುತ್ತಾರೆ. ಇದೀಗ ಬಾಲಿವುಡ್ ಸ್ಟಾರ್‍ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್‍ ಕಾರ್ಯಕ್ರಮವೊಂದರಲ್ಲಿ ಹಾಜರಾಗಲು ಹೋಗುತ್ತಿದ್ದಾಗ ಅವರ ಹಿಂದೆಯೇ ಕ್ಯಾಮೆರಾ ಮೆನ್ ಗಳು ಬಿದ್ದಿದ್ದು, ಅವರನ್ನು ಕಂಡು ಸೈಫ್ ಅಲಿ ಖಾನ್ ಬೇಸರ ವ್ಯಕ್ತಪಡಿಸಿ, ಇನ್ನೇಕೆ ತಡ ಬೆಡ್ ರೂಂ ಗೂ ಬಂದು ಬಿಡಿ ಎಂದು ಆಕ್ರೋಷಗೊಂಡಿದ್ದಾರೆ.

 

ಸಾಮಾನ್ಯವಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಸ್ಟಾರ್‍ ಸೆಲೆಬ್ರೆಟಿಗಳು ಬಂದಾಗ ಅದನ್ನು ಕವರೇಜ್ ಮಾಡಲು ಹಿಂದೆ ಬೀಳುವುದು ಸಹಜ. ಆದರೆ ಅವರ ಖಾಸಗಿ ಸಮಯದಲ್ಲೂ ಸಹ ಕ್ಯಾಮೆರಾ ಹಿಡಿದು ಹೋದರೇ ಎಂತಹ ನಟರಿಗಾದರೂ ಕೋಪ ಬರುತ್ತದೆ. ಇಂತಹ ಅನೇಕ ಘಟನೆಗಳೂ ಸಹ ನಡೆದಿದೆ. ಖಾಸಗಿ ಸಮಯ ಕಳೆಯಲು ಬಂದಾಗ ಸೆಲೆಬ್ರೆಟಿಗಳಿಗೆ ಕಿರಿಕಿರಿ ಉಂಟಾಗಿ ಅನೇಕ ಭಾರಿ ಕ್ಯಾಮೆರಾಮೆನ್ ಗಳ ವಿರುದ್ದ ಆಕ್ರೋಷ ಗೊಂಡ ಸನ್ನಿವೇಶಗಳೂ ಸಹ ನಡೆದಿದೆ. ಇದೀಗ ಅಂತಹುದೇ ಸನ್ನಿವೇಶ ಮತ್ತೊಂದು ನಡೆದಿದೆ. ನಟ ಸೈಫ್ ಅಲಿಖಾನ್ ಹಾಗೂ ಆತನ ಪತ್ನಿ ಕರಿನಾ ಕಪೂರ್‍ ಮಲೈಕಾ ಅರೋರಾ ತಾಯಿ ಜೋಯ್ ಸಿ 70ನೇ ವರ್ಷದ ಹುಟ್ಟುಹಬ್ಬಕ್ಕೆ ಹೋಗಿದ್ದಾರೆ. ಆಗ ಅಲ್ಲಿದ್ದ ಕ್ಯಾಮೆರಾಮೆನ್ ಗಳು ಅವರ ಪೊಟೋಗಳನ್ನು ತೆಗೆದಿದ್ದಾರೆ. ಅಷ್ಟೇ ಆಗಿದ್ದರೇ ಸೈಫ್ ಕೋಪಗೊಳ್ಳುತ್ತಿರಲಿಲ್ಲ.

ಈ ಸ್ಟಾರ್‍ ದಂಪತಿ ಮನೆಗೆ ಬಂದರೂ ಅವರ ಹಿಂದೆಯೇ ಬರುತ್ತಾ ಪೊಟೋಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದರು. ಇದರಿಂದ ಸೈಫ್ ಅಲಿ ಖಾನ್ ಗೆ ಕೋಪ ಬಂದಿದೆ. ಇನ್ನೇಕೆ ತಡ ಬೆಡ್ ರೂಂ ಗೂ ಬಂದು ಪೊಟೋಗಳನ್ನು ತೆಗೆಯಿರಿ ಎಂದು ಕೋಪಗೊಂಡ ಮಾತನಾಡಿದ್ದಾರೆ. ಫ್ರಸ್ಟ್ರೇಷನ್ ನಲ್ಲಿ ಸೈಫ್ ಅಲಿ ಖಾನ್ ಈ ಮಾತನ್ನು ಹೇಳಿದ್ದಾರೆ. ಆದರೆ ಕರಿನಾ ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿದ್ದಾರೆ. ಬಳಿಕ ಕ್ಯಾಮೆರಾಮೆನ್ ಗಳೂ ಸಹ ಸೈಫ್ ಸರ್‍ ವಿ ಲವ್ ಯು ಎಂದು ಹೇಳಿದ್ದಾರೆ. ಬಳಿಕ ಸೈಫ್ ಸಹ ಕೂಲ್ ಆಗಿ ನಮಗೂ ನೀವು ಎಂದರೇ ಇಷ್ಟ ಎಂದು ಹೇಳಿ ಮನೆಯೊಳಗೆ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಬಾಲಿವುಡ್ ಸ್ಟಾರ್‍ ನಟಿ ಅಲಿಯಾ ಭಟ್ ರವರ ಮನೆಯಲ್ಲಿನ ಕೆಲವೊಂದು ಪೊಟೋಗಳನ್ನು ತೆಗೆದಿದ್ದರು. ಇದಕ್ಕೆ ಆಲಿಯಾ ಸಹ ಆಕ್ರೋಷಗೊಂಡಿದ್ದರು. ನಮ್ಮ ಖಾಸಗಿ ಜೀವನಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆಕೆ ಕೋಪಗೊಂಡಿದ್ದರು. ಇದೀಗ ಸೈಫ್ ಅಲಿ ಖಾನ್ ಸಹ ಖಾಸಗಿ ಜೀವನಕ್ಕೆ ಅಡ್ಡಿಯಾಗುತ್ತಿದೆ ಎಂಬ ದೃಷ್ಟಿಯಿಂದ ಕ್ಯಾಮೆರಾಮೆನ್ ಗಳ ಮೇಲೆ ಆ‌ಕ್ರೋಷಗೊಂಡಿದ್ದಾರೆ ಎನ್ನಲಾಗಿದೆ.

Most Popular

To Top