Film News

ನೀವು ಗೇ ಅಲ್ವಾ ಎಂದ ನೆಟ್ಟಿಗನಿಗೆ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್ ಕೊಟ್ಟ ಬಾಲಿವುಡ್ ಬಡಾ ನಿರ್ಮಾಪಕ ಕರಣ್ ಜೋಹರ್…..!

ಸಿನಿರಂಗದ ಸೆಲೆಬ್ರೆಟಿಗಳು ಸದಾ ಒಂದಲ್ಲ ಒಂದು ರೀತಿಯ ಸುದ್ದಿಗಳಿಗೆ ತುತ್ತಾಗುತ್ತಿರುತ್ತಾರೆ. ಇದೀಗ ಬಾಲಿವುಡ್‌ ನ ಸ್ಟಾರ್‍ ನಿರ್ಮಾಪಕ ಕರಣ್ ಜೋಹರ್‍ ಸಹ ಅನೇಕ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗುತ್ತಿರುತ್ತಾರೆ. ಕರಣ್ ಜೋಹಾರ್‍ ಗೆ ಮದುವೆಯಾಗಿಲ್ಲ. ಆದರೆ ಸೆರಗೋಸಿ ಪದ್ದತಿಯ ಮೂಲಕ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಇನ್ನೂ ಕರಣ್ ಏಕೆ ಮದುವೆಯಾಗಿಲ್ಲ ಕಾರಣವಾದರೂ ಏನು ಎಂಬ ಸಂದೇಹಗಳು ಅನೇಕರಲ್ಲಿವೆ. ಇದೀಗ ನೆಟ್ಟಿಗನೊರ್ವ ಕರಣ್ ಜೋಹರ್‍ ಗೆ ಪ್ರಶ್ನೆಯೊಂದನ್ನು ಕೇಳಿದ್ದು, ಅದಕ್ಕೆ ಕರಣ್ ಸಹ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್‍ ಕೊಟ್ಟಿದ್ದಾರೆ.

ನಟ ಕರಣ್ ಜೋಹಾರ್‍ ಸೆರಗೋಸಿ ಪದ್ದತಿಯ ಮೂಲಕ ಇಬ್ಬರೂ ಮಕ್ಕಳನ್ನು ಪಡೆದುಕೊಂಡಿದ್ದಾರೆ. ಮಗನ ಹೆಸರು ಯಶ್, ಮಗಳ ಹೆಸರು ರೂಹಿ ಎಂದು.  ಆದರೆ ಈ ಮಕ್ಕಳ ತಾಯಿ ಯಾರು ಎಂಬುದು ತಿಳಿಯದು. ಇನ್ನೂ ಕರಣ್ ಇನ್ನೂ ಮದುವೆಯಾಗಿಲ್ಲ. ಆತನ ಮದುವೆಯ ಬಗ್ಗೆ ಅನೇಕ ಕಾಮೆಂಟ್ ಗಳು ಸಹ ಕೇಳಿಬಂದಿತ್ತು. ಇನ್ನೂ ಕರಣ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಈ ಹಾದಿಯಲ್ಲೇ ಆತ ತನ್ನ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಿರ್ವಹಿಸಿದ್ದಾರೆ. ಈ ವೇಳೆ ನೆಟ್ಟಿಗನೋರ್ವ ಶಾಕಿಂಗ್ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ಕರಣ್ ಜೋಹರ್‍ ಕೋಪಗೊಳ್ಳದೇ ಕೂಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ.

