ಮುಂದೆ ನಿಂತು ಮನೋಜ್ ಮದುವೆ ಕೆಲಸಗಳನ್ನು ನೋಡಿಕೊಂಡ ಮಂಚು ಲಕ್ಷ್ಮೀ, ವೈರಲ್ ಆದ ಮದುವೆ ಪೊಟೋಗಳು..!

Follow Us :

ಸುಮಾರು ದಿನಗಳಿಂದ ಹರಿದಾಡುತ್ತಿರುವಂತಹ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾ ರೆಡ್ಡಿಯವರ ಮದುವೆಯ ರೂಮರ್‍ ಗಳಿಗೆ ಅಧಿಕೃತವಾಗಿ ಚೆಕ್ ಇಟ್ಟಂತಾಗಿದೆ. ಹೈದರಾಬಾದ್ ನ ಮಂಚು ಲಕ್ಷ್ಮೀ ರವರ ಮನೆಯಲ್ಲಿ ಶುಕ್ರವಾರ (ಮಾ.3) ರಂದು ರಾತ್ರಿ 8.30 ಕ್ಕೆ ಸರಳವಾಗಿ ಮದುವೆ ನಡೆದಿದೆ. ಇಡೀ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮನೋಜ್ ಸಹೋದರಿ ಮಂಚು ಲಕ್ಷ್ಮೀ ರವರೇ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಮದುವೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.

ಮಂಚು ಮನೋಜ್ ಹಾಗೂ ಮೋನಿಕಾ ಮದುವೆ ಸಂಭ್ರಮ ಜೋರಾಗಿದೆ. ಮಂಚು ಲಕ್ಷ್ಮೀ ಪ್ರಸನ್ನ ಮನೆಯಲ್ಲಿಯೇ ಮದುವೆ ಸಂಭ್ರಮ ನಡೆಯುತ್ತಿದೆ. ಮೆಹಂದಿ ಕಾರ್ಯಕ್ರಮದ ಜೊತೆಗೆ ಸಂಗೀತ್ ಕಾರ್ಯಕ್ರಮ ಸಹ ಭರ್ಜರಿಯಾಗಿ ನಡೆದಿದೆ. ಇನ್ನೂ ಮಂಚು ಲಕ್ಷ್ಮೀ ಮೆಹಂದಿ ಸಂಭ್ರಮದ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಆಕೆ ಮೆಹಂದಿ ಕಾರ್ಯಕ್ರಮದ ಪೊಟೋಗಳನ್ನು ಹಂಚಿಕೊಂಡ ಬಳಿಕ ಮನೋಜ್ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ದೊರೆತಿದೆ. ಮಹಾ ಮಂತ್ರ ಪೂಜೆಯ ಮೂಲಕ ಮನೋಜ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ. ಮನೋಜ್ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮಂಚು ಲಕ್ಷ್ಮೀ ಯವರೇ ನೋಡಿಕೊಳ್ಳುತ್ತಿದ್ದಾರೆ.

ಮನೋಜ್ ಹಾಗೂ ಮೋನಿಕಾ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಮಾ.3 ರಾತ್ರಿ ಹೈದರಾಬಾದ್ ನಲ್ಲಿರುವ ಮಂಚು ಲಕ್ಷ್ಮೀ ಮನೆಯಲ್ಲಿ ಮದುವೆ ನಡೆದಿದೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಅದ್ದೂರಿಯಾಗಿ ಮದುವೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆದರೆ ಮಂಚು ಲಕ್ಷ್ಮೀ ಮಾತ್ರ ತನ್ನ ತಮ್ಮನ ಮದುವೆಯನ್ನು ತನ್ನ ಮನೆಯಲ್ಲಿಯೇ ನೆರವೇರಿಸುತ್ತಿದ್ದಾರೆ. ಮಂಚು ಮನೋಜ್ ಅಂದರೇ ಲಕ್ಷ್ಮೀ ಗೆ ತುಂಬಾನೆ ಪ್ರೀತಿ ಈ ಕಾರಣದಿಂದಲೇ ಆಕೆ ತನ್ನ ಪ್ರೀತಿಯ ತಮ್ಮನ ಮದುವೆಯನ್ನು ಮುಂದೆ ನಿಂತು ತಮ್ಮ ಮನೆಯಲ್ಲಿಯೇ ನೆರವೇರಿಸಿದ್ದಾರೆ. ಮೋನಿಕಾ ಜೊತೆ ಮನೋಜ್ ಮದುವೆಯ ಬಗ್ಗೆ ಮೋಹನ್ ಬಾಬು ಹಾಗೂ ಮನೋಜ್ ನಡುವೆ ಗಲಾಟೆ ನಡೆದಿದೆ ಎಂಬ ಮಾತುಗಳೂ ಸಹ ಇದೆ.

ಇನ್ನೂ ಮನೋಜ್ ಕಳೆದ 2015 ರಲ್ಲಿ ಪ್ರಣತಿ ರೆಡ್ಡಿ ಎಂಬಾಕೆಯೊಂದಿಗೆ ಮದುವೆಯಾಗಿದ್ದರು. ಆದರೆ 2019 ರಲ್ಲಿ ವಿಬೇದಗಳ ಕಾರಣದಿಂದ ಮನೋಜ್ ಹಾಗೂ ಪ್ರಣತಿ ವಿಚ್ಚೇದನ ಪಡೆದುಕೊಂಡರು. ಅದೇ ರೀತಿ ಮೋನಿಕಾ ಸಹ ಬೆಂಗಳೂರು ಮೂಲದ ಗಣೇಶ್ ರೆಡ್ಡಿ ಎಂಬಾತನೊಂದಿಗೆ ಮದುವೆಯಾದರು. ಕಳೆದ 2016 ರಲ್ಲಿ ಮೋನಿಕಾ ಮದುವೆಯಾಗಿದ್ದರು. ಬಳಿಕ ಮೋನಿಕಾ ಹಾಗೂ ಗಣೇಶ್ ನಡುವೆ ವಿಬೇದಗಳು ಉಂಟಾಗಿರುವ ಕಾರಣ ಇಬ್ಬರೂ ವಿಚ್ಚೇದನ ಪಡೆದುಕೊಂಡರು.