ಹಾಲಿವುಡ್-ಬಾಲಿವುಡ್ ನಟಿಯರಂತೆ ಮಂಚು ಲಕ್ಷ್ಮೀ ಪೊಟೋಶೂಟ್ಸ್, ಮಂಚು ಲಕ್ಷ್ಮೀ ತಗ್ಗದೇ ಲೇ ಎನ್ನುತ್ತಿದ್ದಾರೆ…!

ನಟಿ ಮಂಚು ಲಕ್ಷ್ಮೀ ನಲವತ್ತರ ವಯಸ್ಸಿನಲ್ಲೂ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನಲ್ಲಿನ ಗ್ಲಾಮರ್‍ ಎಂಬ ಅಂಗವನ್ನು ಇದೀಗ ಶೋ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಸಿಕೊಂಡು ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್…

ನಟಿ ಮಂಚು ಲಕ್ಷ್ಮೀ ನಲವತ್ತರ ವಯಸ್ಸಿನಲ್ಲೂ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನಲ್ಲಿನ ಗ್ಲಾಮರ್‍ ಎಂಬ ಅಂಗವನ್ನು ಇದೀಗ ಶೋ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಸಿಕೊಂಡು ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್ ಹಾಗೂ ಬಾಲಿವುಡ್ ನಟಿಯರಂತೆ ಗ್ಲಾಮರಸ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಮಂಚು ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ನಟಿ ಮಂಚು ಲಕ್ಷ್ಮೀ ಅಗ್ನಿ ನಕ್ಷತ್ರಂ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನೆಮಾ ಶೂಟಿಂಗ್ ಮುಗಿಸಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಇನ್ನೂ ಈ ಸಿನೆಮಾದಲ್ಲಿ ಮಂಚು ಲಕ್ಷ್ಮೀ ಲುಕ್ಸ್ ಎಲ್ಲರನ್ನೂ ಆಕರ್ಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದ ಜೊತೆಗೆ ಕೆಲವೊಂದು ವೆನ್ ಸಿರೀಸ್ ನಲ್ಲೂ ಸಹ ನಟಿಸುತ್ತಿದ್ದಾರೆ. ಇನ್ನೂ ಲಕ್ಷ್ಮೀ ಇದೀಗ ಪ್ರಿಂಟೆಡ್ ಹಾಟ್ ಟ್ರೆಂಡಿವೇರ್‍ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದೆ ತಡ ಎಲ್ಲಾ ಕಡೆ ವೈರಲ್ ಆಗುತ್ತಿವೆ. ಆಕೆಯ ಪೊಟೋಗಳಿಗೆ ನೆಟ್ಟಿಗರು ವಿಮರ್ಶೆಗಳನ್ನು ಸಹ ಮಾಡಿದ್ದಾರೆ. ನಿಮ್ಮ ವಯಸ್ಸಿಗೆ ತಕ್ಕಂತೆ ಬಟ್ಟೆಗಳನ್ನು ಧರಿಸಿ ಎಂದರೇ , ಮತ್ತೊಬ್ಬರು ಮುದುಕಿಯಂತೆ ಕಾಣಿಸುತ್ತೀದಿಯಾ ಎಂದು ಟ್ರೋಲ್ ಮಾಡಿದ್ದಾರೆ. ಆಕೆಯ ಪೊಟೋಗಳು ಎಷ್ಟು ಮಟ್ಟಿಗೆ ವೈರಲ್ ಆಗುತ್ತಿವೆಯೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿವೆ.

ತೆಲುಗಿನ ಖ್ಯಾತ ನಟ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಮಂಚು ಲಕ್ಷ್ಮೀ ಆತ್ಮಸ್ಥೈರ್ಯಕ್ಕೆ ಬ್ರಾಂಡ್ ಅಂಬಾಸಿಡರ್‍ ಎಂದೇ ಹೇಳಬಹುದು. ಆಕೆಯ ಬಗ್ಗೆ ಎಷ್ಟೇ ವಿಮರ್ಶೆಗಳು ಎದುರಾದರೂ ಸಹ ತನ್ನ ಕೆಲಸ ತನ್ನದು ಎಂದು ಸಾಗುತ್ತಿದ್ದಾರೆ. ಜೊತೆಗೆ ಆಕೆ ಏನೇ ಮಾಡಿದರೂ ಟ್ರೋಲರ್‍ ಗಳು ಟ್ರೋಲ್ ಮಾಡಲು ಕಾಯುತ್ತಾ ಇರುತ್ತಾರೆ. ಕೇವಲ ಮಂಚು ಲಕ್ಷ್ಮೀ ಮಾತ್ರವಲ್ಲದೇ ಮಂಚು ಫ್ಯಾಮಿಲಿಯನ್ನು ಟ್ರೋಲ್ ಮಾಡಲು ಪ್ರತ್ಯೇಕವಾಗಿ ಮೀಮ್ ಪೇಜಸ್ ಹಾಗೂ ಯ್ಯೂಟೂಬ್ ಚಾನಲ್ ಗಳ ಇದೆ ಎನ್ನಲಾಗಿದೆ.

ಇನ್ನೂ ಈ ಹಿಂದೆ ಟ್ರೋಲರ್‍ ಗಳ ಬಗ್ಗೆ ಮಂಚು ಲಕ್ಷ್ಮೀ ಮಾತನಾಡುತ್ತಾ ಕೆಲಸ ಇಲ್ಲದವರು ಏನೋ ಹೇಳಿದರೆಂದು ನಮ್ಮ ಪ್ರಯತ್ನಗಳನ್ನು ನಿಲ್ಲಿಸಬಾರದು. ಬೇರೆಯವರು ಮಾಡಿದ ಕಾಮೆಂಟ್ ಗಳನ್ನು ತಲೆಗೆ ಹಾಕಿಕೊಂಡರೇ ಜೀವನದಲ್ಲಿ ಏನು ಸಾಧಿಸಲು ಸಾಧಿಸಲು ಆಗುವುದಿಲ್ಲ ಎಂದು ಹೇಳಿದ್ದರು. ಲಕ್ಷ್ಮೀ ಎಷ್ಟು ಸಿನೆಮಾಗಳಲ್ಲಿ ನಟಿಸಿದರೂ ಯಾವುದೇ ಸಿನೆಮಾ ಬ್ರೇಕ್ ನೀಡಲಿಲ್ಲ ಎಂದು ಹೇಳಬಹುದಾಗಿದೆ. ಆದರೂ ಸಹ ಆಕೆ ತನ್ನ ಪ್ರಯತ್ನಗಳನ್ನು ಮಾತ್ರ ಬಿಡದೇ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.