Film News

ಸಿಗರೇಟ್ ಸೇದುತ್ತಾ ವೇದಿಕೆಗೆ ಬಂದ ಸಲ್ಲು ಭಾಯ್, ಫೈರ್ ಆದ ನೆಟ್ಟಿಗರು…..!

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟ ಸಲ್ಮಾನ್ ಖಾನ್ ಸಿನೆಮಾಗಳು, ಕಿರುತೆರೆ ಪ್ರೋಗ್ರಾಂಗಳಲ್ಲಿ ಪುಲ್ ಬ್ಯುಸಿಯಾಗಿರುತ್ತಾರೆ. ಜೊತೆಗೆ ಆಗಾಗ ಕೆಲವೊಂದು ವಿವಾದಗಳ ಮೂಲಕ ಸಹ ಸುದ್ದಿಯಾಗುತ್ತಿರುತ್ತಾರೆ. ಆತ ಎಷ್ಟು ಬ್ಯುಸಿಯಾಗಿರುತ್ತಾರೋ ಅದೇ ರೀತಿ ವಿವಾದಗಳನ್ನು ಸಹ ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇದೀಗ ಸಲ್ಮಾನ್ ಖಾನ್ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ವೇದಿಕೆಗೆ ಸಿಗರೇಟ್ ಸೇದುತ್ತಾ ಬಂದಿದ್ದಾರೆ. ಇದನ್ನು ಕಂಡ ಅನೇಕರು ಆತನ ಕಾರ್ಯವೈಖರಿ ವಿರುದ್ದ ಕಿಡಿಕಾರುತ್ತಿದ್ದಾರೆ.

ಸ್ಟಾರ್‍ ನಟ ಸಲ್ಮಾನ್ ಖಾನ್ ದೇಶದ ಸಿನಿರಂಗದಲ್ಲಿ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಜೊತೆಗೆ ಅನೇಕ ವಿವಾದಗಳಲ್ಲಿ ಸಹ ಸಿಲುಕಿಕೊಳ್ಳುತ್ತಿರುತ್ತಾರೆ. ಈಗಾಗಲೇ ಸಲ್ಮಾನ್ ಖಾನ್ ಮಾಡಿದ ಕೆಲವೊಂದು ಕಾರಣಗಳಿಂದಾಗಿ ಉಗ್ರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅವರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಲಾರೆನ್ಸ್ ಬಿಷ್ಗೋಯಿ ಗ್ಯಾಂಗ್ ಸಲ್ಮಾನ್ ಖಾನ್ ರನ್ನು ಸಾಯಿಸುತ್ತೇವೆ ಎಂದು ಸಾರ್ವಜನಿಕವಾಗಿಯೇ ಘೋಷಣೆ ಮಾಡಿದ್ದಾರೆ. ಇದರಿಂದ ಸಲ್ಮಾನ್ ಖಾನ್ ಗೆ ಭಾರಿ ಭದ್ರತೆ ಸಹ ಒದಗಿಸಲಾಗಿದೆ. ಇದರ ಜೊತೆಗೆ ಖಾಸಗಿ ಭದ್ರತೆಯನ್ನು ಸಹ ಆತ ಮಾಡಿಕೊಂಡಿದ್ದಾರೆ. ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವಂತಹ ಸಲ್ಮಾನ್ ಖಾನ್ ಇದೀಗ ಮತ್ತೊಮ್ಮೆ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ಬಿಗ್ ಬಾಸ್ ಶೋ ಗೆ ಸಲ್ಲು ಭಾಯ್ ಖಾಯಂ ಹೋಸ್ಟ್ ಆಗಿದ್ದಾರೆ. ಇತ್ತೀಚಿಗಷ್ಟೆ ಬಿಗ್ ಬಾಸ್ ಒಟಿಟಿ ಸೆಕೆಂಡ್ ಸೀಜನ್ ಶುರುವಾಗಿದೆ. ಈ ಸೀಸನ್ ಶುರುವಾದಾಗಿನಿಂದ ಏನೋ ಒಂದು ರೀತಿಯ ವಿಮರ್ಶೆಗಳಿಗೆ ಕಾರಣವಾಗುತ್ತಲೇ ಇದೆ. ಈ ಶೋ ನಲ್ಲಿರುವ ಜೈದ್ ಹದೀದ್ ಹಾಗೂ ಆಕಾಂಕ್ಸ ಪೂರಿ ಜೊತೆಗೆ ಅಸಭ್ಯವಾಗಿ ವರ್ತನೆ ಹಾಗೂ ಅವರಿಬ್ಬರ ಲಿಪ್ ಕಿಸ್ ವೀಕ್ಷಕರ ಆಗ್ರಹಕ್ಕೆ ಗುರಿಯಾಗಿತ್ತು. ಇದೀಗ ಮತ್ತೊಂದು ಕಾರಣದಿಂದ ಈ ಶೋ ಸುದ್ದಿಯಾಗುತ್ತಿದೆ. ಸಲ್ಮಾನ್ ಖಾನ್ ಕಳೆದ ಜು.8 ರಂದು ಸ್ಪರ್ಧಾಳುಗಳ ಮುಂದೆ ಬಂದಿದ್ದರು. ಕಂಟೆಸ್ಟ್ ಗಳ ತಪ್ಪುಗಳ ಬಗ್ಗೆ ಕೌಂಟರ್‍ ಕೊಟ್ಟರು. ಈ ವೇಳೆ ಸಲ್ಮಾನ್ ಕೈಯಲ್ಲಿ ಸಿಗರೇಟ್ ಇದೆ. ಆದರೆ ಸಲ್ಲು ಭಾಯ್ ಇದನ್ನು ಬೇಕು ಅಂತಲೇ ಮಾಡಿದ್ರಾ ಅಥವಾ ಮರೆತು ಹಾಗೆ ಬಂದುಬಿಟ್ರ ಎಂಬುದು ತಿಳಿಯದು. ಆದರೆ ಈ ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಪೊಟೋ ಕಂಡ ನೆಟ್ಟಿಗರು ಸಲ್ಲು ವಿರುದ್ದ ಫೈರ್‍ ಆಗುತ್ತಿದ್ದಾರೆ. ಬಿಗ್ ಬಾಸ್ ಹೌಸ್ ನಲ್ಲಿರುವವರ ತಪ್ಪು ಗಳನ್ನು ತಿಳಿಸುವ ಮೊದಲು ನೀವು ಮಾಡಿದ್ದು ಏನು, ಮೊದಲು ನೀವು ಬದಲಾಗಿ ಎಂದು ಫೈರ್‍ ಆಗುತ್ತಿದ್ದಾರೆ. ಇನ್ನೂ ಈ ಬಗ್ಗೆ ಸಲ್ಮಾನ್ ಖಾನ್ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top