ಅಭಿಮಾನಿಯೊಂದಿಗೆ ನಡೆದು ಕೊಂಡ ರೀತಿಗೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾದ ಸ್ಟಾರ್ ನಟಿ ಮಂಜು ವಾರಿಯರ್, ಅಭಿಮಾನಿಗೆ ಸರ್ಪೈಸ್ ಕೊಟ್ಟ ನಟಿ…..!

Follow Us :

ಸಿನಿರಂಗದ ಸೆಲೆಬ್ರೆಟಿಗಳು ಆಗಾಗ ಮಾಡುವಂತಹ ಕೆಲವೊಂದು ಕೆಲಸಗಳ ಕಾರಣದಿಂದ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಮಲಯಾಳಂ ನಟಿ ಕಂ ಗಾಯಕಿ ಮಂಜು ವಾರಿಯರ್‍ ಸಹ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತನ್ನ ಕಾರನ್ನು ಹಿಂಬಾಲಿಸಿಕೊಂಡು ಬಂದ ಅಭಿಮಾನಿಗೆ ಆಕೆ ಸರ್ಪೈಸ್ ನೀಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ ಜೊತೆಗೆ ಎಲ್ಲರೂ ಆಕೆ ಮಾಡಿದ ಕೆಲಸಕ್ಕೆ ಫಿದಾ ಆಗಿದ್ದಾರೆ.

ಸ್ಟಾರ್‍ ನಟಿ ಮಂಜು ವಾರಿಯರ್‍ ಕೇರಳದ ಎರ್ನಾಕುಲಂ ನಲ್ಲಿ ನಡೆದ ಈವೆಂಟ್ ಒಂದಕ್ಕೆ ಹೋಗುತ್ತಿದ್ದರು. ಈ ವೇಳೆ ಆಕೆಯೊಂದಿಗೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು. ಅಭಿಮಾನಿಗಳೊಂದಿಗೆ ಸೆಲ್ಫಿಗಳನ್ನು ಕೊಟ್ಟು ಹೋಗುತ್ತಿರುವಾಗ ಆಕೆಯಿದ್ದ ಕಾರನ್ನು ಒರ್ವ ಮಹಿಳಾ ಅಭಿಮಾನಿ ಹಿಂಬಾಲಿಸಿದ್ದಾರೆ. ಅದನ್ನು ಮಂಜು ವಾರಿಯರ್‍ ಸಹ ಗಮನಿಸಿದ್ದಾರೆ. ಆದರೆ ಅಲ್ಲಿ ಭಾರಿ ಟ್ರಾಫಿಕ್ ಇರುವ ಕಾರಣ ಅಲ್ಲಿ ಕಾರನ್ನು ನಿಲ್ಲಿಸಲಾಗದೇ ಮುಂದೆ ಹೋಗಿದ್ದಾರೆ. ಆದರೂ ಸಹ ಆ ಅಭಿಮಾನಿ ಆಕೆಯನ್ನು ಹಿಂಬಾಲಿಸಿಕೊಂಡು ಓಡುತ್ತಾ ಸಾಗಿದ್ದಾರೆ. ಕೂಡಲೇ ಡ್ರೈವರ್‍ ಗೆ ಕಾರು ನಿಲ್ಲಿಸಲು ಹೇಳಿದ ಮಂಜು ವಾರಿಯರ್‍ ಅಭಿಮಾನಿಯನ್ನು ಕಾರಿನ ಡೋರ್‍ ಬಳಿ ಬರಲು ಹೇಳಿದ್ದಾರೆ. ಬಳಿಕ ಮಂಜು ವಾರಿಯರ್‍ ಗೆ ಆ ಹುಡುಗಿ ಹೇಳಿದ ಮಾತನ್ನು ಕೇಳಿ ತುಂಬಾ ಸಂತಸ ಗೊಂಡಿದ್ದಾರೆ. ಬಳಿಕ ಮಂಜು ವಾರಿಯರ್‍ ರನ್ನು ಸಂತೋಷ ಗೊಳಿಸಿದ ಆ ಸಂಗತಿ ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ಮಂಜು ವಾರಿಯರ್‍ ರವರನ್ನೇ ಸಂತೋಷ ಪಡಿಸಿದ ಆ ವಿಚಾರ ಏನು ಎಂದು ಅಭಿಮಾನಿಯನ್ನು ಮಿಡಿಯಾದವರು ಕೇಳಿದ್ದಾರೆ. ಆ ಹುಡುಗಿಯ ತಾಯಿ ಮಂಜು ವಾರಿಯರ್‍ ರವರಿಗೆ ದೊಡ್ಡ ಅಭಿಮಾನಿಯಂತೆ. ಎರಡು ನಿಮಿಷಗಳ ಕಾಲ ಆ ಯುವತಿ ಮಂಜು ವಾರಿಯರ್‍ ಜೊತೆ ಮಾತನಾಡಿದರಂತೆ. ಇನ್ನೂ ಆ ಯುವತಿಯ ತಾಯಿಯ ಹುಟ್ಟುಹಬ್ಬವು ಆದ್ದರಿಂದ, ತನ್ನ ತಾಯಿ ಅಭಿಮಾನಿಸುವ ನಟಿ ಮಂಜು ವಾರಿಯರ್‍ ತನ್ನ ತಾಯಿಗೆ ಶುಭಾಷಯಗಳನ್ನು ತಿಳಿಸುವಂತೆ ಕೋರಿದ್ದಾರಂತೆ. ಅದು ನನ್ನ ತಾಯಿಗೆ ನೀಡುವಂತಹ ದೊಡ್ಡ ಬಹುಮಾನ ಎಂದು ಆ ಯುವತಿ ಹೇಳಿದ್ದರಂತೆ. ಬಳಿಕ ಆ ಯುವತಿಯ ನಂಬರ್‍ ತನ್ನ ಅಸಿಸ್ಟೆಂಟ್ ಗೆ ತೆಗೆದುಕೊಳ್ಳುವಂತೆ ಮಂಜು ತಿಳಿಸಿದ್ದಾರೆ. ಜೊತೆಗೆ ನಿನ್ನ ತಾಯಿಯೊಂದಿಗೆ ತಪ್ಪದೇ ಮಾತನಾಡುತ್ತೇನೆ ಎಂದು ಮಂಜು ವಾರಿಯರ್‍ ಭರವಸೆ ಸಹ ನೀಡಿದ್ದರಂತೆ. ಇದರಿಂದ ಮಂಜು ವಾರಿಯರ್‍ ಹಾಗೂ ಆ ಯುವತಿ ಇಬ್ಬರೂ ಪುಲ್ ಖುಷಿಯಾಗಿದ್ದಾರಂತೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಮಂಜು ವಾರಿಯರ್‍ ಇತ್ತಿಚಿಗೆ ಸಿನೆಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಇತ್ತೀಚಿಗಷ್ಟೆ ಆಕೆ ಅಜಿತ್ ಜೊತೆಗೆ ತುನಿವು ಎಂಬ ಸಿನೆಮಾದಲ್ಲಿ ನಟಿಸಿದ್ದರು. ತಾನು ನಟಿಸುವ ಪಾತ್ರ ನನ್ನ ಜೊತೆಗೆ ನನ್ನ ಅಭಿಮಾನಿಗಳನ್ನು ರಂಜಿಸಬೇಕು. ಅಂತಹ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತೇನೆ ಎಂದು ಮಂಜು ವಾರಿಯ್ ಕೆಲವೊಂದು ಸಂದರ್ಶನದಲ್ಲಿ ಹೇಳಿದ್ದಾರೆ.