Film News

ತನ್ನ ಮುದ್ದಿನ ಪತಿಗೆ ಆರು ಅಡಿ ಗಿಫ್ಟ್ ಕೊಟ್ಟ ವಿಜೆ ಮಹಾಲಕ್ಷೀ, ಪತ್ನಿಯ ಗಿಫ್ಟ್ ಗೆ ಖುಷಿಯಾದ ರವಿಂದರ್…..!

ತಮಿಳು ಸಿನಿರಂಗದ ಖ್ಯಾತ ನಿರ್ಮಾಪಕ ರವಿಂದರ್‍ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮೀ ಕಳೆದ ವರ್ಷ ಮದುವೆಯಾದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದರು.  ಸ್ಟಾರ್‍ ಸೆಲೆಬ್ರೆಟಿಗಳಿಗಿಂತಲೂ ಈ ಜೋಡಿಯ ಮದುವೆ ತುಂಬಾನೆ ಸದ್ದು ಮಾಡಿತ್ತು. ಮದುವೆಯಾದಾಗಿನಿಂತ ರವಿಂದರ್‍ ಹಾಗೂ ಮಹಾಲಕ್ಷ್ಮಿ ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರವಿಂದರ್‍ ಹುಟ್ಟುಹಬ್ಬಕ್ಕೆ ಮಹಾಲಕ್ಷ್ಮೀ ಮೆಮೋರಬಲ್ ಗಿಫ್ಟ್ ನೀಡಿದ್ದು, ಗಿಫ್ಟ್ ಪಡೆದುಕೊಂಡ ರವಿಂದರ್‍ ಪುಲ್ ಖುಷಿಯಾಗಿದ್ದಾರೆ.

ಮದುವೆಯಾದಾಗಿನಿಂದ ಈ ಜೋಡಿ ಟ್ರೋಲ್ ಆಗುತ್ತಲೇ ಇದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಮೊದಲಿಗೆ ಮಹಾಲಕ್ಷ್ಮೀ ಸಹ ತಮ್ಮನ್ನ ಟ್ರೋಲ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಸಹ ಟ್ರೋಲ್ ಗಳು ನಿಲ್ಲದ ಕಾರಣ ಯಾವ ಟ್ರೋಲ್ ಗಳನ್ನು ಸಹ ಕಿವಿಗೆ ಹಾಕಿಕೊಳ್ಳದೇ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ಇನ್ನೂ ನಿರ್ಮಾಪಕ ರವಿಂದರ್‍ ಚಂದ್ರಶೇಖರ್‍ ಆಗಾಗ ತನ್ನ ಮಡದಿಯನ್ನು ಹೊಗಳುತ್ತಾ ಕೆಲವೊಂದು ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರವಿಂದರ್‍ ಹುಟ್ಟುಹಬ್ಬಕ್ಕೆ ಮಹಾಲಕ್ಷ್ಮೀ ಪ್ರೀತಿಯ ಉಡುಗೊರೆ ಕೊಟ್ಟಿದ್ದು, ಈ ಸಂಬಂಧ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಜೂ.9 ರಂದು ನಿರ್ಮಾಪಕ ರವಿಂದರ್‍ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಮಹಾಲಕ್ಷ್ಮೀ ತನ್ನ ಪ್ರೀತಿಯ ಪತಿಗೆ ಗ್ರಾಂಡ್ ಪಾರ್ಟಿ ಕೊಡುವುದರ ಜೊತೆಗೆ ಗಿಫ್ಟ್ ಕೊಟ್ಟಿದ್ದಾರೆ. ಕುಟುಂಬಸ್ಥರೊಂದಿಗೆ ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬ ನೆನಪಿನಲ್ಲಿರುವಂತೆ ಮಹಾಲಕ್ಷ್ಮೀ ಆರು ಅಡಿ ಪೊಟೊ ಫ್ರೇಂ ಉಡುಗೊರೆ ನೀಡಿದ್ದಾರೆ. ಮಹಾಲಕ್ಷ್ಮೀ ಆರು ಅಡಿಯುಳ್ಳ ರವಿಂದರ್‍ ಪೊಟೋ ಫ್ರೇಂ ನೀಡಿದ್ದು, ರವಿಂದರ್‍ ಥ್ರಿಲ್ ಆಗಿದ್ದಾರೆ. ಮಹಾಲಕ್ಷ್ಮೀ ಸ್ವತಃ ಈ ಪೊಟೋ ಫ್ರೇಂ ಮಾಡಿಸಿದ್ದಾರಂತೆ. ಇನ್ನೂ ಈ ಪೊಟೋ ಫ್ರೇಂ ಕೊಟ್ಟ ಪತ್ನಿಗೆ ರವಿಂದರ್‍ ಕೃತಜ್ಞತೆ ತಿಳಿಸಿದ್ದಾರೆ. ಇನ್ನೂ ಈ ಪೊಟೋ ಹಂಚಿಕೊಂಡ ಮಹಾಲಕ್ಷ್ಮೀ ಸಹ ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನನ್ನ ಹಿಂದೆ ಇದ್ದು, ನನ್ನಲ್ಲಿ ಮತ್ತೆ ಧೈರ್ಯ ತುಂಬಿದ ನಿಮಗೆ ಹುಟ್ಟುಹಬ್ಬದ ಶುಭಾಷಯಗಳು, ನಿಮ್ಮನ್ನು ಮತಷ್ಟು ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ,

ಇನ್ನೂ ಈ ಪೋಸ್ಟ್ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಶುಭಾಷಯಗಳನ್ನು ಕೋರುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‍ ಮಾಹೆಯಲ್ಲಿ ರವಿಂಧರ್‍ ಹಾಗೂ ಮಹಾಲಕ್ಷ್ಮೀ ಮದುವೆ ತಿರುಪತಿಯಲ್ಲಿ ನಡೆದಿತ್ತು. ಮದುವೆಯಾದಾಗಿನಿಂದ ಈ ಜೋಡಿ ಸಂತೋಷದಿಂದ ಟ್ರೋಲ್ ಗಳಿಗೆ ಕಿವಿಗೊಡದೇ ಜೀವನ ಸಾಗಿಸುತ್ತಿದ್ದಾರೆ.

Most Popular

To Top