Film News

ವಿಶ್ವದಲ್ಲೇ ಅತ್ಯಂತ ದುಬಾರಿ ವಿಮಾನಯಾನ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆದ ನಟಿ ದೀಪಿಕಾ…!

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೊಣೆ ದಿನೇ ದಿನೇ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ದೀಪಿಕಾ ರವರಿಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ಆಕೆ ಇಮೇಜ್ ಸಹ ಹೆಚ್ಚಾಗುತ್ತಿದೆ. ಈಗಾಗಲೇ ಅನೇಕ ಗ್ಲೋಬಲ್ ವಸ್ತುಗಳಿಗೆ ಬ್ರಾಂಡ್ ಅಂಬಾಸಿಡರ್‍ ಸಹ ಆಗಿದ್ದಾರೆ. ಇದೀಗ ಮತ್ತೊಂದು ವಿಶ್ವ ಮಟ್ಟದ ಸಂಸ್ಥೆಯೊಂದರ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ಪ್ರಪಂಚದಲ್ಲೇ ಅತ್ಯಂತ ದುಬಾರಿ ವಿಮಾನಯಾನ ಸಂಸ್ಥೆಗೆ ರಾಯಭಾರಿಯಾಗಿದ್ದಾರೆ.

ನಟಿ ದೀಪಿಕಾ ಪಡುಕೊಣೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಮದುವೆಯಾದರೂ ಸಹ ಆಕೆ ಸಿನೆಮಾಗಳಲ್ಲಿ ಸಾಗುತ್ತಿದ್ದಾರೆ. ಜೊತೆಗೆ ಅನೇಕ ಬ್ರಾಂಡ್ ಗಳಿಗೂ ಸಹ ಅಂಬಾಸಿಡರ್‍ ಆಗಿದ್ದಾರೆ. ಈ ಹಾದಿಯಲ್ಲೇ ವಿಶ್ವದಲ್ಲೇ ಅತ್ಯಂತ ದುಬಾರಿ ವಿಮಾನಯಾನ ಎಂದೇ ಕರೆಯಲಾಗುವ ಖತಾರ್‍ ವಿಮಾನಯಾನ ಸಂಸ್ಥೆಗೆ ರಾಯಭಾರಿಯಾಗಿದ್ದಾರೆ. ಸುಮಾರು 150 ದೇಶಗಳಿಗೆ ಈ ವಿಮಾನಯಾನ ಸಂಸ್ಥೆಯಿಂದ ಸೇವೆಗಳು ದೊರೆಯುತ್ತಿದೆ. ಈ ದುಬಾರಿ ಹಾಗೂ ಲಗ್ಜುರಿ ವಿಮಾನಯಾನ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್‍ ಆಗಿ ದೀಪಿಕಾ ಪಡುಕೋಣೆ ನೇಮಕಗೊಂಡಿದ್ದಾರೆ.

ಎರ್‍ ಟ್ರಾನ್ಸ್‌ ಪೋರ್ಟ್ ರೇಟಿಂಗ್ ಆರ್ಗನೈಜೇಷನ್, ಸ್ಕೈಟ್ರಾಕ್ಸ್ ನೀಡುವಂತಹ ವರ್ಲ್ಡ್ ಏರ್‍ ಲೈನ್ ಅವಾರ್ಡ್ ನಲ್ಲಿ ಖತಾರಾ ವಿಮಾನಯಾನ ಏರ್‍ ಲೈನ್ ಆಫ್ ದಿ ಇಯರ್‍ ಅವಾರ್ಡ್ 2022 ಅನ್ನು ಸಹ ಪಡೆದುಕೊಂಡಿದೆ. ಈಗಾಗಲೇ ಖತಾರ್‍ ಏರ್‍ ವೇಸ್ ಏಳು ಭಾರಿ ಈ ಅವಾರ್ಡ್ ಪಡೆದುಕೊಂಡಿದೆ. ಜೊತೆಗೆ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಇದೀಗ ಈ ಪ್ರತಿಷ್ಟಿತ ಏರ್‍ ವೇಸ್ ಅಂಬಾಸಿಡರ್‍ ಆಗಿ ದೀಪಿಕಾ ಪಡುಕೊಣೆ ರವರನ್ನು ಆಯ್ಕೆ ಮಾಡಿದ್ದಾರೆ. ಈ ಸಂಬಂಧ ಜಾಹಿರಾತೊಂದನ್ನು ಸಹ ಖತಾರ್‍ ಏರ್‍ ವೇಸ್ ರಿಲೀಸ್ ಮಾಡಿದೆ. ಈ ವಿಡಿಯೋದಲ್ಲಿ ದೀಪಿಕಾ ಖತಾರ್‍ ಏರ್‍ ವೇಸ್ ನ ಸೌಲಭ್ಯಗಳ ಬಗ್ಗೆ ವಿವರಣೆ ನೀಡುತ್ತಾರೆ. ಇನ್ನೂ ಈ ಜಾಹಿರಾತನ್ನು ಖತಾರ್‍ ಏರ್‍ ವೇಸ್ ತಮ್ಮ ಸೋಷಿಯಲ್ ಮಿಡಿಯಾದ ಖಾತೆಯಲ್ಲಿ ನಮ್ಮ ಹೊಸ ಗ್ಲೊಬಲ್ ಬ್ರಾಂಡ್ ಅಂಬಾಸಿಡರ್‍ ಎಂದು ಪೋಸ್ಟ್ ಮಾಡಿದೆ.

ಇನ್ನೂ ಇಡೀ ವಿಶ್ವದಲ್ಲೇ ಈ ವಿಮಾನಯಾನ ಸಂಸ್ಥೆ ಟಾಪ್ ಸ್ಥಾನದಲ್ಲಿದ್ದು, ಈ ಸಂಸ್ಥೆಗೆ ದೀಪಿಕಾ ಬ್ರಾಂಡ್ ಅಂಬಾಸಿಡರ್‍ ಆಗಿದ್ದು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ದೇಶ ವಿದೇಶಗಳಿಂದಲೂ ದೀಪಿಕಾಗೆ ಶುಭಾಷಯಗಳನ್ನು ತಿಳಿಸುತ್ತಿದ್ದಾರೆ. ಇನ್ನೂ ದೀಪಿಕಾ ಇತ್ತೀಚಿಗೆ ಪಠಾನ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಸೂಪರ್‍ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಮೂವಿ ಪ್ರಾಜೆಕ್ಸ್‌-K ನಲ್ಲೂ ದೀಪಿಕಾ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ.

Most Popular

To Top