ನನ್ನ ಜೀವನ ನಾಶವಾಗಲು ಆತನೇ ಕಾರಣ ಎಂದ ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡೀಸ್….!

Follow Us :

ಇತ್ತೀಚಿಗೆ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದ ಪ್ರಕರಣಗಳಲ್ಲಿ ಸುಕೇಶ್ ಮನಿ ಲಾಂಡರಿಂಗ್ ಪ್ರಕರಣ ಒಂದಾಗಿದೆ. ಈ ಪ್ರಕರಣದಲ್ಲಿ ಹಲವು ನಟಿಯರು ಭಾಗಿಯಾಗಿದ್ದಾರೆ ಎಂಬ ಆರೋಪಗಳಿದ್ದು, ಆತನೊಂದಿಗೆ ಟಚ್ ನಲ್ಲಿರುವ ಬಾಲಿವುಡ್ ಹಿರೋಯಿನ್ ಗಳು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳು ಈಗಾಗಲೇ ಆಕೆಯನ್ನು ಕೆಲವು ಬಾರಿ ವಿಚಾರಣೆ ಸಹ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಆಕೆ ತನ್ನ ಜೀವನ ನಾಶನವಾಗಲು ಸುಖೇಶ್ ಕಾರಣ ಎಂದು ಎಮೋಷನಲ್ ಆಗಿದ್ದಾರೆ.

ಸುಖೇಶ್ ಎಂಬಾತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಸದ್ಯ ಆತ ಕಂಬಿ ಎಣಿಸುತ್ತಿದ್ದಾರೆ. ಆತನನ್ನು ಬಂಧಿಸಿರುವ ಪೊಲೀಸರು ತೀವ್ರವಾಗಿ ವಿಚರಣೆ ನಡೆಸುತ್ತಿದ್ದಾರೆ. ಜೊತೆಗೆ ಆತನೊಂದಿಗೆ ಸಂಬಂಧ ಇರುವಂತಹ ಎಲ್ಲರನ್ನೂ ಸಹ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡೀಸ್ ಸಹ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆರೋಪಿ ಸುಖೇಶ್ ನಿಂದ ದುಬಾರಿ ಬೆಲೆಯ ಬಹುಮಾನಗಳನ್ನು ಪಡೆದಿರುವ ಆರೋಪ ಜಾಕ್ವೆಲಿನ್ ಮೇಲಿದೆ. ಜೊತೆಗೆ ಆಕೆಯನ್ನು ಈ ಪ್ರಕರಣದಡಿ ಅರೆಸ್ಟ್ ಸಹ ಮಾಡಿದ್ದರು. ಬಳಿಕ ಆಕೆ ಬೈಯಲ್ ಪಡೆದುಕೊಂಡು ಹೊರಬಂದಿದ್ದಾರೆ. ಆದರೆ ಆಕೆ ವಿಚಾರಣೆಗೆ ಹಾಜರಾಗುತ್ತಲೇ ಇದ್ದಾರೆ. ಇದೀಗ ಆಕೆ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಎಮೋಷನಲ್ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ಜಾಕ್ವೆಲಿನ್ ಫರ್ನಾಂಡಿಸ್ ನ್ಯಾಯಲಯಕ್ಕೆ ನೀಡಿದ ಹೇಳಿಕೆಯಲ್ಲಿ ಎಮೋಷನಲ್ ಆಗಿದ್ದಾರೆ ಎನ್ನಲಾಗುತ್ತಿದೆ. ಸುಖೇಶ್ ಜೊತೆಗಿನ ರಿಲೇಷನ್ ಶಿಪ್ ಕಾರಣದಿಂದ ತನ್ನ ಜೀವನ ಸಂಪೂರ್ಣವಾಗಿ ನಾಶವಾಗಿದೆ. ಆತ ಮೋಸಗಾರ ಎಂದು ನನಗೆ ತಿಳಿದಿರಲಿಲ್ಲ. ಆತ ಮಾಡುವ ತಪ್ಪುಗಳನ್ನು ನಾನು ತಿಳಿದುಕೊಳ್ಳಲು ವಿಫಲವಾದೆ. ನನ್ನ ಜೀವನ ಸರ್ವನಾಶ ಆಗಲು ಸುಖೇಶ್ ಕಾರಣ. ನನ್ನ ಎಮೋಷನಲ್ ಫೀಲಿಂಗ್ ಜೊತೆಗೆ ಆತ ಆಟವಾಡಿದ್ದಾನೆ. ಜೊತೆಗೆ ಆತ ಸನ್ ಟಿ.ವಿ ಮುಖ್ಯಸ್ಥರ ಎಂತಲೂ, ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಆತನಿಗೆ ಸಂಬಂಧಿಕರೆಂದು ಪರಿಚಯ ಮಾಡಿಕೊಂಡಿದ್ದ. ಇನ್ನೂ ಆತನಿಂದ ನಾನು ಗಿಫ್ಟ್ ಗಳನ್ನು ಪಡೆದುಕೊಂಡಿದ್ದೇನೆ. ಸೌತ್ ಸಿನೆಮಾಗಳಲ್ಲಿ ನನಗೆ ಅವಕಾಶಗಳನ್ನು ಕೊಡಿಸುವುದಾಗಿಯೂ ಸಹ ಹೇಳಿದ್ದ ಎಂದು ಜಾಕ್ವೆಲಿನ್ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಜಾಕ್ವೆಲಿನ್ ಗೆ ಈ ವಿವಾದಗಳ ಕಾರಣದಿಂದ ಸಿನೆಮಾಗಳಲ್ಲಿನ ಅವಕಾಶಗಳೂ ಸಹ ಕಳೆದುಕೊಂಡರು ಎನ್ನಲಾಗುತ್ತಿದೆ. ಆಕೆ ಟಾಲಿವುಡ್ ಗೆ ಸಾಹೋ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಸಾಹೋ ಸಿನೆಮಾದಲ್ಲಿ ಜಾಕ್ವೆಲಿನ್ ಐಟಂ ಸಾಂಗ್ ಮೂಲಕ ತೆಲುಗು ಸಿನಿರಸಿಕರನ್ನು ತುಂಬಾನೆ ಆಕರ್ಷಣೆ ಮಾಡಿದರು. ವಿಕ್ರಾಂತ್ ರೋಣ ಸಿನೆಮಾದಲ್ಲಿ ರಾ ರಾ ರಕ್ಕಮ್ಮ ಹಾಡಿನಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಈ ಹಾಡು ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ವೈರಲ್ ಆಗಿತ್ತು. ಇನ್ನೂ ಈ ಹಾಡು ಸಹ ಕೇವಲ ಸಿನಿಮಾ ರಸಿಕರಿಗೆ ಮಾತ್ರವಲ್ಲದೇ ಅನೇಕ ನಟ ನಟಿಯರನ್ನೂ ಸಹ ಫಿದಾ ಮಾಡಿದೆ.