ಡಿಜೆ ಟಿಲ್ಲು ಫೇಂ ಸಿದ್ದು ಸಂಚಲನಾತ್ಮಕ ಕಾಮೆಂಟ್ಸ್, ಆ ನಿರ್ದೇಶಕನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದೀನಿ ಎಂದ ನಟ….!

ಡಿಜೆ ಟಿಲ್ಲು ಸಿನೆಮಾದ ಮೂಲಕ ಓವರ್‍ ನೈಟ್ ಭಾರಿ ಫೇಂ ಪಡೆದುಕೊಂಡ ಸಿದ್ದು ಜೊನ್ನಲಗಡ್ಡ ಇದೀಗ  ಡಿಜೆ ಟಿಲ್ಲು ಸೀಕ್ವೆಲ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಕಡಿಮೆ ಬಜೆಟ್ ನಲ್ಲಿ ಸಾಮಾನ್ಯ ವಾಗಿ ತೆರೆಗೆ…

ಡಿಜೆ ಟಿಲ್ಲು ಸಿನೆಮಾದ ಮೂಲಕ ಓವರ್‍ ನೈಟ್ ಭಾರಿ ಫೇಂ ಪಡೆದುಕೊಂಡ ಸಿದ್ದು ಜೊನ್ನಲಗಡ್ಡ ಇದೀಗ  ಡಿಜೆ ಟಿಲ್ಲು ಸೀಕ್ವೆಲ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಕಡಿಮೆ ಬಜೆಟ್ ನಲ್ಲಿ ಸಾಮಾನ್ಯ ವಾಗಿ ತೆರೆಗೆ ಬಂದ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ಸಿನೆಮಾಗೆ ಸೀಕ್ವೆಲ್ ಆಗಿ ಟಿಲ್ಲು ಸ್ಕ್ವೇರ್‍ ಎಂಬ ಟೈಟಲ್ ನಡಿ ಸಿನೆಮಾ ಅನೌನ್ಸ್ ಮಾಡಲಾಗಿದೆ. ಇದೀಗ ಸಿದ್ದು ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವು ವೈರಲ್ ಆಗುತ್ತಿವೆ.

ಇನ್ನೂ ಡಿಜೆ ಟಿಲ್ಲು ಸೀಕ್ವೆಲ್ ಅನೌನ್ಸ್ ಆದ ಬಳಿಕ ಅನೇಕ ವಿವಾದಗಳೂ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಡಿಜೆ ಟಿಲ್ಲು ಸಿನೆಮಾವನ್ನು ವಿಮಲ್ ಕೃಷ್ಣ ಎಂಬ ನಿರ್ದೇಶಕರು ತೆರೆಗೆ ತಂದಿದ್ದರು. ಆದರೆ ಇದರ ಸೀಕ್ವೆಲ್ ಬೇರೆ ನಿರ್ದೇಶಕರು ತೆರೆಗೆ ತರಲಿದ್ದಾರೆ. ಮಾಲೀಕ್ ರಾಮ್ ಎಂಬಾತ ಈ ಸಿನೆಮಾ ಸೀಕ್ವೆಲ್ ನಿರ್ದೇಶನ ಮಾಡಲಿದ್ದಾರೆ. ಈ ಕಾರಣದಿಂದ ಸಿದ್ದು ಹಾಗೂ ವಿಮಲ್ ಕೃಷ್ಣ ನಡುವೆ ವಿಬೇದಗಳು ಸೃಷ್ಟಿಯಾಗಿದೆ ಎಂಬ ರೂಮರ್‍ ಗಳು ಹರಿದಾಡಲು ಶುರುವಾಗಿದೆ. ಜೊತೆಗೆ  ಈ ಸಿನೆಮಾದ ಹಿರೋಯಿನ್ ವಿಚಾರದಲ್ಲಿ ಸಹ ಅನೇಕ ರೂಮರ್‍ ಗಳು ಹರಿದಾಡಿದವು. ಅನೇಕ ನಟಿಯರ ಹೆಸರುಗಳು ಕೇಳಿಬಂದವು. ಕೊನೆಯದಾಗಿ ಅನುಪಮ ಪರಮೇಶ್ವರ್‍ ರವರನ್ನು ಫೈನಲ್ ಮಾಡಲಾಗಿತ್ತು. ಬಳಿಕ ಸಿದ್ದು ಜೊತೆಗೆ ಗಲಾಟೆಯಾದ ಕಾರಣದಿಂದ ಆಕೆ ಸಹ ಈ ಸಿನೆಮಾದಿಂದ ದೂರವಾದರು ಎಂದು ಹೇಳಲಾಗಿತ್ತು. ಇದೀಗ ಈ ಎಲ್ಲಾ ರೂಮರ್‍ ಗಳ ಬಗ್ಗೆ ಸಿದ್ದು ಕ್ಲಾರಿಟಿ ಕೊಟ್ಟಿದ್ದಾರೆ.