ಕರಣ್ ಜೋಹಾರ್‍ ನಿರ್ವಹಿಸಿದ ಚಿಟ್ ಚಾಟ್ ನಲ್ಲಿ ಅಭಿಮಾನಿಗಳೊಂದಿಗೆ ಕೆಲ ಹೊತ್ತು ಮಾತು ಕತೆ ನಡೆಸಿದ್ದಾರೆ. ಈ ವೇಳೆ ನೆಟ್ಟಿಗನೋರ್ವ ಕರಣ್ ಗೆ ನೀವು ಗೇ ಅಲ್ಲವೇ ಎಂದು ಪ್ರಶ್ನೆ ಕೇಳಿದ್ದಾರೆ. ಇನ್ನೂ ಈ ಪ್ರಶ್ನೆ ಕೇಳಿದ ಕೂಡಲೇ ಕರಣ್ ಸಹ ನೆಟ್ಟಿಗನ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನೆಟ್ಟಿಗನ ಪ್ರಶ್ನೆಗೆ ಕೂಲ್ ಆಗಿಯೇ ಕರಣ್ ಉತ್ತರ ಕೊಟ್ಟಿದ್ದಾರೆ. ನೀವು ಗೇ ಅಲ್ಲವೇ ಎಂದ ನೆಟ್ಟಿಗನಿಗೆ ನಿನಗೆ ಇಂಟ್ರಸ್ಟ್ ಇದೆಯೇ ಎಂದು ಕೌಂಟರ್‍ ಕೊಟ್ಟಿದ್ದಾರೆ. ನಾನು ಗೇ ಅಲ್ಲ ಎಂದು ಹೇಳುವ ಬದಲಿಗೆ ನಿನಗೆ ಇಂಟ್ರಸ್ಟ್ ಇದೆಯಾ ಎಂದು ಉತ್ತರ ಕೊಟ್ಟಿದ್ದು, ಆ ನೆಟ್ಟಿಗನ ಮೈಂಡ್ ಬ್ಲಾಕ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಅಂತಹ ಪ್ರಶ್ನೆಗಳು ಎದುರಾದರೇ ಯಾರೂ ಸಹ ರಿಯಾಕ್ಟ್ ಆಗುವುದಿಲ್ಲ. ಆದರೆ ಕರಣ್ ಮಾತ್ರ ಈ ಪ್ರಶ್ನೆಗೆ ತನ್ನದೇ ಆದ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.

ಇನ್ನೂ ಕರಣ್ ಜೋಹಾರ್‍ ಬಾಲಿವುಡ್ ನಲ್ಲಿ ಭಾರಿ ಖ್ಯಾತಿ ಪಡೆದಿರುವ ಸೆಲೆಬ್ರೆಟಿ ಎಂದು ಹೇಳಬಹುದಾಗಿದೆ. ಜೊತೆಗೆ ಆತನಿಗೆ ಸೆನ್ಸ್ ಆಫ್ ಹ್ಯೂಮರ್‍ ಬಹಳಷ್ಟಿದೆ ಎಂದೂ ಸಹ ಹೇಳಲಾಗುತ್ತಿದೆ. ಧರ್ಮ ಪ್ರೊಡಕ್ಷನ್ ಹೆಸರಿನಲ್ಲಿ ಕರಣ್ ಅನೇಕ ಸಿನೆಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಬಾಹುಬಲಿ ಸಿನೆಮಾ ಬಾಲಿವುಡ್ ನಲ್ಲಿ ರಿಲೀಸ್ ಮಾಡಿದ್ದು ಇದೇ ಕರಣ್. ಇನ್ನೂ ಭಾರಿ ನಿರೀಕ್ಷೆಯಿಂದ ತೆರೆಗೆ ಬಂದಂತಹ ಬ್ರಹ್ಮಾಸ್ತ್ರ ಸಿನೆಮಾ ಸಹ ಕರಣ್ ನಿರ್ಮಾಣ ಮಾಡಿದ್ದರು. ಇದೀಗ ಬ್ರಹ್ಮಾಸ್ತ್ರ-2 ಶೂಟಿಂಗ್ ಶುರುವಾಗುತ್ತಾ ಅಥವಾ ನಷ್ಟಗಳ ಕಾರಣದಿಂದ ಕೈಬಿಟ್ರಾ ಎಂಬುದು ಇನ್ನೂ ತಿಳಿದುಬಂದಿಲ್ಲ.

Most Popular

To Top