Film News

ಬಾಲಿವುಡ್ ನಟ ಮನೋಜ್ ಭಾಜ್ ಪೇಯಿ ಸಮಂತಾ ರನ್ನು ನೋಡಿ ಭಯಪಟ್ಟಿದ್ದರಂತೆ?

ಬಾಲಿವುಡ್ ಸಿನಿರಂಗದ ವಿಲಕ್ಷಣ ನಟ ಮನೋಜ್ ಭಾಜ್ ಪೇಯಿ ರಾಷ್ಟ್ರೀಯ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚಿಗೆ ಮನೋಜ್ ಗುಲ್ಮೋಹರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದ ಅಂಗವಾಗಿ ಸಂದರ್ಶನದಲ್ಲಿ ಭಾಗಿಯಾಗಿದ್ದು, ಈ ವೇಳೆ ಸಮಂತಾ ರವರ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಸಂದರ್ಶನದಲ್ಲಿ ಮನೋಜ್ ಬಾಜ್ ಪೇಯ್ ಮಾತನಾಡುತ್ತಾ, ಸಮಂತಾ ಜೊತೆಗೆ ಕೆಲಸ ಮಾಡುವುದು ತುಂಬಾನೆ ಸುಲಭ, ಆಕೆ ತನ್ನ ಪಾತ್ರಕ್ಕಾಗಿ ತುಂಬಾನೆ ಹಾರ್ಡ್ ವರ್ಕ್ ಮಾಡುತ್ತಾರೆ. ಆಕೆ ಫ್ಯಾಮಿಲ್ ಮ್ಯಾನ್ ಸೆಟ್ ನಲ್ಲಿ ಶಾರೀರಕವಾಗಿ ತುಂಬಾ ಕಷ್ಟಪಟ್ಟರು. ಅದನ್ನು ನಾನು ನೋಡಿದ್ದೇನೆ. ಭಾರಿ ವರ್ಕೌಟ್ ಮಾಡುತ್ತಾ ತನ್ನ ಶರೀರಕ್ಕೆ ಕಷ್ಟ ನೀಡುತ್ತಿದ್ದರು. ಆಕೆಯ ವರ್ಕೌಟ್ ನೋಡಿ ಒಂದು ಸಮಯದಲ್ಲಿ ನನಗೆ ತುಂಬಾ ಭಯವಾಗಿತ್ತು. ಈ ರೀತಿಯಾಗಿ ಮನೋಜ್ ಸಮಂತಾ ರನ್ನು ಮನಸಾರೆ ಹೊಗಳಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿಕೊಂಡಿದ್ದಾರೆ.  ಈ ವಿಡಿಯೋ ಟ್ವಿಟರ್‍ ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಜೊತೆಗೆ ಸಮಂತಾ ಸಹ ಈ ವಿಡಿಯೋಗೆ ರಿಪ್ಲೆ ಕೊಟ್ಟಿದ್ದಾರೆ.  ಐ ವಿಲ್ ಟ್ರೈ ಸರ್‍ ಎಂಬ ಟ್ವೀಟ್ ಮಾಡಿದ್ದಾರೆ ಸಮಂತಾ. ಇನ್ನೂ ತಮ್ಮ ಹಾರ್ಡ್ ವರ್ಕ್ ಅನ್ನು ಹೊಗಳಿದ ಹಿನ್ನೆಲೆಯಲ್ಲಿ ಎಮೋಜಿಗಳ ಮೂಲಕ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.

ಇನ್ನೂ ದಿ ಫ್ಯಾಮಿಲಿ ಮ್ಯಾನ್-2 ಸೀರಿಸ್ ಸಮಂತಾ ಗೆ ಮೊದಲ ಹಿಂದಿ ಸೀರಿಸ್ ಆಗಿದ್ದು, ಮೊದಲ ಒಟಿಟಿ ಸಹ ಆಗಿದೆ. ಈ ಸಿರೀಸ್ ಅನ್ನು ನಿರ್ದೇಶಕರಾದ ರಾಜ್ ಡಿಕೆ ನಿರ್ದೇಶನ ಮಾಡಿದ್ದಾರೆ. ಈ ಸೀರಿಸ್ ಸಸ್ಪೆನ್ಸ್ ಥ್ರಿಲ್ಲರ್‍ ಕಥೆಯನ್ನು ಒಳಗೊಂಡಿದೆ. ಈ ಸಿನೆಮಾದಲ್ಲಿ ಮನೋಜ್ ಭಾಜ್ ಪೇಯಿ, ಸಮಂತಾ, ಪ್ರಿಯಮಣಿ, ಶರದ್ ಕೇಲ್ಕರ್‍, ನೀರಜ್ ಮಾದವ್, ಷರೀಭ್ ಹಷ್ಮಿ, ದಲಿಪ್ ತಾಹಲ್, ಹಿಂದೂಜಾ, ಶ್ರೇಯಾ ಧನ್ವಂತರಿ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿರೀಸ್ ಸಮಂತಾಗೆ ನಾರ್ತ್ ನಲ್ಲಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸಮಂತಾ ಇತ್ತೀಚಿಗೆ ಯಶೋಧ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಸದ್ಯ ಶಾಕುಂತಲಂ ಸಿನೆಮಾ ಸಹ ಬಿಡುಗಡೆಗೆ ಸಿದ್ದವಾಗಿದೆ. ಬಾಲಿವುಡ್ ನಲ್ಲಿ ರಾಜ್ ಡಿಕೆ ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ ಸಿಟಾಡೆಲ್ ಇಂಡಿಯನ್ ಅವತರಣಿಕೆಯಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಸೀರಿಸ್ ನಲ್ಲಿ ಬಾಲಿವುಡ್ ಸ್ಟಾರ್‍ ನಟ ವರುಣ್ ಧವನ್ ನಟಿಸುತ್ತಿದ್ದಾರೆ.

Most Popular

To Top