ಇತ್ತಿಚಿಗೆ ನಡೆದ ಸಂದರ್ಶನದಲ್ಲಿ ಸಿದ್ದು ರವರಿಗೆ ವಿಮಲ್ ಕೃಷ್ಣ ಜೊತೆಗಿನ ವಿಬೇದಗಳ ಬಗ್ಗೆ ಕೇಳಲಾಗಿದ್ದು, ಸಂದರ್ಶನದಲ್ಲಿ ಲೈವ್ ನಲ್ಲಿಯೇ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಮ್ಮ ನಡುವೆ ಯಾವುದೇ ವಿಬೇದಗಳು ಇಲ್ಲ ಎಂದು ಹೇಳಿದರು. ಜೊತೆಗೆ ಅನುಪಮ ಪರಮೇಶ್ವರನ್ ಜೊತೆಗೆ ವಿವಾದದ ಬಗ್ಗೆ ಸಹ ಮಾತನಾಡಿದ್ದಾರೆ. ಮೊದಲಿಗೆ ಈ ಸಿನೆಮಾದಲ್ಲಿ ಫೀಮೇಲ್ ಲೀಡ್ ಗಾಗಿ ಆಕೆಯನ್ನೇ ಸಂಪರ್ಕ ಮಾಡಲಾಗಿತ್ತು ಎಂದರು. ಜೊತೆಗೆ ಟಿಲ್ಲು ಸ್ಕೇರ್‍ ನಿರ್ದೇಶಕ ಮಾಲೀಕ್ ರಾಮ್ ಬಗ್ಗೆ ಫನ್ನಿಯಾಗಿ ಕಾಮೆಂಟ್ ಸಹ ಮಾಡಿದ್ದಾರೆ. ಸದ್ಯ ನಾನು ಮಾಲಿಕ್ ರಾಮ್ ಜೊತೆಗೆ ರಿಲೇಷನ್ ನಲ್ಲಿದ್ದೀನಿ, ಆತ ನಮ್ಮ ಮನೆಯಲ್ಲಿಯೇ ಇರುತ್ತೇನೆ. ತಿನ್ನೊಂದು ಮಲಗೋದು ಎಲ್ಲಾ ನಮ್ಮ ಮನೆಯಲ್ಲಿಯೇ. ಆತನಿಗೆ ಬೆಡ್ ಶೀಟ್ ಸಹ ನಾನೇ ಹೊದಿಸುತ್ತೇನೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ  ಕೃಷ್ಣ ಅಂಡ್ ಹಿಸ್ ಲೀಲಾ ಡೈರೆಕ್ಟರ್‍ ರವಿಕಾಂತ್ ಗೆ ನಾನು ಕಿಸ್ ಸಹ ಮಾಡಿದ್ದೇನೆ ಎಂದು ಫನ್ನಿಯಾಗಿ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ಸಿದ್ದು ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಡಿಜೆ ಟಿಲ್ಲು ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಸಿದ್ದು, ಅದರ ಸೀಕ್ವೆಲ್ ನಲ್ಲಿ ಯಾವ ರೀತಿಯಲ್ಲಿ ಫೇಂ ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.