ಹೊಸ ಪ್ರಿಯಕರನ್ನು ಪರಿಚಯಿಸಿದ ಅಮಿ, ನಾಲಿಗೆಯಿಂದ ಮುತ್ತಿಡುತ್ತಾ ಪೋಸ್ ಕೊಟ್ಟ ಹಾಟ್ ಬ್ಯೂಟಿ ಅಮಿ ಜಾಕ್ಸನ್….!

Follow Us :

ಸುಮಾರು ಎಂಟು ವರ್ಷಗಳ ಕಾಲ ಸಿನಿರಂಗದಲ್ಲಿ ಬ್ಯುಸಿಯಾಗಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ರವರಿಗೆ ಇಂದಿಗೂ ಸಹ ಸಿನಿರಂಗದಲ್ಲಿ ಬೇಡಿಕೆಯಿದೆ. ಇತ್ತೀಚಿಗಷ್ಟೆ ನಟಿ ಆ್ಯಮಿ ಜಾಕ್ಸನ್ ಮಾಜಿ ಬಾಯ್ ಫ್ರೆಂಡ್ ನಿಂದ ದೂರವಾಗಿದ್ದರು. ಇದೀಗ ಹೊಸ ಬಾಯ್ ಫ್ರೆಂಡ್ ನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಅಮಿ ಜಾಕ್ಸನ್ ಜೀವನದಲ್ಲಿ ಎಲ್ಲವೂ ಅತ್ಯಂತ ಶೀಘ್ರವಾಗಿ ನಡೆದು ಹೋಗುತ್ತಿರುತ್ತವೆ. ಆಕೆ ಸಿನೆಮಾಗಳ ಜೊತೆಗೆ ವೈಯುಕ್ತಿಕ ಜೀವನದ ವಿಚಾರದಲ್ಲೂ ಸಹ ಸುದ್ದಿಯಾಗಿದ್ದರು. ಮದುವೆಗೂ ಮುಂಚೆಯೇ ಈಕೆ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಆಕೆ ತನ್ನ ಹೊಸ ಬಾಯ್ ಫ್ರೆಂಡ್ ನನ್ನು ಪರಿಚಯಿಸಿದ್ದಾರೆ.

ಆ್ಯಮಿ ಜಾಕ್ಸನ್ ತೆಲುಗು ಸೇರಿದಂತೆ ಹಿಂದಿ, ತಮಿಳು ಸಿನಿರಂಗದಲ್ಲೂ ಸಹ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇನ್ನೂ ತನ್ನ ಕೆರಿಯರ್‍ ಯಶಸ್ವಿಯಾಗಿ ಸಾಗುತ್ತಿದ್ದ ಸಮಯದಲ್ಲೇ ಆಕೆ ದೊಡ್ಡ ಉದ್ಯಮಿ ಜಾರ್ಜ್ ಪನಿಯಾಟೌತ್ ಎಂಬಾತನೊಂದಿಗೆ ಎಫೈರ್‍ ಇಟ್ಟುಕೊಂಡಿದ್ದರು. ಸುಮಾರು ದಿನಗಳ ಕಾಲ ಡೇಟಿಂಗ್ ಮಾಡಿದರು. ಜೊತೆಗೆ ಒಂದು ಮಗುವಿಗೂ ಸಹ ಜನ್ಮ ನೀಡಿದರು. ಲಂಡನ್ ಮೂಲದ ಉದ್ಯಮಿ ಜಾರ್ಜ್ ಜೊತೆಗೆ ಕೆಲವು ದಿನಗಳ ಕಾಲ ಡೇಟಿಂಗ್ ನಡೆಸಿ ಮದುವೆಗೂ ಮುಂಚೆ ಮಗುವನ್ನು ಹೆತ್ತರು. ಈಗಲೂ ಸಹ ಅಮಿ ಜಾಕ್ಸನ್ ತನ್ನ ಮಗನೊಂದಿಗೆ ಪೊಟೋಗಳನ್ನು ಶೇರ್‍ ಮಾಡುತ್ತಲೇ ಇರುತ್ತಾರೆ. ಜಾರ್ಜ್ ನೊಂದಿಗೆ ಬೇರೆಯಾದ ಬಳಿಕ ಅಮಿ ಜಾಕ್ಸನ್ ಕೆಲವು ದಿನಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದರು. ಇದೀಗ ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗಿದೆ.

ಸದ್ಯ ಅಮಿ ಜಾಕ್ಸನ್ ಬ್ರೀಟಿಷ್ ನಟ ಎಡ್ ವೆಸ್ವಿಕ್ ಎಂಬಾತನೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಈ ಹಿಂದೆ ಅಮಿ ಜಾಕ್ಸನ್ ಈ ಬಗ್ಗೆ ಸೀಕ್ರೇಟ್ ಆಗಿಯೇ ಇದ್ದರು. ಇದೀಗ ಆಕೆ ಪ್ರೇಮಿಗಳ ದಿನಂದು ಹೊಸ ಪ್ರಿಯಕರನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಸಾಮಾನ್ಯವಾಗಿ ಪರಿಚಯಿಸಿದ್ದರೇ ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲವೇನೋ ಇಬ್ಬರೂ ನಾಲಿಗೆಯಿಂದ ಮುದ್ದಾಡುತ್ತಿರುವ ಪೊಟೋ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳನ್ನು ಅಮಿ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈಲ್ಡ್ ರೊಮ್ಯಾನ್ಸ್ ಮಾಡುವಂತಹ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಅಸಭ್ಯಕರವಾದ ರೊಮ್ಯಾನ್ಸ್ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ಅಮಿ ಜಾಕ್ಸನ್ ಗೆ ಇದೇನು ಹೊಸತಲ್ಲ. ಆಕೆ ಅನೇಕ ಬಾರಿ ತನ್ನ ಸೋಷಿಯಲ್ ಮಿಡಿಯಾದಲ್ಲಿ ಸೆಮಿ ನ್ಯೂಡ್ ಪೊಟೋಗಳನ್ನು ಸಹ ಹಂಚಿಕೊಂಡಿದ್ದರು. ನಟಿ ಅಮಿ ಜಾಕ್ಸನ್ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಿ ಆದರೂ ಸಹ ಆಕೆಗೆ ತುಂಬಾನೆ ಕ್ರೇಜ್ ಇದೆ. ರಜನಿಕಾಂತ್ ಜೊತೆಗೆ ರೊಬೋ 2.o, ವಿಕ್ರಂ ಚಿಯಾನ್ ಜೊತೆಗೆ  ಐ, ರಾಮ್ ಚರಣ್ ಜೊತೆ ಎವಡು ಸಿನೆಮಾಗಳಲ್ಲಿ ನಟಿಸಿದ್ದರು. ರೊಬೋ 2.o ಸಿನೆಮಾದ ಬಳಿಕ ಅಮಿ ಜಾಕ್ಸನ್ ಸಿನೆಮಾಗಲಿಂದ ದೂರವೇ ಉಳಿದರು. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಆಕ್ಟೀವ್ ಆಗಿದ್ದು, ಹಾಟ್ ಪೊಟೋಶೂಟ್ಸ್ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.